ಮಹಾನಗರ ಪಾಲಿಕೆ ಚುನಾವಣೆ ದಿನೆ ದಿನೆ ಕಾವು ಪಡೆದುಕೊಳ್ತಿದೆ. ಅದ್ರಲ್ಲು ಟಿಕೆಟ್ ಸಿಗದೆ ಬಂಡಾಯವೆದ್ದವರು ಆಯಾ ಪಕ್ಷಗಳಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ. 23): ಮಹಾನಗರ ಪಾಲಿಕೆ ಚುನಾವಣೆ ದಿನೆ ದಿನೆ ಕಾವು ಪಡೆದುಕೊಳ್ತಿದೆ. ಅದ್ರಲ್ಲು ಟಿಕೆಟ್ ಸಿಗದೆ ಬಂಡಾಯವೆದ್ದವರು ಆಯಾ ಪಕ್ಷಗಳಿಗೆ ಕಂಟಕವಾಗಿ ಪರಿಣಮಿಸಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯವೆದ್ದ ರೆಬಲ್ ಮುಖಂಡರಿಗೆ ಪಕ್ಷ ಪ್ರಾಥಮಿಕ ಸ್ಥಾನಕ್ಕೆ ಕೋಕ್ ನೀಡುವ ಶಾಕ್ ಕೊಟ್ಟಿದೆ. ಚುನಾವಣೆ ಘೋಷಣೆ ಆದಾಗಲೇ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಉಂಟಾಗಿತ್ತು. ಬಿಜೆಪಿ ಟಿಕೆಟ್ ಪಡೆದರೆ ಗೆಲವು ಸುಲಭ ಅಂತಾ ಬಿಜೆಪಿ ಟಿಕೆಟ್ ಗಾಗಿ ಮುಖಂಡರು, ಕಾರ್ಯಕರ್ತರು ಮುಗಿಬಿದ್ದಿದ್ದರು. ಆರಂಭದಲ್ಲಿ ಬಿಜೆಪಿಗೆ ಈ ವಿಚಾರ ಒಳ್ಳೆಯ ಇಮೇಜ್ ನೀಡಿತ್ತು. ಆದ್ರೀಗ ಇದೆ ವಿಚಾರ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಪಾಲಿಕೆಯ 35 ವಾರ್ಡ್ ಪೈಕಿ 33 ವಾರ್ಡ್‌ಗಳಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಟಿಕೆಟ್ ನೀಡಲು ನಾಯಕರು ಹರಸಾಹಸ ಪಟ್ಟಿದ್ದರು. ಇತ್ತ ಮನವೊಲಿಕೆಗೆ ಪ್ರಯತ್ನಗಳು ನಡೆದಿದ್ದವು. ಆದ್ರೆ ಬಂಡಾಯ ಮಾತ್ರ ಶಯಮನವಾಗದೆ ಬಹುತೇಕ ಕಡೆಗಳಲ್ಲಿ ಬಿಜೆಪಿ ವಿವಿಧ ಹುದ್ದೆಗಳಲ್ಲಿ ಇದ್ದವರೆ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಟಿಕೆಟ್ ಸಿಗದೆ ನಿರಾಶೆಗೊಳಗಾದವರು ತಮ್ಮ ಪತ್ನಿ, ಕುಟುಂಬ ಸದಸ್ಯರನ್ನ ಕಣಕ್ಕೆ ಇಳಿಸಿದ್ದಾರೆ. ಪಕ್ಷದ ವಿರುದ್ಧವೇ ಸಮರಕ್ಕಿದ 14 ಮುಖಂಡರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಚಬಾಳ ಶಾಕ್ ನೀಡಿದ್ದಾರೆ. ಪಕ್ಷದಿಂದ ಕೋಕ್ ನೀಡಿ ಬಿಸಿ ಮುಟ್ಟಿಸಿದ್ದಾರೆ.
6 ವರ್ಷ ಪಕ್ಷದ ಕಾರ್ಯಚಟುವಟಿಕೆಯಿಂದ ಔಟ್..!
ಬಂಡಾಯವೆದ್ದ 14 ಮುಖಂಡರಿಗೆ ಬಿಜೆಪಿ ಶಾಕ್ ಕೊಟ್ಟಿದೆ. ಮುಂದಿನ 6 ವರ್ಷಗಳ ಪಕ್ಷದ ಕಾರ್ಯ ಚಟುವಟಿಕೆಗಳಿಂದ ಎಲ್ಲರನ್ನೂ ದೂರ ಇಟ್ಟಿದೆ. ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲು ಉಚ್ಚಾಟನೆ ಮಾಡಿದೆ.
1] ಭಾರತಿ ಭುಯ್ಯಾರ
2] ಅಲ್ತಾಫ ಹಮೀದಸಾಬ ಇಟಗಿ
3] ಬಾಬು ವೇಣು ಜಾಧವ
4] ಬಾಬು ಶಿರಾಡ
5] ಅಶೋಕ ನ್ಯಾಮಗೊಂಡ
6] ಚೆನ್ನಪ್ಪ ಚಿನಗುಂಡಿ
7] ಬಸವರಾಜ ಗೊಳಸಂಗಿ
8] ಅಭಿಶೇಕ ಸಾವಂತ
9] ಬಾಬು ಏಳಗಂಟೆ
10] ರವಿ ಬಗಲಿ
11] ಬಸಪ್ಪ ಸಿದ್ದಪ್ಪ ಹಳ್ಳಿ
12] ಸವಿತಾ ಪಾಟೀಲ
13] ಸಂಗೀತಾ ಪೋಳ
14] ರಾಜು ಬಿರಾದಾರ
ಇಷ್ಟು ಮುಖಂಡರನ್ನ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಲಾಗಿದೆ..
