ಭಾರೀ ಮಳೆಗೆ ಮನೆ ಹಾನಿಯಾದ್ರೆ ಗ್ರಾಮಾಡಳಿತ ತಕ್ಷಣಕ್ಕೆ ಸ್ಪಂದಿಸಲಿ: ಶಾಸಕ ಗೋಪಾಲಕೃಷ್ಣ ಬೇಳೂರು

By Kannadaprabha News  |  First Published Jul 10, 2024, 9:49 PM IST

ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣವೇ ಗ್ರಾಮಾಡಳಿತ ಸ್ಪಂದಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಮಲೆನಾಡಿನ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ಅದರಲ್ಲೂ ಸಾಗರ ಕ್ಷೇತ್ರದ ಬ್ಯಾಕೋಡು ಹಾಗೂ ತುಮರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು ಇದುವರೆಗೂ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದರು.
 


ಆನಂದಪುರ (ಜು.10): ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣವೇ ಗ್ರಾಮಾಡಳಿತ ಸ್ಪಂದಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಮಲೆನಾಡಿನ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ಅದರಲ್ಲೂ ಸಾಗರ ಕ್ಷೇತ್ರದ ಬ್ಯಾಕೋಡು ಹಾಗೂ ತುಮರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು ಇದುವರೆಗೂ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದರು.

ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಲಲಿತಮ್ಮಾ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಮನೆ ಕಳೆದುಕೊಂಡವರಿಗೆ ಸಹಾಯಧನ ನೀಡಿ ಮಾತನಾಡಿ, ರಾಜ್ಯದ ಬಹುತೇಕ ಕಡೆ ಬಾರಿ ಪ್ರಮಾಣದ ಮಳೆಯಾಗುತ್ತಿದ್ದು ಅನಾಹುತಗಳು ಸಂಭವಿಸಿದೆ. ಆದ್ದರಿಂದ ಮಳೆ ಯಾವ ಭಾಗದಲಾಗುತ್ತದೆ ಎಂಬುದು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ಸಾಗರ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳು ರಜೆ ಹಾಕದೆ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

Tap to resize

Latest Videos

undefined

ಮಳೆ ವಿಪರೀತವಾಗಿ ಮನೆಗಳಿಗೆ ಅನಾಹುತ ಉಂಟಾದರೆ, ಗ್ರಾಮಡಳಿತ ತಕ್ಷಣ 10 ಸಾವಿರ ರುಪಾಯಿ ಸಹಾಯಧನ ನೀಡಬೇಕು. ರಾಜ್ಯ ಸರ್ಕಾರ ಈ ಬಾರಿ ಹೊಸ ಮನೆ ನೀಡದೆ, ಸುಮಾರು ವರ್ಷಗಳ ಹಿಂದೆ ಸ್ಲಂ ಬೋರ್ಡ್‌ನಲ್ಲಿ ಆರಂಭಗೊಂಡ ಮನೆಗಳು ಇದುವರೆಗೂ ಪೂರ್ಣಗೊಂಡಿಲ್ಲ. ಅಂತಹ ಮನೆಗಳನ್ನು ಈ ಬಾರಿ ಸಂಪೂರ್ಣಗೊಳಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಚರ್ಚಿಸಿದ್ದು, ಉಳಿದಂತೆ ಎಲ್ಲಾ ಮನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಹೊಸ ಕೆರೆ ನಿರ್ಮಿಸಿ, ನೀರು ತುಂಬಿಸುವ ಕಾರ್ಯ ರಾಜ್ಯದಲ್ಲಿಯೇ ಪ್ರಥಮ: ಬಸವರಾಜ ರಾಯರಡ್ಡಿ

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ವಾರಕ್ಕೆ ಎರಡು ಬಾರಿ ಔಷಧಿ ಸಿಂಪಡಣೆ ಮಾಡಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವತಿ ಕೋವಿ, ಉಪಾಧ್ಯಕ್ಷ ಚೌಡಪ್ಪ, ಮಾಜಿ ಅಧ್ಯಕ್ಷರ ಶರತ್ ನಾಗಪ್ಪ, ಆನಂದ ಹರಟೆ, ಲೋಕೇಶ್, ಪದ್ಮಣ್ಣ, ಚೇತನ್ ರಾಜ್ ಕಣ್ಣೂರ್, ಸೋಮಶೇಖರ್ ಲೌಗೆರೆ, ಚಂದ್ರಪ್ಪ, ರೆಹಮತ್ತುಲ್ಲಾ, ಉಮೇಶ್, ಕಂದಾಯ ಅಧಿಕಾರಿಗಳಾದ ಕವಿರಾಜ್, ರಘು, ಹಾಗೂ ಪಕ್ಕದ ಅನೇಕ ಮುಖಂಡರು ಇದ್ದರು.

click me!