ಬೆಳಗಾವಿ: ನಿಷ್ಕ್ರಿಯಗೋಂಡ ಕೊಳವೆ ಬಾವಿಗೆ ರಿಚಾರ್ಜ್ ಆಕಾಶಕ್ಕೆ ಚಿಗಿದ ನೀರು: ಅನ್ನದಾತನ ಮೊಗದಲ್ಲಿ ಮಂದಹಾಸ..!

By Girish GoudarFirst Published Aug 31, 2024, 4:32 PM IST
Highlights

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತರು ಏತ ನೀರಾವರಿ ಯೋಜನೆ ನೀರು ಹಳ್ಳದ ಮುಖಾಂತರವಾಗಿ ಹರಿಯುವ ನೀರನ್ನು ನಿಷ್ಕ್ರಿಯಗೊಂಡ ಕೊಳವೆ ಬಾವಿಗೆ ಹರಿಸಿ ಅದರ ಸುತ್ತಲೂ ಒಂದು ಕಿಲೋಮೀಟರ್ ದೂರದ 150  ಹೆಚ್ಚು ಬೋರವೆಲಗಳಿಂದ ಸಮರ್ಪಕವಾಗಿ ನೀರು ಬರುತ್ತಿದ್ದು ಕೆಲವು ಕೊಳವೆ ಬಾವಿಯಲ್ಲಿ 30 ಅಡಿಯಷ್ಟು ಅಂತರಕ್ಕೆ ನೀರು ಹೊರ ಜಿಗಿದು ದುಮ್ಮುತಿದ್ದು ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. 

ಬೆಳಗಾವಿ(ಆ.31): ಉತ್ತರ ಕರ್ನಾಟಕ ಭಾಗದಲ್ಲಿ  ವರ್ಷದಿಂದ ವರ್ಷಕ್ಕೆ ಮಳೆಗಾಲ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ರೈತರು ಹಠಕ್ಕೆ ಬಿದ್ದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾವಿರಾರು ಅಡಿ ಬೋರವೆಲ್ ಕೊರೆಸುವುದು ಸರ್ವೆ ಸಾಮಾನ್ಯವಾಗಿದೆ. ಬಹುತೇಕ ಹಲವು ಕೊಳವೆ ಬಾವಿಗಳಿಗೆ ಒಂದು ಹನಿ ನೀರು ಬಾರದೇ ರೈತರಿಗೆ ನಿರಾಸೆ ಮುಡಿಸಿದೆ. ಆದರೆ ಬೆಳಗಾವಿ ರೈತರು ಫೇಲಾದ ಬೋರ್‌ವೆಲ್ ಮರು ರಿಚಾರ್ಜ್ ಮಾಡಿ 150 ಹೆಚ್ಚು ಕೊಳವೆ ಬಾವಿಯಲ್ಲಿ ನೀರು ಬರುವಂತೆ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. 

