ಕೋವಿಡ್‌ ಅಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಭಾಗಿ: ಕೆಪಿಸಿಸಿ ವಕ್ತಾರ ಆರೋಪ

By Kannadaprabha NewsFirst Published Jul 17, 2020, 12:23 PM IST
Highlights

ಕೋವಿಡ್‌-19 ಅಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.

ಮೈಸೂರು(ಜು.17): ಕೋವಿಡ್‌-19 ಅಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬಂಧು ಮಂಜುನಾಥ್‌ ಭಾಗಿಯಾಗಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದ್ದರೂ ಹಣ ಲೂಟಿ ನಿಲ್ಲಿಸಿಲ್ಲ. ಹಾಸಿಗೆ, ದಿಂಬು, ಹೊದಿಕೆಯನ್ನು 100 ದಿನಕ್ಕೆ ಬಾಡಿಗೆ ಪಡೆಯುವ ಮೂಲಕ 240 ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿ ಮುಖಂಡರು ಕೇವಲ ಪ್ರಚಾರಕ್ಕೆ ಸೀಮಿತರಾಗಿದ್ದಾರೆ. ತಿರುವನಂತಪುರಂನ ಎಚ್‌ಎಲ್‌ಎಲ್‌ಆರ್‌ ಕಂಪನಿಯಿಂದ 630 ವೆಂಟಿಲೇಟರ್‌ ಖರೀದಿಸಲಾಗಿದೆ. 40 ವರ್ಷದಿಂದ ಕಾಂಡೋಮ್‌ ತಯಾರಿಸುತ್ತಿರುವ ಕಂಪನಿಯಿಂದ ವೆಂಟಿಲೇಟರ್‌ ಖರೀದಿಸಲಾಗಿದೆ ಎಂದು ಆರೋಪಿಸಿದರು.

ಕೊರೋನಾ ನಡುವೆಯೂ ಜೆಡಿಎಸ್ ಪಕ್ಷ ಸಂಘಟಿಸಿ: ದೇವೇಗೌಡ

ಸಚಿವ ಆರ್‌. ಅಶೋಕ್‌ ಅವರಿಗೆ ಸುಳ್ಳು ಹೇಳುವುದು ಚೆನ್ನಾಗಿ ಗೊತ್ತು. ಸಿದ್ದರಾಮಯ್ಯ ಅವರ ಮನೆಗೆ ತಲುಪಿಸುವ ಲೆಕ್ಕ ಪತ್ರದಲ್ಲಿ ಅಪೂರ್ಣ ಮಾಹಿತಿ ನೀಡಿದ್ದಾರೆ. ಇನ್ನು ರಾಜ್ಯ ಸರ್ಕಾರ ಭೂ ಸುಧಾರಣಾ ಕಾನೂನು ಜಾರಿಗೆ ತರುವ ಮೂಲಕ ರೈತರ ಕುತ್ತಿಗೆ ಮೇಲೆ ಕಾಲಿಡುವ ಕೆಲಸ ಮಾಡಿದೆ. ಬಿಜೆಪಿ ಅಂದರೆ ಭೂಗಳ್ಳರ ಜನತಾ ಪಾರ್ಟಿ ಅಂತ ಹೊಸ ನಾಮಕರಣ ಮಾಡುತ್ತಿದ್ದೇವೆ. ಜಮೀನುದಾರರು ಪದ್ಧತಿ ವಾಪಸ್ಸು ತರುವ ಕಾಯ್ದೆ ಇದಾಗಿದೆ. ಮೋದಿ ಪದವೀಧರರಿಗೆ ಪಕೋಡ ಮಾಡಲು ಹೇಳಿದರೆ, ಸಿಎಂ ಹೊಲ ಊಳಲು ಹೇಳುತ್ತಾ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಹೇಳಿಕೆ ಮರೆಯುತ್ತಿದ್ದಾರೆ. ಲಾಕ್‌ಡೌನ್‌ ಲಾಭವಾಗಿಸಿಕೊಂಡು ಕಾಯಿದೆ ಜಾರಿ ತಂದಿದ್ದೀರಿ ಕಿಡಿಕಾರಿದರು.

ಲಡಾಖ್‌ನ ಲೆಹ್‌ನಲ್ಲಿ ಯೋಧರ ಜೊತೆ ರಕ್ಷಣಾ ಸಚಿವ..! ಇಲ್ಲಿವೆ ಫೋಟೋಸ್

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್‌. ಮೂರ್ತಿ, ಕೆಪಿಸಿ ವಕ್ತಾರೆ ಮಂಜುಳಾ ಮಾನಸ, ಕಾಂಗ್ರೆಸ್‌ ನಗರ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮುಖಂಡರಾದ ರಾಜಣ್ಣ, ಗಿರೀಶ್‌, ಎಸ್‌. ರಾಜೇಶ್‌ ಇದ್ದರು.

click me!