
ಹರಪನಹಳ್ಳಿ(ಆ.04): ಗ್ರಾಮದಲ್ಲಿ ಉಪಟಳ ಕೊಡುತ್ತಿದ್ದ ಚಿರತೆಯೊಂದನ್ನು ಗ್ರಾಮಸ್ಥರೇ ಸೆರೆಹಿಡಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ಸೋಮವಾರ ರಾತ್ರಿ ಜರುಗಿದೆ.
ತಾಲೂಕಿನ ಚಿಕ್ಕಮಜ್ಜಿಗೇರಿ ಗ್ರಾಮದ ಪೂಜಾರ ಬಸಪ್ಪ ಎಂಬುವವರ ಕರುವನ್ನು ಭಾನುವಾರ ರಾತ್ರಿ ಬಂದು ಅರ್ಧ ತಿಂದು ಬಿಟ್ಟು ಹೋಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕರುವಿನ ಶವವನ್ನು ರೇಷ್ಮೆಗೂಡು ಸಂಗ್ರಹಿಸುವ ಮನೆಯ ಬಾಗಿಲ ಒಳಗಡೆ ಗೆಜ್ಜೆಯೊಂದಿಗೆ ಕಟ್ಟಿ, ಉದ್ದಕ್ಕೆ ಹಗ್ಗ ಕಟ್ಟಿ ಸಮೀಪದ ಟ್ರ್ಯಾಕ್ಟರ್‌ನಲ್ಲಿ ಮಲಗಿದ್ದರು.
ನಾಯಿ ಹಿಡಿಯಲು ಬಂದ ಚಿರತೆ, ಕೋಳಿ ಹಿಡ್ಕೊಂಡು ಹೋಯ್ತು..!
ಹಗ್ಗ ಎಳೆದರೆ ಮನೆಯ ಬಾಗಿಲು ಮುಚ್ಚುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರು. ಸೋಮವಾರ ರಾತ್ರಿ 7.30ಕ್ಕೆ ಪುನಃ ಆಗಮಿಸಿದ ಚಿರತೆ ಬಾಗಿಲಿಗೆ ಕಟ್ಟಿದ್ದ ಹೋರಿ ಕರುವಿನ ಮಾಂಸ ತಿನ್ನಲು ಹೋದಾಗ ಗೆಜ್ಜೆ ಶಬ್ದ ಬಂದಿದೆ. ಆಗ ಗ್ರಾಮಸ್ಥರು ಹಗ್ಗ ಎಳೆದು ಬಾಗಿಲು ಮುಚ್ಚಿದ್ದು ಚಿರತೆ ಸೆರೆಯಾಗಿದೆ. ಚಿರತೆಯ ಹಾವಳಿ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.