ಕೊಪ್ಪಳ (ಆ.31): ಅವಧೂತ ವಿನಯ ಗುರೂಜಿ ಅವರು ಸೋಮವಾರ ಗವಿಮಠಕ್ಕೆ ಭೇಟಿ ನೀಡಿದ ವೇಳೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪಾದುಕೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದರು.
ಕರ್ತೃ ಗದ್ದುಗೆಗೆ ಬಿಲ್ವಾರ್ಚನೆಯ ಪೂಜೆ ನೆರವೇರಿಸಿ, ಸುಮಾರು ಹೊತ್ತು ಕರ್ತೃ ಗದ್ದುಗೆಯ ಪಕ್ಕದಲ್ಲಿಯೇ ಕುಳಿತು ಧ್ಯಾನ ಮಾಡಿದರು.
ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡಿ: ವಿನಯ್ ಗುರೂಜಿ
ಬಳಿಕ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭಕ್ತರಿಗೆ ದರ್ಶನ ನೀಡುತ್ತಿದ್ದ ಸ್ಥಳಕ್ಕೆ ಹೋಗಿ, ಅಲ್ಲಿ ಏಕಾಏಕಿ ಗವಿಮಠ ಶ್ರೀಗಳ ಪಾದುಕೆಗಳನ್ನು ತಲೆಯ ಮೇಲಿಟ್ಟುಕೊಂಡು, ಕೆಲಹೊತ್ತು ಧ್ಯಾನ ಮಾಡಿದರು.
ಗವಿಮಠ ಶ್ರೀಗಳು ಬೇಡವೆನ್ನುತ್ತಿರುವಾಗಲೇ ಅವರು ಪಾದುಕೆಗಳನ್ನು ತೆಗೆದುಕೊಂಡು ತಲೆಯ ಮೇಲೆ ಇಟ್ಟುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದಾದ ಮೇಲೆ ಶ್ರೀಗಳೊಂದಿಗೆ ಕುಶಲೋಪರಿ ಮಾತುಗಳನ್ನಾಡಿದ್ದಾರೆ.