Vijayapura: ಠಾಗೋರ್ ಶಾಲೆಯಲ್ಲಿ ಪುಡ್ ಫೆಸ್ಟಿವಲ್‌ : ಸಮೋಸಾ, ಬಿರಿಯಾನಿ ತಯಾರಿಸಿದ ಮಕ್ಕಳು..!

By Sathish Kumar KH  |  First Published Jan 8, 2023, 10:49 PM IST

• ಪಕ್ಕಾ ವ್ಯಾಪಾರಸ್ಥರಂತೆ ತಿನಿಸು ಮಾರಾಟ ಮಾಡಿದ ಶಾಲಾ ಮಕ್ಕಳು..!
• ವ್ಯವಹಾರ ಜ್ಞಾನ ಬೆಳೆಸಲು ಸಹಕಾರಿಯಾಯ್ತು ಪುಡ್‌ಫೆಸ್ಟ್..!
 


ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ.08): ಎಲ್ಲಿ ನೋಡಿದ್ರೂ ತರಹೇವಾರಿ ತಿಂಡಿ ತಿನಿಸು. ಭರ್ಜರಿ ವ್ಯಾಪಾರ ನಡೆಸಿ ,ಕಿಸೆ ತುಂಬಿಸಿಕೊಂಡು ಖುಷ್‌ ಆದ ವಿದ್ಯಾರ್ಥಿಗಳು.. ಅಂದಹಾಗೇ ಮಕ್ಕಳೇ ತಯಾರಿಸಿದ ಖಾದ್ಯಗಳ ಮಾರಾಟಕ್ಕೆ ವೇದಿಕೆ ಒದಗಿಸಿದ್ದು ಫುಡ್ ಫೆಸ್ಟ್. ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ಫುಡ್ ಫೆಸ್ಟ್ ನಡೆಯಿತು. ಈ ಫುಡ್ ಫೆಸ್ಟ್ ನಲ್ಲಿ ವಿದ್ಯಾರ್ಥಿಗಳೇ ಷೆಪ್ ಆಗಿದ್ದರು, ಅವರೇ ತಯಾರಿಸಿದ ವಿವಿಧ ಆಹಾರ ಖಾದ್ಯಗಳನ್ನು  ತಯಾರಿಸಿ ಮಾರಾಟ ಮಾಡಿ ಸಂತಸ ಪಟ್ಟರು. 

Latest Videos

undefined

ಸಮೋಸಾ, ಬಜ್ಜಿ, ವೆಜ್ ಬಿರಿಯಾನಿ ತಯಾರಿಸಿದ ಮಕ್ಕಳು..! 
ಮಕ್ಕಳು ಸಮೋಸಾ, ಬಜ್ಜಿ, ವೆಜ್ ಬಿರಿಯಾನಿ, ಮಸಾಲಾ ರೈಸ್, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್‌ ಹಲ್ವಾ,ಚಕ್ಕುಲಿ, ರವೆ ಉಂಡೆ ಸೇರಿದಂತೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ತಾವೇ ತಯಾರಿಸಿದರು. ಬಗೆಬಗೆಯ ತಿನಿಸುಗಳನ್ನು ಪಕ್ಕಾ ವೃತ್ತಿಪರ ವರ್ತಕರಂತೆ ಮಾರಾಟ ಮಾಡಿ ಲಾಭಗಳಿಸಿ ಸಂಭ್ರಮಿಸಿದರು. ಮಕ್ಕಳಲ್ಲಿ ವ್ಯಾಪಾರ-ವಹಿವಾಟು, ಲಾಭ ಕುರಿತು ಅರಿವು ಮೂಡಿಸಲು ಶಾಲಾ ಆಡಳಿತ ಮಂಡಳಿಯು ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ರೂಪಿಸಿತ್ತು. ಅದರಂತೆ ಮಕ್ಕಳು ಪೋಷಕರ ನೆರವಿನಿಂದ ವಿಭಿನ್ನ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಶಾಲಾ ಆವರಣದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಮಳಿಗೆಗಳಲ್ಲಿ ತಿನಿಸುಗಳನ್ನು ಮಾರಾಟ ಮಾಡಿದರಲ್ಲದೇ ಖರ್ಚುವೆಚ್ಚ ಹಾಗೂ ತಾವುಗಳಿಸಿದ ಲಾಭಾಂಶ ಕುರಿತು ಶಿಕ್ಷಕರಿಗೆ ವರದಿ ನೀಡಿದರು.

