ಅದ್ಧೂರಿ ದಸರಾವಲ್ಲ, ಅಧ್ವಾನ ದಸರಾ : Vishwanath

By Kannadaprabha News  |  First Published Oct 9, 2022, 5:18 AM IST

ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಅದ್ಧೂರಿಯಾಗಿ ಆಗಲಿಲ್ಲ. ಬದಲಿಗೆ ಅಧ್ವಾನವಾಗಿತ್ತು. ಜನರೇ ಬಂದು ಯಶಸ್ವಿಗೊಳಿಸಿದ್ದಾರೆಯೇ ಹೊರತು, ಕಾರ್ಯಕ್ರಮಗಳಿಂದ ದಸರಾ ಯಶಸ್ವಿಯಾಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ದೂರಿದರು.


  ಮೈಸೂರು (ಅ.09): ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಅದ್ಧೂರಿಯಾಗಿ ಆಗಲಿಲ್ಲ. ಬದಲಿಗೆ ಅಧ್ವಾನವಾಗಿತ್ತು. ಜನರೇ ಬಂದು ಯಶಸ್ವಿಗೊಳಿಸಿದ್ದಾರೆಯೇ ಹೊರತು, ಕಾರ್ಯಕ್ರಮಗಳಿಂದ ದಸರಾ ಯಶಸ್ವಿಯಾಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ (Dasara)  ಮಹೋತ್ಸವ ಸಂಬಂಧ ಆತ್ಮಾವಲೋಕ ನಡೆಯಬೇಕು, ಈಗ ಆಗಿರುವ ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕೋವಿಡ್‌ ಕಾರಣದಿಂದ 2 ವರ್ಷದಿಂದ ಇರಲಿಲ್ಲ. ಹಾಗಾಗಿ ಜನ ಬಂದಿದ್ದಾರೆ. ದಸರಾ ಜನರಿಂದ ಯಶಸ್ವಿಯಾಗಿದೆ ಎಂದರು.

Latest Videos

undefined

ಮುಖ್ಯಮಂತ್ರಿಗಳು (Karnataka CM) ದಸರಾಕ್ಕೆ 35 ಕೋಟಿ ನೀಡುವುದಾಗಿ ಹೇಳಿದ್ದರು. ಆದರೆ ನಂತರ ದಿನಗಳಲ್ಲಿ ಅನುದಾನ ಕಡಿತ, ಅನುದಾನ ಬಿಡುಗಡೆ ಆಗಿಲ್ಲ ಎಂಬ ಮಾತು ಕೇಳಿಬಂತು. ದಸರಾ ಎಂಬುದು ಸಂಪ್ರದಾಯ, ಸಾಂಸ್ಕೃತಿಕ ಉತ್ಸವ ಆಗಬೇಕಿತ್ತು. ಗ್ರಾಮೀಣ (Rural) ದಸರಾ ಆಚರಣೆಗೆ 3 ಲಕ್ಷ ಕೊಡುವುದಾಗಿ ಆರಂಭದಲ್ಲಿ ಹೇಳಿ, ನಂತರ ಕೇವಲ 1 ಲಕ್ಷ ನೀಡಲಾಯಿತು. ಕ್ರೀಡೆಯಲ್ಲಿ ಪಾಲ್ಗೊಂಡವರಲ್ಲಿ ಉತ್ಸಾಹವೇ ಇರಲಿಲ್ಲ. ಅನುದಾನ ಕೊರತೆ ಕಾರಣಕ್ಕೆ ಮ್ಯಾರಥಾನ್‌ ರದ್ದುಪಡಿಸಿದ್ದಾಗಿ ಅವರು ತಿಳಿಸಿದರು.

ಸಾಹಿತ್ಯ ಸಮ್ಮೇಳನವು ಸಾಹಿತ್ಯದ ಉತ್ಸವವಾಗಬೇಕಿತ್ತು. ಆದರೆ ಸತ್ತವರನ್ನು ಆಹ್ವಾನಿಸಿ, ಬದುಕಿದ್ದವರನ್ನು ಬಿಡಲಾಗಿತ್ತು. ನಾನೂ ಸಾಹಿತ್ಯ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆಯಾದವನು. ನನ್ನ ಕೇಳಿದರೆ ಹೇಳುತ್ತಿದ್ದೆ. ದಸರಾ ಕವಿಗೋಷ್ಠಿಯಿಂದ ಅವಮಾನವಾಯಿತು ಎಂದರು.

