ಬಾಗಲಕೋಟೆ: ಮಕ್ಕಳ ಕಳ್ಳರೆಂಬ ಸಂಶಯ, ಇಬ್ಬರಿಗೆ ಥಳಿಸಿ ಕಾರಿಗೆ ಬೆಂಕಿ ಇಟ್ಟ ಗ್ರಾಮಸ್ಥರು

By Girish Goudar  |  First Published Apr 7, 2023, 8:41 PM IST

ಮೊದಲು ಕಾರಿನಲ್ಲಿದ್ದ ಇಬ್ಬರು ಯುವಕರನ್ನ ಥಳಿಸಿ ಬಳಿಕ ರಸ್ತೆಯ ಪಕ್ಕದಲ್ಲಿಯೇ ಇದ್ದ ಕಾರಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು. ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿ ಗ್ರಾಮದ ಬಳಿ ನಡೆದ ಘಟನೆ. 


ಬಾಗಲಕೋಟೆ(ಏ.07):  ಮಕ್ಕಳ ಕಳ್ಳರೆಂದು ಸಂಶಯಪಟ್ಟು ಕಾರು ಬೆನ್ನಟ್ಟಿದ ಗ್ರಾಮಸ್ಥರು ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿ ಗ್ರಾಮದ ಹೊರವಲಯದಲ್ಲಿ ಇಂದು(ಶುಕ್ರವಾರ) ನಡೆದಿದೆ. 

ಮೊದಲು ಕಾರಿನಲ್ಲಿದ್ದ ಇಬ್ಬರು ಯುವಕರನ್ನ ಗ್ರಾಮಸ್ಥರು ಥಳಿಸಿದ್ದಾರೆ. ಬಳಿಕ ರಸ್ತೆಯ ಪಕ್ಕದಲ್ಲಿಯೇ ಇದ್ದ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಥಳಿತಕ್ಕೊಳಗಾದವರಿಗೆ ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅಂತ ತಿಳಿದು ಬಂದಿದೆ. 

Tap to resize

Latest Videos

undefined

BAGALAKOTE: ಯುವ ಜನಾಂಗ ಮತದಾನಲ್ಲಿ ಭಾಗವಹಿಸುವ ಸಲುವಾಗಿ ಸಂಚಾರಿ ಅಣಕು ಮತಗಟ್ಟೆ ಅಭಿಯಾನ

ಘಟನೆ ಬೆನ್ನಲ್ಲೇ ಬಾಗಲಕೋಟೆ ಎಸ್.ಪಿ.ಜಯಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಮೂಲದ ಇಬ್ಬರು ಯುವಕರನ್ನ ಕಾರಿನಲ್ಲಿ ಕರೆದೊಯ್ಯುತ್ತಿತ್ತು. ಹೀಗಾಗಿ ಇವರು ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ಕಾರಿನಲ್ಲಿದ್ದವರಿಗೆ ಥಳಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ತನಿಖೆಯಿಂದಷ್ಟೇ ಘಟನೆ ನಿಖರವಾದ ಕಾರಣ ತಿಳಿದು ಬರಬೇಕಿದೆ. ಕಲಾದಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!