'ಮಂಗಳೂರಿಗೆ ಕಾಂಗ್ರೆಸ್‌ ಭೇಟಿ ಯತ್ನ ರಾಜಕೀಯ ಪಿತೂರಿ'..!

By Kannadaprabha NewsFirst Published Dec 22, 2019, 12:22 PM IST
Highlights

ಪ್ರಸ್ತುತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಆಗುತ್ತಿರುವ ಹಿಂಸಾಚಾರದ ಹಿಂದೆ ಕಾಂಗ್ರೆಸ್‌ ಷಡ್ಯಂತ್ರ ಮಾಡುತ್ತಿದೆ. ಸಿಪಿಎಂ ಮತ್ತು ಕಾಂಗ್ರೆಸ್‌ ಯಾವ ಯಾವ ರಾಜ್ಯಗಳಿಂದ ಜನರನ್ನು ಗಲಭೆ ಮಾಡಿಸಲು ಮಂಗಳೂರಿಗೆ ಕರೆತಂದಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಶಾಸಕ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಚಿಕ್ಕಬಳ್ಳಾಪುರ(ಡಿ.22): ಪ್ರಸ್ತುತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಆಗುತ್ತಿರುವ ಹಿಂಸಾಚಾರದ ಹಿಂದೆ ಕಾಂಗ್ರೆಸ್‌ ಷಡ್ಯಂತ್ರ ಇರುವುದು ಜಗಜ್ಜಾಹಿರವಾಗಿದ್ದು, ಸಿಪಿಎಂ ಮತ್ತು ಕಾಂಗ್ರೆಸ್‌ ಯಾವ ಯಾವ ರಾಜ್ಯಗಳಿಂದ ಜನರನ್ನು ಗಲಭೆ ಮಾಡಿಸಲು ಮಂಗಳೂರಿಗೆ ಕರೆತಂದಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಶಾಸಕ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ನಗರ ಹೊರವಲಯದ ಅಗಲಗುರ್ಕಿ ರಸ್ತೆ ಕಾಮಗಾರಿಯ ಗುಣಮಟ್ಟಪರಿಶೀಲಿಸಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವುದೇ ಕಾಂಗ್ರೆಸ್‌ ಪಕ್ಷ ಎಂಬುದು ಜಗಜ್ಜಾಹಿರವಾಗಿದ್ದು, ಇದು ಗುಟ್ಟಾಗಿ ಉಳಿದಿಲ್ಲ. ನನಗೆ ಬಂದಿರುವ ಮಾಹಿತಿಯಂತೆ ಯಾವ ರಾಜ್ಯದಿಂದ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷಗಳಿಂದ ಜನರನ್ನು ಮಂಗಳೂರಿಗೆ ಕರೆತಂದಿದ್ದಾರೆ ಎಂಬ ಮಾಹಿತಿ ಇದೆ ಇದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದಿದ್ದಾರೆ.

ಕರ್ಫ್ಯೂ ಇದ್ದಾಗ ಭೇಟಿ ಏಕೆ?

ಕಾಂಗ್ರೆಸ್‌ನವರು ರಾಜಕೀಯವಾಗಿ ಹತಾಶರಾಗಿ, ರಾಜಕೀಯ ಲಾಭಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡಲು ಮುಂದಾಗಿದ್ದಾರೆ. ಕಫä್ರ್ಯ, ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಕ್ಕೆ ಯಾವುದೇ ನಾಯಕರು ಭೇಟಿ ನೀಡಲು ಸಾಧ್ಯವೇ, ಕಾಂಗ್ರೆಸ್‌ ನಾಯಕರು ಮಂಗಳೂರಿಗೆ ಹೋಗಿದ್ದ ಉದ್ಧೇಶ ಬೆಂಕಿಗೆ ತುಪ್ಪ ಸುರಿಯುವದಲ್ಲ, ನೇರವಾಗಿ ಬೆಂಕಿ ಹಾಕುವ ಉದ್ಧೇಶದಿಂದ ಮಂಗಳೂರಿಗೆ ಹೋಗಿರುವುದಾಗಿ ದೂರಿದ್ದಾರೆ.

