* ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಆಸ್ವಾದಿಸಲು ವಿಸ್ಟಾಡೋಮ್ ರೈಲು ಸಂಚಾರ ಆರಂಭ
* ವಿಸ್ಟಾಡೋಮ್ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿಸಿದ ಕಟೀಲ್
* ಕರ್ನಾಟಕದಲ್ಲಿ ಮಾತ್ರ ಎರಡು ವಿಸ್ಟಾಡೋಮ್ ಬೋಗಿ ಹೊಂದಿರುವುದು ಗಮನಾರ್ಹ
ಮಂಗಳೂರು(ಜು.12): ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಮಂಗಳೂರು-ಬೆಂಗಳೂರು ಮಧ್ಯೆ ಹಗಲು ಹೊತ್ತು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಗಾಜಿನ ಛಾವಣಿ ಹೊಂದಿರುವ (ವಿಸ್ಟಾಡೋಮ್) ಬೋಗಿಯ ರೈಲು ಸಂಚಾರ ಆರಂಭಿಸಲಾಗಿದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಭಾನುವಾರ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಯಶವಂತಪುರ- ಮಂಗಳೂರು ನಡುವೆ ಸಂಚರಿಸುವ ವಿಸ್ಟಾಡೋಮ್ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಈ ಬೋಗಿಯ ರೈಲು ಸಂಚಾರ ಇದು ಪ್ರಥಮ. ಮುಂಬೈನಲ್ಲಿ ಈಗಾಗಲೇ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದ್ದರೆ, ದಲ್ಲಿ ಮಾತ್ರ ಎರಡು ವಿಸ್ಟಾಡೋಮ್ ಬೋಗಿ ಹೊಂದಿರುವುದು ಗಮನಾರ್ಹ. ಭಾನುವಾರ ಪ್ರಥಮ ಪ್ರಯಾಣದಲ್ಲಿ ಎಲ್ಲ ಎರಡು ಬೋಗಿಗಳೂ ಭರ್ತಿಯಾಗಿದ್ದವು.
ಬೆಂಗಳೂರು-ಮಂಗಳೂರು ಮಧ್ಯೆ ನೂತನ ವಿಸ್ಟಾಡೋಮ್ ರೈಲು
ಈ ರೈಲು ಪ್ರತಿದಿನ ಬೆಳಗ್ಗೆ 11.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 8.20ಕ್ಕೆ ಯಶವಂತಪುರ ತಲುಪಲಿದೆ. ಭಾನುವಾರ ಮಾತ್ರ ಬೆಳಗ್ಗೆ 9.15ಕ್ಕೆ ಹೊರಟು ರಾತ್ರಿ 8.05ಕ್ಕೆ ಬೆಂಗಳೂರು ತಲುಪಲಿದೆ. ಟಿಕೆಟ್ ದರ 1395 ರು.
ಏನಿದರ ವಿಶೇಷತೆ?
- ರೈಲಿನೊಳಗೆ ಕುಳಿತು ಗಾಜಿನ ಛಾವಣಿಯಲ್ಲಿ ಸವಿಯಬಹುದು
- ಬೆಂಗಳೂರು-ಮಂಗಳೂರು ರೈಲಲ್ಲಿ 2 ಬೋಗಿ ಅಳವಡಿಕೆ, ಪ್ರತಿ ಬೋಗಿಯಲ್ಲಿ 44 ಸೀಟು
- ವಿಸ್ಟಾಡೋಮ್ ಬೋಗಿಯಲ್ಲಿನ ಆಸನಗಳು 360 ಡಿಗ್ರಿಯಷ್ಟು ತಿರುಗುತ್ತವೆ
- ಅಗಲವಾದ ದೊಡ್ಡ ಕಿಟಕಿ, ಓವೆನ್, ಫ್ರಿಜ್, ಜೈವಿಕ ಶೌಚಾಲಯ ಇರುತ್ತದೆ