ರಾಜಕೀಯ ಕಿರುಕುಳಕ್ಕೆ ವಿನಯ್ ಸೋಮಯ್ಯ ಬಲಿ?: ಮಡಿಕೇರಿಯಲ್ಲಿ ಬಿಜೆಪಿಯಿಂದ ಹೆದ್ದಾರಿ ಬಂದ್!

Published : Apr 04, 2025, 06:16 PM ISTUpdated : Apr 04, 2025, 06:33 PM IST
ರಾಜಕೀಯ ಕಿರುಕುಳಕ್ಕೆ ವಿನಯ್ ಸೋಮಯ್ಯ ಬಲಿ?: ಮಡಿಕೇರಿಯಲ್ಲಿ ಬಿಜೆಪಿಯಿಂದ ಹೆದ್ದಾರಿ ಬಂದ್!

ಸಾರಾಂಶ

ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.04): ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕೊಡಗಿನ ಶಾಸಕದ್ವಯರು ರಾಜೀನಾಮೆ ನೀಡಬೇಕು, ಶಾಸಕರು ಸೇರಿ ಕಾಂಗ್ರೆಸ್ ಮುಖಂಡ ತೆನ್ನೀರಾ ಮೈನಾ ಅವರುಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಕೊಡಗು ಬಿಜೆಪಿ ರಸ್ತೆತಡೆ ನಡೆಸಿದೆ. ಕಾಂಗ್ರೆಸ್ ಶಾಸಕರು ಹಾಗೂ ಮುಖಂಡ ತೆನ್ನೀರಾ ಮೈನಾ ಅವರ ಕಿರುಕುಳದಿಂದಾಗಿಯೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟ್ಸಾಪ್ ಮೂಲಕ ಮೆಸೇಜ್ ಹಾಕಿದ ಕೊಡಗು ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ಮೂಡುವಂತೆ ಮಾಡಿದೆ. 

ಜೊತೆಗೆ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಅಂದರೆ 2025 ಜನವರಿ ತಿಂಗಳಲ್ಲಿ ಕೊಡಗು ಸಮಸ್ಯೆಗಳು ಮತ್ತು ಪರಿಹಾರಗಳು ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಅವಹೇಳನ ಮಾಡಿ ಪೋಸ್ಟ್ ಹಾಕಲಾಗಿತ್ತು. ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿದ್ದ ಪೊನ್ನಣ್ಣ ಅವರ ಫೋಟೋವನ್ನು ಆ ಗ್ರೂಪಿನಲ್ಲಿ ಹಾಕಲಾಗಿತ್ತು. ಹೀಗಾಗಿ ಈ ಗ್ರೂಪಿನ ಅಡ್ಮಿನ್ ಗಳಾದ ಮೈಸೂರು ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ರಾಜೇಂದ್ರ ಪಾಪು, ಮೈಸೂರು ನಗರದ ನಿವಾಸಿ ವಿಷ್ಣುನಾಚಪ್ಪ ಹಾಗೂ ಕೊಡಗು ಮೂಲದ ವಿನಯ್ ಸೋಮಯ್ಯ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ತೆನ್ನೀರಾ ಮೈನಾ ಅವರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿತ್ತು. 

ಇದನ್ನೂ ಓದಿ: ಹೈಕೋರ್ಟ್ ತಡೆಯಾಜ್ಞೆ ಇದ್ದರೂ ತರಾತುರಿಯಲ್ಲಿ ಟೆಂಡರ್: ಹಲವು ಅನುಮಾನಗಳ ಹುಟ್ಟಿಸಿದ ಕೆ.ನಿಡುಗಣೆ ಪಂಚಾಯಿತಿ ನಡೆ

ಇದೇ ವಿಚಾರದಲ್ಲಿ ನನಗೆ ಮತ್ತೆ ಮತ್ತೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವಿನಯ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ನೋಟಿನಲ್ಲಿ ಬರೆದಿದ್ದಾರೆ. ಇದು ಬಿಜೆಪಿಯನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಇದನ್ನು ಖಂಡಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸ್ವತಃ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಬರೋಬ್ಬರಿ ಒಂದುವರೆ ಗಂಟೆಗಳ ಕಾಲ ಮಡಿಕೇರಿ, ಮೈಸೂರು ಮತ್ತು ಮಡಿಕೇರಿ ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದರು. ಇದರಿಂದ ನೂರಾರು ವಾಹನಗಳ ಸಾವಿರಾರು ಪ್ರಯಾಣಿಕರು ಪರದಾಡುವಂತೆ ಆಯಿತು. 