ಉಚ್ಚಾಟಿಸುವ ಮುನ್ನ ಎಚ್ಚರಿಕೆ ನೀಡಿದ್ದ ಶಾಸಕ ಯತ್ನಾಳ್..!
ಪಕ್ಷದ ವಿರುದ್ಧ ಚಟುಚಟಿಕೆ ನಡೆಸಿದ 14 ಜನರನ್ನ ಉಚ್ಚಾಟನೆ ಮಾಡುವ ಮೊದಲು ಎಲ್ಲರನ್ನು ಸಮಾಧಾನ ಪಡೆಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರೆ. ನಗರ ಶಾಸಕ ಬಸನಗೌಡ ಯತ್ನಾಳ ಕೂಡ ನಿನ್ನೆ ಮಾತನಾಡುವಾಗ ಅವರೆಲ್ಲ ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಿಸಿದವರು. ಹೀಗಾಗಿ ಟಿಕೆಟ್ ನೀಡಲಿಲ್ಲ. ಯಾರೇ ಬಂಡಾಯವೆದ್ದರು ಬಿಜೆಪಿಯ 33 ಅಭ್ಯರ್ಥಿಗಳು ಗೆದ್ದು ಬರೋದು ಪಿಕ್ಸ್ ಎಂದಿದ್ದರು. ಈ ಮೂಲಕ ಖಡಕ್ ಸಂದೇಶವನ್ನು ರೆಬಲ್ ಮುಖಂಡರಿಗೆ ರವಾನಿಸಿದ್ದರು. ಇತ್ತ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ, ಪಕ್ಷದ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕುಚಬಾಳ ಬಂಡಾಯವೆದ್ದವರ ಮನವೊಲಿಕೆಗೆ ಯತ್ನಿಸಿದ್ದರು. ಆದ್ರೆ ಇದು ಸಾಧ್ಯವಾಗದೇ ಇದ್ದಾಗ ಕೊನೆಯ ಅಸ್ತ್ರವಾಗಿ ಉಚ್ಚಾಟಿಸಲಾಗಿದೆ ಎನ್ನಲಾಗ್ತಿದೆ.
Vijayapura: ಮಹಾನಗರ ಪಾಲಿಕೆ ಚುನಾವಣೆ ನಡುವೆ ಮಾಟಮಂತ್ರದ ಕಾಟ!
ಮನವೊಲಿಕೆಗೆ ಮುಂದಾದಾಗ ಮೊಬೈಲ್ ಸ್ವಿಚ್ ಆಫ್ ಮಾಡಿದ್ರು..!
ಬಿಜೆಪಿ ನಾಯಕರು ಬಂಡಾಯವೆದ್ದವರನ್ನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು ಎನ್ನಲಾಗಿದೆ. ಅವರ ವಾರ್ಡ್ ಗಳಿಗೆ ತೆರಳಿ ಮನವೊಲಿಕೆಯ ಪ್ರಯತ್ನಗಳನ್ನು ಮಾಡಿದ್ದಾರೆ. ಆದ್ರೆ ಕೆಲ ರೆಬಲ್ ಮುಖಂಡರು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಯಕರಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಜಿಲ್ಲಾ ನಾಯಕರು ಕೊನೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಬಿಸಿ ತುಪ್ಪವಾದ ಬಂಡಾಯ ಅಭ್ಯರ್ಥಿಗಳು..!
33 ವಾರ್ಡ್ ಪೈಕಿ ಬಹುತೇಕ ಕಡೆಗೆ ಬಂಡಾಯ!
ಬಿಜೆಪಿ 33 ವಾರ್ಡ್‌ಗಳಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಬಹುತೇಕ ವಾರ್ಡ್‌ಗಳಲ್ಲು ಬಿಜೆಪಿ ಟಿಕೆಟ್ ತಪ್ಪಿದ ಕಾರಣ ಬಂಡಾಯವಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಇಬ್ಬರಿಂದ ಮೂವರು ಬಿಜೆಪಿಯಿಂದ ಟಿಕೆಟ್ ಸಿಗದೆ ಅಸಮಧಾನಗೊಂಡು ಪಕ್ಷೇತರವಾಗಿ ಚುನಾವಣೆಗೆ ಇಳಿದಿದ್ದಾರೆ. ಇಷ್ಟೆಲ್ಲ ಆದರೂ ಬಿಜೆಪಿಯ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಬಂಡಾಯ ವರ್ಕೌಟ್ ಆಗಲ್ಲ ಅಂತಾ ಶಾಸಕ ಬಸನಗೌಡ ಯತ್ನಾಳ್ ಹೇಳ್ತಿದ್ದಾರೆ.