ಮುಗ್ದ ಜನರ ನೆಮ್ಮದಿ ಉರಿಸುವ ಕೆಲಸ ಮಾಡುತ್ತಿರುವುದು ಖಂಡನೀಯ, ಇಂತಹ ಸ್ಥಿತಿಯಲ್ಲಿಯೂ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸ್ಥಳಕ್ಕೆ ತೆರಳಿದ್ದಾರೆ. ಪರಿಸ್ಥಿತಿ ಕುರಿತು ಅವಲೋಕನ ನಡೆಸಿ, ಇಂತಹ ಪರಿಸ್ಥಿತಿ ಎದುರಾಗದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ

ಮುಗ್ದ ಜನರನ್ನು ಕೆಲ ರಾಜಕೀಯ ಪಕ್ಷಗಳು ದಿಕ್ಕು ತಪ್ಪಿಸುತ್ತಿದ್ದಾರೆ, ಇದರಿಂದಾಗಿ ಜನರು ದಿಕ್ಕು ತಪ್ಪಿ ಬೀದಿಗೆ ಬಂದಿದ್ದಾರೆ, ಇವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಮನವರಿಕೆ ಮಾಡಿಕೊಡುವ ಮೂಲಕ ಸರಿದಾರಿಗೆ ತರುವ ಕೆಲಸವನ್ನು ಸರ್ಕಾರ ಮತ್ತು ನಾವು ಮಾಡೋಣ ಎಂದು ಕರೆ ನೀಡಿದ್ದಾರೆ.

BJP ಸೇರ್ಪಡೆ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಶ್..!

ರಾಜ್ಯದ ಜನತೆ ಶಾಂತಿಯ ಜನತೆ, ಅವರು ಎಂದೂ ಸಹನೆ ಕಳೆದುಕೊಂಡಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವುದೇ ವ್ಯಕ್ತಿಗೆ ಹಾನಿಯಾಗುವುದಿಲ್ಲ. ಬದಲಿಗೆ ಆಪ್ಘಾನಿಸ್ತಾನ, ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರು ಧರ್ಮದ ವಿಚಾರದಲ್ಲಿ ಕಿರುಕುಳಕ್ಕೆ ಒಳಗಾಗಿ 2014ರ ಡಿ.31ಕ್ಕಿಂತ ಮೊದಲು ಕಿರುಕುಳ ತಾಳಲಾರದೆ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಪ್ರಮುಖ ಅಂಶವಾಗಿದೆ ಎಂದು ವಿವರಿಸಿದ್ದಾರೆ.

ಜನತೆಗೆ ಕಾಂಗ್ರೆಸ್‌ ಭಯ ಹುಟ್ಟಿಸುತ್ತಿದೆ

ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗಿ ದೇಶಾಂತರ ಮಾಡಿದ ನತದೃಷ್ಟರು, ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವುದು ಭಾರತೀಯರಾಗಿ ನಮ್ಮ ಆದ್ಯ ಕರ್ತವ್ಯ, ಇದರಿಂದ ಯಾರೂ ಆತಂಕಕ್ಕೆ ಒಳಗಾಗ ಬೇಕಾದ ಅಗತ್ಯವಿಲ್ಲ, ಎನ್‌ಆರ್‌ಸಿಯೇ ಬೇರೆ, ಸಿಎಎ ಬೇರೇ, ಆದರೆ ಇವೆರಡನ್ನೂ ಒಂದಕ್ಕೊಂದು ಬೆರಿಕೆ ಮಾಡಿ, ಜನರಿಗೆ ಭಯ ಹುಟ್ಟಿಸುವ ಕೆಲಸ ಕಾಂಗ್ರೆಸ್‌ನವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ಬಿಜೆಪಿ ಸರ್ಕಾರದಿಂದ ಕರಾಳ ಮಸೂದೆ ತಂದು ಬೆಂಕಿ ಹಚ್ಚೋ ಕೆಲಸ'..!

ಅಲ್ಲದೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ಗಲಾಟೆ ಮಾಡಿಸಬೇಕು ಎಂಬ ಷಡ್ಯಂತರ ನಡೆಯುತ್ತಿದೆ. ಇದರಿಂದಾಗಿ ಉತ್ತರ ಪ್ರದೇಶ, ಅಸ್ಸಾಂ, ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಇಂತಹ ಗಲಭೆಗಳನ್ನು ಮಾಡಲಾಗುತ್ತಿದೆ. ಇದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಗಲಭೆಗಳ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಲಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.

click me!