ಕಾಂಗ್ರೆಸ್ ಮಾಜಿ ಸಚಿವನಿಗೆ ಶ್ರೀಗಳ ಬಹಿರಂಗ ಸವಾಲು

Published : Nov 28, 2018, 12:20 PM IST
ಕಾಂಗ್ರೆಸ್ ಮಾಜಿ ಸಚಿವನಿಗೆ  ಶ್ರೀಗಳ ಬಹಿರಂಗ ಸವಾಲು

ಸಾರಾಂಶ

ಕಾಂಗ್ರೆಸ್ ಮಾಜಿ ಶಾಸಕನ ವಿರುದ್ಧ ಸ್ವಾಮೀಜಿ ಗುಡುಗು | ನನ್ನ ಮೇಲಿನ ಆರೋಪ ಸಾಬೀತುಪಡಿಸಿ ಎಂದು ಮುರುಘಾಮಠ ಶ್ರೀಗಳಿಂದ ವಿನಯ್ ಕುಲಕರ್ಣಿಗೆ ಸವಾಲು 

ಹುಬ್ಬಳ್ಳಿ (ನ. 28): ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಧಾರವಾಡದ ಶ್ರೀ ಮುರುಘಾಮಠದ ಮಾಜಿ ಪೀಠಾಧಿಪತಿ ಶ್ರೀ ಶಿವಯೋಗಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾಜಿ ಸಚಿವ ವಿನಯ ಕುಲಕರ್ಣಿಯಿಂದ ದಬ್ಬಾಳಿಕೆ, ಹಾಗೂ ಅನ್ಯಾಯಕ್ಕೊಳಗಾಗಿದ್ದೇನೆ.  ಗೂಂಡಾ ವಿನಯ ಕುಲಕರ್ಣಿ ಹಾಗೂ ಆತನ ಭಕ್ತರು ಬೆದರಿಸಿ ಪೀಠತ್ಯಾಗ ಪತ್ರ ಬರೆಸಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನರಕಯಾತನೆ ಅನುಭವಿಸಿದ್ದೇನೆ. ನನಗೆ ಮದುವೆಯಾಗಿದೆ, ಮಕ್ಕಳಾಗಿವೆ, ಮಠದ ಆಸ್ತಿ ಕಬಳಿಸಿದ್ದೇನೆ ಅಂತಾ ಆರೋಪ ಮಾಡಿದ್ದಾರೆ. ನನ್ನ ಮೇಲಿನ ಆರೋಪವನ್ನು ಸಾಬಿತುಪಡಿಸಲಿ ಎಂದು ಶ್ರೀಗಳು ಸವಾಲು ಹಾಕಿದ್ದಾರೆ. 

ವಿನಯ್ ಕುಲಕರ್ಣಿ ನನ್ನ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಲಿ. ಮಾಜಿ ಶಾಸಕಿ ಸೀಮಾ ಮಸೂತಿ ಬರೆದಿರುವ ಬಹಿರಂಗ ಪತ್ರಗಳಿಗೆ,  ವಿನಯ ಕುಲಕರ್ಣಿ ಉತ್ತರ ನೀಡಲಿ. ವಿನಯ ಕುಲಕರ್ಣಿಗೆ ಅಂದು ಬೆಂಬಲ ನೀಡಿರುವ ಗೂಂಡಾ ಭಕ್ತರು, ಲಿಂಗಾಯತ ಮುಖಂಡರು ಗಂಡಸರೇ ಆಗಿದ್ದರೆ ನನ್ನ ಮೇಲಿನ ಆರೋಪ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ. 
 

PREV
click me!

Recommended Stories

ರಾಷ್ಟ್ರಧ್ವಜ ತಯಾರಿಸ್ತಿದ್ದ ಕೈಗಳಲ್ಲೀಗ ಕೆಲಸವಿಲ್ಲ!
ಬಿಜೆಪಿ ಸಾಬೀತು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ: ಜಮೀರ್ ಸವಾಲು