ತಾಂಡ್ಯದ ಜನ ಇದು ದೇವಸ್ಥಾನದ ಜಾಗ ಎಂದು ಮನೆ ಕೆಡವಲು ಮುಂದಾಗಿದ್ದಾರೆ. ಸದ್ಯಕ್ಕೆ ಹೆಂಚು ತೆಗೆದಿದ್ದಾರೆ. ಆದರೆ, ಮನೆಯನ್ನ ಕೆಡವುತ್ತಾರೋ ಇಲ್ಲವೋ ಕಾದುನೋಡಬೇಕು. ಮನೆಯನ್ನ ಬೀಳಿಸೋದು ಬೇಡ ಎಂದು ಮನವಿ ಮಾಡಿದ ರಾಮಾಭೋವಿ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.05): ದೇವಸ್ಥಾನದ ಜಾಗ ಎಂದು ಕಟ್ಟಿದ್ದ ಮನೆಯನ್ನ ಇಡೀ ಊರಿನ ಜನ ಸೇರಿ ಹೆಂಚನ್ನು ತೆಗೆದು ಕೆಡವಲು ಮುಂದಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎರೇಹಳ್ಳಿ ತಾಂಡ್ಯದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ.
undefined
ಎರೆಹಳ್ಳಿ ತಾಂಡ್ಯದ ನಿವಾಸಿ ರಾಮಾ ಭೋವಿ ಎಂಬುವರು ವಾಸಕ್ಕೆಂದು ಮನೆ ಕಟ್ಟಿಕೊಂಡಿದ್ದರು. ಆದರೆ, ಊರಿನ ಜನ ಇದು ದೇವಸ್ಥಾನದ ಜಾಗ. ಇಲ್ಲಿ ಏಕೆ ಮನೆ ಕಟ್ಟಿದ್ದೀಯ ಎಂದು ಮನೆಯ ಮೇಲ್ಚಾವಣಿಗೆ ಹೊದಿಸಿದ್ದ ಹೆಂಚುಗಳನ್ನ ಸಂಪೂರ್ಣವಾಗಿ ಕೆಳಗೆ ಇಳಿಸಿದ್ದಾರೆ. ಮನೆ ಕೆಡವಲು ಮುಂದಾಗಿದ್ದರು. ಆದರೆ, ಸದ್ಯಕ್ಕೆ ಮನೆಯನ್ನ ಇನ್ನು ಬೀಳಿಸಿಲ್ಲ. ರಾಮಾಭೋವಿ ವಾಸಕ್ಕೆ ಮನೆ ಇಲ್ಲ ಎಂದು ತಾಂಡ್ಯಾದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಆದರೆ, ಈಗ ರಾಮಾಭೋವಿ ಮನೆ ಕಟ್ಟಿಕೊಂಡಿದ್ದ ಜಾಗ ದೇವಸ್ಥಾನದ್ದು ಎಂದು ಸರ್ಕಾರಿ ದಾಖಲೆಯಲ್ಲಿ ತೋರಿಸುತ್ತಿದೆ. ಹಾಗಾಗಿ, ಎರೇಹಳ್ಳಿ ತಾಂಡ್ಯದ ಗ್ರಾಮಸ್ಥರು ದೇವಸ್ಥಾನದ ಜಾಗದಲ್ಲಿ ಮನೆ ಕಟ್ಟಿದ್ದೀಯ ಎಂದು ಮನೆಯನ್ನ ಸಂಪೂರ್ಣವಾಗಿ ತೆಗೆಯಲು ತೀರ್ಮಾನಿಸಿದ್ದಾರೆ.
ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!
ತಾಂಡ್ಯದ ಜನರೆಲ್ಲಾ ಸೇರಿ ಮನೆ ಮೇಲೆ ಹತ್ತಿ ಹಂಚುಗಳನ್ನ ಸಂಪೂರ್ಣವಾಗಿ ಕೆಳಗೆ ಇಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಾಮಾಭೋವಿ ಹೊಟ್ಟೆ ಬಟ್ಟೆ ಕಟ್ಟಿ ಮನೆ ಕಟ್ಟಿಕೊಂಡಿದ್ದರು. ಆ ಮನೆಗೆ ಸರಿಯಾಗಿ ಗೋಡೆಗಳು ಕೂಡ ಇರಲಿಲ್ಲ. ಸೋಗೆ ಗರಿಯನ್ನು ಮಳೆ ಬಂದರೆ ಒಳಗಡೆ ನೀರು ಬರದಂತೆ ಅಡ್ಡಲಾಗಿ ಕಟ್ಟಿಕೊಂಡಿದ್ದರು. ಆದರೆ, ತಾಂಡ್ಯದ ಜನ ಇದು ದೇವಸ್ಥಾನದ ಜಾಗ ಎಂದು ಮನೆ ಕೆಡವಲು ಮುಂದಾಗಿದ್ದಾರೆ. ಸದ್ಯಕ್ಕೆ ಹೆಂಚು ತೆಗೆದಿದ್ದಾರೆ. ಆದರೆ, ಮನೆಯನ್ನ ಕೆಡವುತ್ತಾರೋ ಇಲ್ಲವೋ ಕಾದುನೋಡಬೇಕು. ರಾಮಾಭೋವಿ ಮನೆಯನ್ನ ಬೀಳಿಸೋದು ಬೇಡ ಎಂದು ಮನವಿ ಮಾಡಿದ್ದಾರೆ.