ತೆನ್ನೀರಾ ಮೈನಾ ವಿರುದ್ಧ ಆರೋಪ ಬಂದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ತೆನ್ನೀರಾ ಮೈನಾ ಇದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಶಾಸಕರಿಗೆ ಅವಹೇಳನ ಮಾಡಿದ್ದಕ್ಕೆ ಸಂಬಂಧಿಸಿ ದೂರು ನೀಡಿದ್ದೆ. ಅದು ಬಿಟ್ಟರೆ ಅವರನ್ನು ಯಾವತ್ತೂ ನೇರವಾಗಿ ಭೇಟಿಯಾಗಿಲ್ಲ, ಅವರ ಪರಿಚಯವೂ ಇಲ್ಲ. ಅಂದರೆ ಅವರ ಕಿರುಕುಳಕ್ಕೆ ನಾನು ಹೇಗೆ ಕಾರಣ. ಮೂವರ ವಿರುದ್ಧ ಪ್ರಕರಣ ದಾಖಲಾದ ಬಳಿಕ ಹೈಕೋರ್ಟಿನಿಂದ ತಡೆಯಾಜ್ಞೆ ತರಲಾಗಿತ್ತು. ಅದಾದ ಬಳಿಕ ನಾವು ಅದರ ವಿಚಾರಕ್ಕೆ ಹೋಗಿಲ್ಲ ಎಂದಿದ್ದಾರೆ. ಇತ್ತ ಈ ಕುರಿತು ಮಾತನಾಡಿದ ಬಿಜೆಪಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮಡಿಕೇರಿಯ ಪೊಲೀಸ್ ಒಬ್ಬರು ವಿನಯ್ಗೆ ಪದೇ ಪದೇ ಕರೆ ಮಾಡಿ ಮಡಿಕೇರಿ ತಹಶೀಲ್ದಾರ್ ಕಚೇರಿ ಬಂದು ಸಹಿ ಮಾಡುವಂತೆ ಒತ್ತಾಯಿಸುತ್ತಿದ್ದರು. 

ಇದನ್ನೂ ಓದಿ: ಸತ್ತು ಸಂಸ್ಕಾರವಾಗಿದ್ದ ಹೆಂಡತಿ 5 ವರ್ಷದ ಬಳಿಕ ಎದ್ದು ಬಂದ್ಲು: ಆದರೆ ಸೆರೆಮನೆ ವಾಸ ಅನುಭವಿಸಿದ್ದು ಮಾತ್ರ ಗಂಡ!

ಬಿಎನ್ಎಸ್ ಆಕ್ಟ್ 126 ಅಡಿ ಗೂಂಡಾ ಕಾಯ್ದೆ ಹಾಕಲು ಯತ್ನಿಸುತ್ತಿದ್ದರು. ಇದರಿಂದ ಏನು ಆಗುವುದಿಲ್ಲ, ಗೂಂಡಾ ಕಾಯ್ದೆ ಹಾಕುವುದಕ್ಕೆ ಬಿಡುವುದಿಲ್ಲ ಎಂದು ಧೈರ್ಯವಾಗಿ ಇರುವಂತೆ ಹೇಳಿದ್ದೆವು. ಸೂಕ್ಷ್ಮ ಮನಸ್ಸಿನವನಾದ ವಿನಯ್ ಇವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಶಾಸಕರು ವಿನಯ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.  ಕಾಂಗ್ರೆಸ್ನ ಇಬ್ಬರು ಶಾಸಕರು ಮತ್ತು ಮುಖಂಡ ತೆನ್ನೀರಾ ಮೈನಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ ಎರಡು ಪಕ್ಷಗಳ ನಡುವೆ ದ್ವೇಷಕ್ಕೆ ಕಾರಣವಾಗಿದ್ದು ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಂತೆ ಆಗಿದೆ. ನಾಳೆ ಬೆಳಿಗ್ಗೆ 11.30 ಯಿಂದ 12 ಗಂಟೆ ಒಳಗೆ ಮೃತ ವಿನಯ್ ಅವರ ಹುಟ್ಟೂರು ಸೋಮವಾರಪೇಟೆ ತಾಲ್ಲೂಕಿನ ಮರೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್