ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿಯಲ್ಲಿ ವಿನಯ್ ಗುರೂಜಿ ತಮ್ಮ ಆಶ್ರಮದಲ್ಲಿ ತಾವು ಪೂಜಿಸುತ್ತಿದ್ದ ಬುದ್ಧ ವಿಗ್ರಹ ತಂದು ಪ್ರತಿಷ್ಠಾಪಿಸಿದ್ದಾರೆ
ಚಿಕ್ಕಮಗಳೂರು (ಅ.27): ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ ಹೆಗ್ಡೆ ಅವರ ಸಮಾಧಿ ಬಳಿ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಅವರು ವಿಜಯದಶಮಿ ದಿನವಾದ ಸೋಮವಾರದಂದು ಬುದ್ಧನ ವಿಗ್ರಹ ಪ್ರತಿಷ್ಠಾಪನೆ ಮಾಡಿದರು.
ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್‌ನಲ್ಲಿ ಸಿದ್ಧಾರ್ಥ ಹೆಗ್ಡೆ ಅವರ ಸಮಾಧಿ ಇದ್ದು, ಇಲ್ಲಿ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ವಿನಯ್ ಗುರೂಜಿ ಅವರು ತಮ್ಮ ಗೌರಿಗದ್ದೆಯ ಆಶ್ರಮದಲ್ಲಿ ಇದ್ದ ಬುದ್ಧನ ವಿಗ್ರಹಕ್ಕೆ ಪೂಜೆ ಮಾಡುತ್ತಿದ್ದರು.
ಸಿದ್ಧಾರ್ಥ ಹೆಗ್ಡೆ ಸಮಾಧಿಗೆ ಮಂತ್ರಾಕ್ಷತೆ ಹಾಕಿ ಬೋದಿ ವೃಕ್ಷ ನೆಟ್ಟ ವಿನಯ್ ಗುರೂಜಿ
ಈ ವಿಗ್ರಹವನ್ನು ಚೇತನಹಳ್ಳಿಗೆ ತಂದು ಸಿದ್ಧಾರ್ಥ ಹೆಗ್ಡೆ ಅವರಿಗೆ ಸೇರಿರುವ ಕಾಫಿ ಎಸ್ಟೇಟ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ಸಿದ್ಧಾರ್ಥ ಹೆಗ್ಡೆ ಅವರ ತಾಯಿ ವಾಸಂತಿ ಹೆಗ್ಡೆ ಹಾಗೂ ಅವರ ಕುಟುಂಬದ ಆಪ್ತರು ಭಾಗಿಯಾಗಿದ್ದರು. ಉದ್ಯಮಿ ದಿ.ಸಿದ್ಧಾರ್ಥ ಹೆಗ್ಡೆ ಅವರ ಸಮಾಧಿ ಬಳಿ ವಿನಯ್ ಗುರೂಜಿ ಅವರು ಸೋಮವಾರ ಬುದ್ಧನ ವಿಗ್ರಹ ಪ್ರತಿಷ್ಠಾಪನೆ ಮಾಡಿದರು.