ನಿಷ್ಕ್ರಿಯಗೋಂಡ ಕೊಳೆ ಬಾವಿಗೆ ರಿಚಾರ್ಜ್ ಆಕಾಶಕ್ಕೆ ಚಿಗಿದ ನೀರು

Latest Videos

ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತರು ಏತ ನೀರಾವರಿ ಯೋಜನೆ ನೀರು ಹಳ್ಳದ ಮುಖಾಂತರವಾಗಿ ಹರಿಯುವ ನೀರನ್ನು ನಿಷ್ಕ್ರಿಯಗೊಂಡ ಕೊಳವೆ ಬಾವಿಗೆ ಹರಿಸಿ ಅದರ ಸುತ್ತಲೂ ಒಂದು ಕಿಲೋಮೀಟರ್ ದೂರದ ೧೫೦ ಹೆಚ್ಚು ಬೋರವೆಲಗಳಿಂದ ಸಮರ್ಪಕವಾಗಿ ನೀರು ಬರುತ್ತಿದ್ದು ಕೆಲವು ಕೊಳವೆ ಬಾವಿಯಲ್ಲಿ ೩೦ ಅಡಿಯಷ್ಟು ಅಂತರಕ್ಕೆ ನೀರು ಜಿಗಿದು ಹೊರ ದುಮ್ಮುತಿದ್ದು ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಕಳೆದ ಇಪ್ಪತ್ತು ವರ್ಷದ ಹಿಂದೆ ರೈತ ವಿಜಯ ಅಣ್ಣಪ್ಪ ಗುಜರೆ ಎಂಬುವರು ಹಳ್ಳದ ಪಕ್ಕದಲ್ಲಿ ಮೂರುನೂರು ಅಡಿ ಒಂದು ಕೊಳವೆ ಬಾವಿ ಕೊರೆಸಲಾಗಿತ್ತು , ಅವತ್ತು ಆ ಬೋರವೆಲ್ ಒಳ್ಳೆ ನೀರು ಬಂದರೂ ಕ್ರಮೇಣವಾಗಿ ಹನಿ ನೀರು ಬಾರದೇ ರೈತರಲ್ಲಿ ನಿರಾಸೆ ಮೂಡಿಸಿತು, ಆದರೆ  ಸಾಮಾಜಿಕ ಜಾಲತಾಣಗಳಲ್ಲಿ ನೀರಾವರಿ ತಜ್ಞರು ಬೋರವೆಲ್ ರಿಚಾರ್ಜ್ ಬಗ್ಗೆ ಮಾಹಿತಿ ನೋಡಿ ಈ ಗ್ರಾಮದ ಕೆಲವು ರೈತರು ‌ಹಳ್ಳದ ದಂಡೆಯ ಪಕ್ಕದ ಕೊಳವೆ ಬಾವಿಗೆ ಹೆಚ್ಚುವರಿಯಾಗಿ ಹರಿದು ಬರುತ್ತೀರುವ ಏತ ನೀರಾವರಿ ಯೋಜನೆ ನೀರನ್ನು ಆ ಬೋರವೆಲ್ನಲ್ಲಿ ಬಿಟ್ಟು ಒಂದು ಮತ್ತು ಎರಡು ದಿನದಲ್ಲಿ ಅಕ್ಕ ಪಕ್ಕದ ಜಮೀನ ಕೊಳವೆ ಬಾವಿಯಲ್ಲಿ ಗಣನಿಯವಾಗಿ ನೀರು ಹೆಚ್ಚಳವಾಗಿದೆ . ಈ ವಿಷಯ ಇನ್ನೂಳಿಂದ ರೈತರಿಗೂ ಗೊತ್ತಾಗಿ ಎಲ್ಲರೂ ಜೊತೆಯಾಗಿ ಹಳ್ಳಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಾಣ ಮಾಡಿ ಹೆಚ್ಚುವರಿ ನೀರನ್ನು ಆ ಬೋರವೆಲ್ನಲ್ಲಿ ಹರಿಸಿದ ಪರಿಣಾಮ ಕೆಲವು ಕೊಳವೆ ಬಾವಿಯಲ್ಲಿ ೩೦ ಅಡಿಯಷ್ಟು ೧೫ ರಿಂದ ೨೦ ನಿಮಿಷ ನೀರು ಹೊರ ದುಮ್ಮುತಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್

ಇನ್ನು ಯುವ ರೈತ ಚೇತನ್ ಗುಜರೆ ಮಾತನಾಡಿ ನಾವು ಬಯಲು ಸೀಮೆಯ ಜನರು ಈ ಬಾಗದಲ್ಲಿ ಸರ್ಕಾರ ನಮಗೆ ಯಾವುದೇ ಏತ ನೀರಾವರಿ ಯೋಜನೆ ಕಾಮಗಾರಿ ಮಾಡಿಲ್ಲ, ಇದರಿಂದ ನಾವು ಕೃಷಿ ಚಟುವಟಿಕೆಗಳಿಗೆ ನೀರು ಇಲ್ಲದೆ ಪರದಾಟದ ಮಾಡುತ್ತೇವೆ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡು ಈ ಬಾಗದಲ್ಲಿ ಮಳೆಗಾಲ ಕಡಿಮೆಯಾಗಿ ಕೃಷಿ ಚಟುವಟಿಕೆ ಬಂದಾಗಿದೆ, ಕುಡಿಯೋ ನೀರಿಗಾದರು ಬೋರವೆಲ್ ಕೊರೆಯುತ್ತಿದ್ದೇವೆ,ನಮ್ಮ ಮನೆಯ ಹಿರಿಯರು ಇಪ್ಪತ್ತು ವರ್ಷದ ಹಿಂದೆ ಹಳ್ಳದ ಪಕ್ಕದಲ್ಲಿ ಟ್ರಿಲ್ ಮಾಡಲಾಗಿತ್ತು ವರ್ಷದಿಂದ ವರ್ಷಕ್ಕೆ ನೀರು ಕಡಿಮೆಯಾಗಿ ಐದಾರು ವರ್ಷದಲ್ಲಿ ಸಂಪುರ್ಣವಾಗಿ ಬತ್ತಿ ಹೊಗಿತ್ತು ಕುಡಿಯೋ ನೀರಿಗಾಗಿ ಸಂಕಷ್ಟ ಎದುರಾಯಿತು. 
ಒಂದು ದಿನ ಅಂತರ ಜಲ ಸಂಪನ್ಮೂಲ ಹೆಚ್ಚಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ನಾವು ಪಕ್ಕದ ಹಳ್ಳಕ್ಕೆ ಬಂದಿರುವ ನೀರನ್ನು ಬಾವಿ ಮುಖಾಂತರ ಬೋರವೆಲ್ ಹರಿಸಲಾಗಿತು ಎರಡು ಗಂಟೆಯಲ್ಲಿ ಇನ್ನುಳಿದ ಕೊಳವೆ ಬಾವಿಯಲ್ಲಿ ಗಣನಿಯವಾಗಿ ನೀರು ಹೆಚ್ಚಳವಾಗಿದೆ. 

