ಕೊರೋನಾ ಕಾಟ: ಸೋಂಕಿತರ ಅಸ್ಥಿ ವಿಸರ್ಜನೆಗೆ ನದಿ ತೀರದ ಜನ ಅಡ್ಡಿ

By Kannadaprabha News  |  First Published May 5, 2021, 12:00 PM IST

ಗ್ರಾಮದಲ್ಲಿ ಸೋಂಕು ಮತ್ತಷ್ಟು ಹರಡುವ ಭೀತಿ| ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆಗೆ ನಿಷೇಧ ಹೇರಿದ್ದರೂ ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ತೊಡಗಿರುವ ಪುರೋಹಿತರು| ಅಸ್ಥಿ ವಿಸರ್ಜನೆಗಾಗಿ ಬರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು| 


ಶ್ರೀರಂಗಪಟ್ಟಣ(ಮೇ.05): ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಗಂಜಾಂ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಅಸ್ಥಿ ಬಿಡಲು ಬಂದಿದ್ದವರನ್ನು ಹಿಂದಕ್ಕೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.

ಬೆಂಗಳೂರು ಸೇರಿ ಇತರೆಡೆ ಕೊರೋನಾದಿಂದ ಮೃತಪಟ್ಟವರ ಅಸ್ಥಿಯನ್ನು ಕಾವೇರಿ ನದಿಯಲ್ಲಿ ಬಿಡುವ ಸಂಬಂಧ ಕೊರೋನಾ ಸೋಂಕಿತರ ಸಂಬಂಧಿಕರು ಗಂಜಾಂನ ಸಂಗಮ ಸೇರಿ ಘೋಸಾಯಿಘಾಟ್‌ಗೆ ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸೋಂಕು ಮತ್ತಷ್ಟು ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿ ರಸ್ತೆಗೆ ಮರದ ತುಂಡು ಅಡ್ಡವಾಗಿಟ್ಟು, ಹಿಂದಕ್ಕೆ ಕಳುಹಿಸಿದ್ದಾರೆ. 

Latest Videos

undefined

"

ಸರ್ಕಾರದಿಂದ ಬರಬೇಕಿದ್ದನ್ನು ಕಾಯದೇ ಸ್ವಂತ ದುಡ್ಡಿನಲ್ಲಿ ಮಂಡ್ಯ ಜನರ ರಕ್ಷಣೆಗೆ ನಿಂತ ಸುಮಲತಾ

ತಾಲೂಕು ಆಡಳಿತದ ಪಟ್ಟಣ ಪುರಸಭೆ ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆಗೆ ನಿಷೇಧ ಹೇರಿದ್ದರೂ ಸ್ಥಳೀಯ ಪುರೋಹಿತರು ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕು ಆಡಳಿತ ನಿಷೇಧ ಹೇರಿದ್ದರೂ ಪೊಲೀಸ್‌ ಇಲಾಖೆ ಅಸ್ಥಿ ವಿಸರ್ಜನೆಗಾಗಿ ಬರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!