ಬಿಜೆಪಿ, ಕಾಂಗ್ರೆಸ್ಸಿನಲ್ಲಿ ಸೀಡಿ ಫ್ಯಾಕ್ಟರಿಗಳಿವೆ: ಬಸನಗೌಡ ಪಾಟೀಲ ಯತ್ನಾಳ್‌ ಬಾಂಬ್‌

ಪಕ್ಕಾ ಅಂಗಡಿಕಾರರಂತೆಯೆ ಮಕ್ಕಳ ವ್ಯಾಪಾರ..!
ಶಾಲೆಯ ಆವರಣದಲ್ಲಿ 80 ಕ್ಕೂ ಹೆಚ್ಚು  ಮಳಿಗೆಗಳಲ್ಲಿ ಪ್ರತಿ ನಾಲ್ವರು ವಿದ್ಯಾರ್ಥಿಗಳು  ವ್ಯಾಪಾರ ವಹಿವಾಟು ನಡೆಸಿದರು. ಪಕ್ಕಾ ಹೊಟೆಲ್ ಸ್ಟೈಲ್ ನಲ್ಲಿ ಹಾಗೂ ಬೀದಿ ಬದಿಯ ಚಾಟ್ಸ್ ಅಂಗಡಿಗಳಲ್ಲಿ ಅದ್ಯಾವ ರೀತಿ ವ್ಯವಹರಿಸ್ತಾರೋ ಅದೇ ರೀತಿ ವ್ಯವಹರಿಸಿದರು. ಸಂಜೆ 4 ಕ್ಕೆ ಆರಂಭಗೊಂಡ ಆಹಾರ ಮೇಳ ಸಾಯಂಕಾಲ 7 ರ ಹೊತ್ತಿಗೆ ಮುಕ್ತಾಯವಾಯಿತು. ಪೋಷಕರು, ಅವರ ಸಂಬಂಧಿಕರು, ಶಿಕ್ಷ ಕರು ಅಲ್ಲದೇ ಸಾರ್ವಜನಿಕರೂ ಕೂಡ ತಿನಿಸುಗಳನ್ನು ಖರೀದಿಸಿ ಸವಿದರು. ಇನ್ನೂ ಮಕ್ಕಳು ತಯಾರಿಸಿದ ರುಚಿ-ಶುಚಿಯಾದ ವಿವಿಧ ಖಾದ್ಯಗಳನ್ನು ಸವಿದು ಬಾಯಿ ಚಪ್ಪರಿಸಿದರು‌. ಅಲ್ಲದೇ ಮಕ್ಕಳಿಗೆ ವ್ಯವಹಾರ ಜ್ಞಾನದ ಸಲುವಾಗಿ ಆಯೋಜನೆ ಮಾಡಲಾಗಿದ್ದ ಫುಡ್ ಪೆಸ್ಟ್ ನ್ನು ಶ್ಲಾಘಿಸಿದರು.

'ಮರಣವೇ ಮಹಾನವಮಿ' ಎಂಬಂತೆ ಸಿದ್ದೇಶ್ವರ ಶ್ರೀಗಳು ವಿದಾಯ: ಕೂಡಲಸಂಗಮ, ಗೋಕರ್ಣದಲ್ಲಿ ಚಿತಾಭಸ್ಮ ವಿಸರ್ಜನೆ

ಮಕ್ಕಳ ವ್ಯವಹಾರ ಜ್ಞಾನಕ್ಕೆ ಪಾಲಕರು ಪಿದಾ..!
ಇನ್ನೂ ಉತ್ತಮ ವ್ಯವಹಾರ ಹಾಗೂ ರುಚಿಕರ ಖಾದಗಯ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಲಾಯಿತು. ಫುಡ್ ಫೆಸ್ಟ್ ಸಹ ಪಠ್ಯೇತರ ಚಟುವಟಿಕೆಯಾಗಿ ವಿದ್ಯಾರ್ಥಿಗಳ ವ್ಯವಹಾರದ ಜ್ಞಾನಮಟ್ಟ ಹೆಚ್ಚಿಸಿದರೇ ಇತ್ತ ಪಾಲಕರು ತಮ್ಮ ಮಕ್ಕಳ ವ್ಯವಹಾರ ಚತುರತೆ ಕಂಡು ಫುಲ್ ಖುಷ್ ಆದರು.

click me!