ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಆಂಧ್ರ ಪ್ರದೇಶ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರಿಗೆ ವಾಸ್ತವ್ಯ| ರೆಸಾರ್ಟ್ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯರು| ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳದ ಪೊಲೀಸರು| ಮಾಹಿತಿ ಪಡೆದು ರೆಸಾರ್ಟ್ ಮಾಲೀಕರ ವಿರುದ್ಧ ಎಫ್ಐಆರ್|
ಗಂಗಾವತಿ(ಮೇ.27): ಕಳೆದ ಎರಡು ದಿನಗಳ ಹಿಂದೆ ಗಂಗಾವತಿ ತಾಲೂಕಿನ ಜಂಗಲ್ ಟ್ರೀ ರೆಸಾರ್ಟ್ ಮಾಲೀಕರು ಲಾಕ್‌ಡೌನ್ ಉಲ್ಲಂಘನೆ ಮಾಡಿ ಪ್ರವಾಸಿಗರಿಗೆ ಪ್ರವೇಶ ನೀಡಿದ್ದರು ಸಹ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಳ್ಳದ ಕಾರಣ ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಗಿದೆ.
ಎರಡು ದಿನಗಳ ಹಿಂದೆ ಜಂಗಲಿ ಗ್ರಾಮದಲ್ಲಿ ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಆಂಧ್ರ ಪ್ರದೇಶ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರಿಗೆ ವಾಸ್ತವ್ಯ ನೀಡಿದ್ದರಿಂದ ಗ್ರಾಮಸ್ಥರು ರೆಸಾರ್ಟ್ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರ ಬಗ್ಗೆ ಪೋಲಿಸರು ತನಿಖೆ ಕೈಗೊಂಡಿದ್ದರು. ಈಗ ಎರಡು ದಿನಗಳು ಕಳೆದರು ಠಾಣೆಯಲ್ಲಿ ದೂರು ದಾಖಲುಗೊಳ್ಳದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಭಾವಿಗಳು ದೂರು ದಾಖಸಿಗೊಳ್ಳಬಾರದೆಂದು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿರುವದರಿಂದ ಹಿಂದೇಟು ಹಾಕುತ್ತಿದ್ದಾರೆಂದು ಗ್ರಾಮಸ್ಥರು ಅರೋಪಿಸಿದ್ದಾರೆ.
ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್ ಆರಂಭ?
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿವೈಎಸ್ಪಿ ಡಾ.ಚಂದ್ರಶೇಖರ ಅವರು, ರೆಸಾರ್ಟ್ ಪ್ರಾರಂಭಗೊಂಡಿರುವ ಬಗ್ಗೆ ಮಾಹಿತಿ ಇಲ್ಲ ಮಾಹಿತಿ ಪಡೆದು ಮಾಲೀಕರ ವಿರುದ್ಧ ಎಫ್ಐಆರ್ ಹಾಕಲಾಗವುದು, ತಹಸೀಲ್ದಾರ ಚಂದ್ರಕಾಂತ್ ಅವರು ತನಿಖೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.