ಅಥಣಿ ಉಪ ಚುನಾವಣೆ ಬಹಿಷ್ಕರಿಸಿದ ಕೃಷ್ಣಾತೀರದ ಜನ

By Web DeskFirst Published Nov 20, 2019, 10:08 AM IST
Highlights

ನೆರೆ ಬಂದು ಮೂರು ತಿಂಗಳಾದ್ರೂ ಇನ್ನೂ ಸರ್ಕಾರದಿಂದ ಸೂಕ್ತ ಪರಿಹಾರ ಬಂದಿಲ್ಲ| ಹೀಗಾಗಿ ತಾಲೂಕಿನ‌ ಜನವಾಡ, ಹುಲಗಬಾಳಿ, ಕರ್ಲಟ್ಟಿ, ರಾಮವಾಡಿ ಗ್ರಾಮದ ಜನರು ಅಥಣಿ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ| ಭೀಕರ ಪ್ರವಾಹದಿಂದ ನಮ್ಮ ಇನ್ನು ಮೂರಾಬಟ್ಟೆಯಾಗಿದೆ| ನಮಗೆ ಇನ್ನೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ| ಹೀಗಾಗಿ ಮತ ಪೆಟ್ಟಿಗೆಗಳನ್ನ ಊರ ಒಳಗೆ ಬರಲು ಬಿಡೋದಿಲ್ಲ ಎಂದು ಹೇಳುತ್ತಿರುವ ಗ್ರಾಮಸ್ಥರು| 

ಅಥಣಿ(ನ.20): ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗದ ಹಿನ್ನಲೆಯಲ್ಲಿ ಕೃಷ್ಣಾತೀರದ ಜನ ಅಥಣಿ ಉಪ ಚುನಾವಣೆಗೆ  ಬಹಿಷ್ಕಾರ ಹಾಕಿದ್ದಾರೆ. 

ನೆರೆ ಬಂದು ಮೂರು ತಿಂಗಳಾದ್ರೂ ಇನ್ನೂ ಸರ್ಕಾರದಿಂದ ಸೂಕ್ತ ಪರಿಹಾರ ಬಂದಿಲ್ಲ, ಹೀಗಾಗಿ ತಾಲೂಕಿನ‌ ಜನವಾಡ, ಹುಲಗಬಾಳಿ, ಕರ್ಲಟ್ಟಿ, ರಾಮವಾಡಿ ಗ್ರಾಮದ ಜನರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. 
ಈ ಬಗ್ಗೆ ಮಾತನಾಡಿದ ಗ್ರಾಮಸ್ಥರು ಭೀಕರ ಪ್ರವಾಹದಿಂದ ನಮ್ಮ ಇನ್ನು ಮೂರಾಬಟ್ಟೆಯಾಗಿದೆ. ನಮಗೆ ಇನ್ನೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ, ಹೀಗಾಗಿ ಮತ ಪೆಟ್ಟಿಗೆಗಳನ್ನ ಊರ ಒಳಗೆ ಬರಲು ಬಿಡೋದಿಲ್ಲ ಎಂದು ಹೇಳುತ್ತಿದ್ದಾರೆ. 

ಕುಮಟಳ್ಳಿ ಬಿಜೆಪಿಗೆ ಸೇರ್ಪಡೆ: ಅಥಣಿಯಲ್ಲಿ ಭುಗಿಲೆದ್ದ ಅಸಮಾಧಾನ

ನೆರೆಗೆ ತುತ್ತಾದ ಗ್ರಾಮಗಳ ಬಹುತೇಕ ಜನರಿಗೆ ತಾತ್ಕಾಲಿಕ ಪರಿಹಾರವೂ ಇನ್ನೂ ಸಿಕ್ಕಿಲ್ಲ. ಪ್ರವಾಹದಲ್ಲಿ ಬಿದ್ದ ಮನೆಗಳಿಗೆ, ಹಾನಿಯಾದ ಬೆಳೆಗೆ ಪರಿಹಾರ ಸಿಕ್ಕಿಲ್ಲ, ಇನ್ನು ಸರ್ವೆಯಲ್ಲೇ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಬಿದ್ದ ಮನೆಗಳ ಸರ್ವೆಯಲ್ಲೂ ಮೂರು ಬಾರಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ ಎಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.  

10 ಸಾವಿರಕ್ಕೂ ಅಧಿಕ ಮತಗಳನ್ನ ಹೊಂದಿರುವ ಹುಲಗಬಾಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಜನರು ಉಪ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಜೊತೆಗೆ ರಾಜಕಾರಣಿಗಳು ಮತ ಯಾಚನೆಗೆ ತಮ್ಮ ಊರುಗಳಿಗೆ ಬರದಂತೆ ತಾಕೀತು ಗ್ರಾಮಸ್ಥರು ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2005-06 ರಲ್ಲಿ ಪ್ರವಾಹ ಬಂದಾಗಲೇ‌ ಜನವಾಡ ಹಾಗೂ ಹುಲಗಬಾಳಿ ಗ್ರಾಮಗಳು ಸ್ಥಳಾಂತರ ಮಾಡುವಂತೆ  ಘೋಷಣೆಯಾಗಿತ್ತು. ಘೋಷಣೆಯಾಗಿ 13 ವರ್ಷಗಳಾದ್ರೂ ಜಿಲ್ಲಾಡಳಿತ ಮಾತ್ರ ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಜಾಗ ತೋರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 
 

click me!