ಈ ಕಾರ್ಯ ಪರಿಣಾಮಕಾರಿ ಇರುವುದರಿಂದ ಅಕ್ಕಪಕ್ಕದ ರೈತರು ಜೊತೆಯಾಗಿ ಹಣವನ್ನು ವಂತಿಕೆ ಮಾಡಿ ಹಳ್ಳಕ್ಕೆ ಅಡ್ಡಲಾಗಿ ಒಡ್ಡು ಕಟ್ಟಿಕೊಂಡು ಈ ಬೋರ್ವೆಲ್ ನಲ್ಲಿ ನೀರು ಹರಿಸಿದ ಪರಿಣಾಮ ನಮಗೆ ಹತ್ತು ತಿಂಗಳು ನಡೆಯುವಷ್ಟು ಭೂಮಿಯಲ್ಲಿ ನೀರು ಸಂಗ್ರಹವಾಗುತ್ತದೆ, ಮಳೆಗಾಲದಲ್ಲಿ ಕೆಲವು ಕೊಳವೆ ಬಾವಿಯಲ್ಲಿ ಗಣನಿಯವಾಗಿ ನೀರು ಹೆಚ್ಚಳವಾಗಿ ಈ ರೀತಿ ಗಂಗೆ ಮೇಲೆ ಚಿಮ್ಮುತಾಳೆ, ಸರ್ಕಾರ ಈ ಹಳ್ಳಕ್ಕೆ ಅಡ್ಡಲಾಗಿ ಒಂದು ಬಾಂದಾರ ನಿರ್ಮಾಣ ಮಾಡಿ ಕೊಡಬೇಕು ಇದರಿಂದ ಮತ್ತಷ್ಟು ಅಂತರ ಜಲ ಹೆಚ್ಚಾಗುತ್ತದೆ ಎಂದು ರೈತರು ಈ ಭಾಗದ ಜನಪ್ರತಿನಿಧಿಗಳಿಗೆ ಬೇಡಿಕೆ ಇಟ್ಟಿದ್ದಾರೆ. 

ಒಟ್ಟಾರೆಯಾಗಿ ಸರ್ಕಾರಗಳು ಅಂತರ್ಜಲ ಮಟ್ಟ ಹೆಚ್ಚಿಸಲು ಕೋಟ್ಯಾಂತರ ಖರ್ಚು ಮಾಡುತ್ತಿದೆ, ಈ ರೈತರು ಸರ್ಕಾರದ ಯಾವುದೇ ಯೋಜನೆ ಪಡೆಯದೆ ತಮ್ಮ ಸ್ವಂತ ಖರ್ಚಿನಿಂದಲೇ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಂಡು ಇನ್ನುಳಿದ ರೈತರಿಗೆ ಮಾದರಿಯಾಗಿದ್ದಾರೆ. ಹಳ್ಳಕ್ಕೆ ಅಡ್ಡಲಾಗಿ ಬಾಂಧವ ನಿರ್ಮಾಣಕ್ಕೆ ಸರ್ಕಾರ ಮುಂದೆ ಬೇಡಿಕೆ ಇಟ್ಟಿದ್ದು ಇನ್ನಾದರೂ ಇವರ ಬೇಡಿಕೆಗೆ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ಅನ್ನದಾತನ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ.

click me!