ಯುವ ದಸರಾ ಕಾರ್ಯಕ್ರಮಕ್ಕೆ ಸ್ಥಳೀಯ ಕಲಾವಿದರಾದ ದರ್ಶನ್‌, ವಿಶ್ವದಲ್ಲೇ ಖ್ಯಾತಿಪಡೆದ ಕೆಜಿಎಫ್‌ನ ಯಶ್‌ ಅವರನ್ನು ಕರೆಸಬಹುದಿತ್ತು. ಅವರನ್ನೆಲ್ಲಾ ನಿರ್ಲಕ್ಷ್ಯಿಸಿ ಬೇರೆ ಬೇರೆಯವರಿಗೆ ಲಕ್ಷಾಂತರ ಖರ್ಚು ಮಾಡಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆರೆದುಕೊಂಡಿಲ್ಲ. ಸದ್ಯ ಚಾಮುಂಡೇಶ್ವರಿ ಕೃಪೆಯಿಂದ ಏನೂ ಆಗಿಲ್ಲ. ಜಂಬೂಸವಾರಿ ಹೋಗುತ್ತಿದ್ದರೆ ಆನೆಯೇ ಕಾಣುತ್ತಿರಲಿಲ್ಲ. ಅಷ್ಟುಜನ ತುಂಬಿದ್ದರು. ಏನಾದರೂ ಅನಾಹುತವಾಗಿದ್ದರೆ ಏನು ಮಾಡಬೇಕಿತ್ತು. ದಸರಾಕ್ಕೆ ಕಳಂಕ ಬರುತ್ತಿತ್ತು ಎಂದು ಅವರು ಕಿಡಿಕಾರಿದರು.

ಜಿಲ್ಲಾ ಮಂತ್ರಿಗಳಿಗೆ ಅನುಭವದ ಕೊರತೆ ಇದೆ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ದುರಾದೃಷ್ಟವಶಾತ್‌ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಬೇರೆಯವರೇ ಉಸ್ತುವಾರಿ ಸಚಿವರಾಗುತ್ತಾರೆ. ರಾಮದಾಸ್‌ಗೆ ವಹಿಸಬಹುದಿತ್ತು. ಇಲ್ಲವೇ ನಾನು, ಜಿ.ಟಿ. ದೇವೇಗೌಡರು, ತನ್ವೀರ್‌ಸೇಠ್‌ ಮೊದಲಾದವರು ಇದ್ದೆವು. ನಮ್ಮ ಸಲಹೆ ಕೇಳಬಹುದಿತ್ತು. ಬರಿ ಲೆಕ್ಕ ಕೊಟ್ಟರೆ ಏನೂ ಪ್ರಯೋಜನವಿಲ್ಲ. ತಪ್ಪುಗಳ ಪಟ್ಟಿಆಗಬೇಕು. ದಸರಾ ಸಂಬಂಧ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

ದಸರಾ ಪ್ರಾಧಿಕಾರವಾಗಲಿ:

ದಸರಾ ಆಚರಣೆ ಸಂಬಂಧ ಆತ್ಮಾವಲೋಕನ ಆಗಬೇಕು. ಕಡ್ಡಾಯವಾಗಿ ಕೂಡಲೇ ದಸರಾ ಪ್ರಾಧಿಕಾರ ರಚಿಸಬೇಕು. ವೀಕ್ಷಕ ವಿವರಣೆ ಕೊಡುವ ಮಹಿಳೆಯು ಸುಮ್ಮನೆ ಕಿರುಚಾಡಿದರು. ಈ ಬಗ್ಗೆ ಅಧಿಕಾರಿಗಳಿಗೂ ಅನುಭವವಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯಾವುದ್ಯಾವುದೋ ಸಿಲ್‌್ಕ ತಂದು ಮೈಸೂರು ಸಿಲ್‌್ಕ ಎಂದು ಹೇಳುವುದು ಸರಿಯಲ್ಲ. ಆದ್ದರಿಂದ ಮಾದರಿ ದಸರಾ ಆಚರಣೆಗೆ ಅನುಭವಿ ಅಧಿಕಾರಿಗಳ ತಂಡ ಇರಬೇಕಾಗುತ್ತದೆ ಎಂದು ಅವರು ಹೇಳಿದರು.

ಪಾಸ್ ಹಂಚಿಕೆಯಲ್ಲಿ ತಾರತಮ್ಯ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಪ್ರತಿ ದಿನ ಹಿಂದೆ ಹೋಗಿ ಓಲೈಸುತ್ತಿದ್ದವರ ಜೇಬಿನ ತುಂಬ ಜಂಬೂ ಸವಾರಿ, ಟಾಚ್‌ರ್‍ಲೈಟ್‌ ಪಾಸ್‌ ಹಂಚಿಕೆಯಾಗಿದೆ. ಬೇಕಾದವರಿಗೆ ಮಾತ್ರ ಪಾಸ್‌ ನಗರದ ಅಗ್ರಹಾರದಲ್ಲಿ ಹಂಚಿಕೆಯಾಗಿದ್ದು, ದಸರಾಪಾಸ್‌ನಲ್ಲಿ ತಾರತಮ್ಯ ಮಾಡಲಾಗಿದೆ. ಜಿಲ್ಲಾಡಳಿತವು ಕನ್ನಡದ ಮಾತೃ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಹೋರಾಟಗಾರರನ್ನು ಕಡೆಗಣನೆ ಮಾಡಿದೆ. ಈ ವರ್ತನೆಯನ್ನು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತೇವೆ.

- ಅರವಿಂದ್‌ ಶರ್ಮ, ಸಂಸ್ಥಾಪಕ ಅಧ್ಯಕ್ಷರು, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ

click me!