Viral Video: ನಿತ್ಯ ಬಾಳೆಹಣ್ಣು ಕೊಡುತ್ತಿದ್ದ ವೃದ್ಧ ಸಾವು; ಮೃತದೇಹಕ್ಕೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ ಮಂಗ!

By Ravi Janekal  |  First Published Apr 7, 2023, 9:11 AM IST

ಮನುಷ್ಯರೊಳಗೆ ಮಾನವೀಯತೆ ಮರೆಯಾಗುತ್ತಿರುವ ಕಾಲದಲ್ಲಿ ಮಂಗವೊಂದು ಮಾನವೀಯತೆ ಮೆರೆದಿದೆ. ಈ ವಿಡಿಯೋ ನೋಡುತ್ತಿದ್ದರೆ ಎಂಥವರ ಮನಸು ಒಂದು ಕ್ಷಣ ಕಲಕಿಬಿಡುತ್ತದೆ.


ವಿಜಯನಗರ (ಏ.7): ಮನುಷ್ಯರೊಳಗೆ ಮಾನವೀಯತೆ ಮರೆಯಾಗುತ್ತಿರುವ ಕಾಲದಲ್ಲಿ ಮಂಗವೊಂದು ಮಾನವೀಯತೆ ಮೆರೆದಿದೆ. ಈ ವಿಡಿಯೋ ನೋಡುತ್ತಿದ್ದರೆ ಎಂಥವರ ಮನಸು ಒಂದು ಕ್ಷಣ ಕಲಕಿಬಿಡುತ್ತದೆ.

ವಿಜಯನಗರದಲ್ಲಿ ನಡೆದಿರುವ ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಮನುಷ್ಯರಲ್ಲಿ ಕಣ್ಮರೆಯಾಗುತ್ತಿರುವ ಮಾನವೀಯತೆ, ಪ್ರೀತಿ, ಮಮಕಾರ ಮಂಗನಲ್ಲಿ ನೋಡುತ್ತಿದ್ದರೆ ಕಣ್ಣು ಒದ್ದೆಯಾಗುವಂತಿದೆ

Tap to resize

Latest Videos

undefined

ಸಾವಿನಲ್ಲೂ ಒಂದಾದ ತಾಯಿ-ಮಗ; ವಿಜಯಪುರದಲ್ಲಿ ಮನಕಲುಕುವ ಘಟನೆ

ತನಗೆ ನಿತ್ಯ ಬಾಳೆಹಣ್ಣು ನೀಡುತ್ತಿದ್ದ ವೃದ್ಧನ ಮರಣ ಸುದ್ದಿ ತಿಳಿದು ದುಃಖಿಸಿ ಅಂತಿಮ ಗೌರವ ಸಲ್ಲಿಸಿದ ಹನುಮ! ದಿನನಿತ್ಯ ಹಣ್ಣುಗಳನ್ನು ನೀಡಿ ಸಹಾಯ ಮಾಡಿದ ವ್ಯಕ್ತಿಯ ಸಾವಿನ ಸುದ್ದಿ ತಿಳಿದು ದುಃಖಿಸಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಹಗರಿಬೊಮ್ಮನ ಹಳ್ಳಿಯಲ್ಲಿ ಇಂಥದೊಂದು ಮನುಕುಲ ನಾಚುವಂತಹ ಘಟನೆ ನಡೆದಿದೆ. 

ಪರಶುರಾಮ್ ಷಾ (88) ಮೃತಪಟ್ಟ ವೃದ್ಧ. ವೃದ್ಧ ಪರಶುರಾಮ ಮಂಗನಿಗೆ ನಿತ್ಯ ಬಾಳೆ ಹಣ್ಣು ಕೊಡುತ್ತಿದ್ದ. ಎರಡು ಮೂರು ತಿಂಗಳ ಹಿಂದೆಯಷ್ಟೆ ಪರಶುರಾಮ ಮತ್ತು ಮಂಗನ ಒಡನಾಟ ಶುರುವಾಗಿತ್ತು. ಮಂಗವು ಪರಶುರಾಮ ತೋರಿಸುವ ಕಾಳಜಿಗೆ ಮನಸೋತಿತ್ತು. ಆದರೆ  ಶ್ರೀರಾಮ ನವಮಿಯ ದಿನದಂದು ಪರಶುರಾಮ ವಯೋಸಹಜ ಕಾಯಿಲೆಯಿಂದ ಮೃತರಾಗುತ್ತಾರೆ.  ಪರಶುರಾಮ ಅತಿಯಾಗಿ ಮದ್ಯ ಸೇವಿಸುತ್ತಿರುವುದು ಸಾವಿನ ಹಿಂದಿನ ಕಾರಣವಿರಬಹುದು.

ರಸ್ತೆಯಲ್ಲಿ ಚೆಲ್ಲಿದ ಕಾಳು ಹೆಕ್ಕಲು ವೃದ್ಧನಿಗೆ ನೆರವಾದ ಪೊಲೀಸರು: ವಿಡಿಯೋ ವೈರಲ್

ಇನ್ನು ವಿಚಿತ್ರವೆಂದರೆ  ಸಾವಿನ ಹಿಂದಿನ ದಿನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಮದ್ಯಪ್ರಿಯರಾಗಿರೋ ಕಾರಣ   ಮದ್ಯದ ಬಾಟಲ್ ಮಾದರಿಯ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಸಹ ಆಚರಿಸಿದ್ದ ಕುಟುಂಬಸ್ಥರು ಪರಶುರಾಮ, ಮರುದಿನವೇ ಸಾವು. ಹುಟ್ಟು ಸಾವು ಒಟ್ಟಿಗೆ ನಡೆದುಹೋಗಿದೆ. ರಾಮನ ಹಿಂದೆ ವಾನರ ಸೈನ್ಯ ಇರುವಂತೆ ಪರಶುರಾಮನ ಹಿಂದೆ ಈ ಮಂಗ ಬಾಳೆ ಹಣ್ಣು ತಿಂದುಕೊಂಡು ಸುತ್ತಾಡಿಕೊಂಡು ಕಾಲ ಕಳೆಯಬೇಕಿತ್ತು. ಆದರೆ ಪರಶುರಾಮನ ಸಾವಿನಿಂದ ಮಂಗ ಅನಾಥವಾಗಿದೆ.

click me!