ಕನ್ಯಾ ನೋಡಲು ಹೋದವರು ಕೈಲಾಸ ಸೇರಿದರು: ತೊಗರಿ ಕಟಾವು ಯಂತ್ರಕ್ಕೆ ಕಾರು ಗುದ್ದಿ ಐವರ ಸಾವು!

By Sathish Kumar KH  |  First Published Dec 6, 2024, 7:20 PM IST

ವಿಜಯಪುರ ಜಿಲ್ಲೆಯಲ್ಲಿ ಕನ್ಯಾ ನೋಡಲು ಹೋಗಿ ವಾಪಸ್ಸಾಗುತ್ತಿದ್ದ ಐವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತೊಗರಿ ಕಟಾವು ಯಂತ್ರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ವಿಜಯಪುರ (ಡಿ.06): ಮನೆಯಲ್ಲಿ ಶುಭ ಕಾರ್ಯ ಮಾಡೋಣವೆಂದು ಮಗನಿಗೆ ಮದುವೆ ಮಾಡಲು ನಿರ್ಧರಿಸಿ ಕನ್ಯಾ ನೋಡಲು ಹೋದ ಒಂದೇ ಕುಟುಂಬದ ಐವರು ವಾಪಸ್ ಮನೆಗೆ ಬರುವಾಗ ಭೀಕರ ಕಾರು ಅಪಘಾತದಲ್ಲಿ ಕೈಲಾಸವನ್ನು ಸೇರಿದ್ದಾರೆ. 

ಹೌದು, ಕಾರು ಹಾಗೂ ತೊಗರಿ ಕಟಾವು ಮಷೀನ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ನಡೆದಿದೆ. ಈ ಅಪಘಾತದ ಭೀಕರತೆಗೆ ಮೃತರ ಶವಗಳು ಕಾರಿನಲ್ಲಿಯೇ ನುಜ್ಜುಗುಜ್ಜಾಗಿವೆ‌. ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು, 3 ಜನ ಪುರುಷರಿದ್ದಾರೆ. ಮೃತರನ್ನ ವಿಜಯಪುರ ತಾಲೂಕು ಅಲಿಯಾಬಾದ್ ನಿವಾಸಿಗಳಾದ ನಿಂಗಪ್ಪಾ ಪಾಟೀಲ್ (55), ಶಾಂತವ್ವ ಶಂಕರ ಪಾಟೀಲ್ (45), ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (50) ಹಾಗೂ ದಿಲೀಪಾ ಪಾಟೀಲ್ (45)  ಎಂದು ಗುರುತಿಸಲಾಗಿದೆ.

Tap to resize

Latest Videos

ಯಾದಗಿರಿ ಜಿಲ್ಲೆ ಅಸ್ಕಿ ಗ್ರಾಮದಲ್ಲಿ ಕನ್ಯಾ ನೋಡಲು ಹೋಗಿದ್ದ ಐವರು ಅಲ್ಲಿ ಕನ್ಯಾ (ಹುಡುಗಿ ನೋಡುವ ಶಾಸ್ತ್ರ) ನೋಡಿ ವಾಪಸ್ ಆಗುತ್ತಿದ್ದರು. ಈ ವೇಳೆ ವಿಜಯಪುರ ಜಿಲ್ಲೆ  ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಕ್ರೂಸರ್ ಓವರ್ ಟೇಕ್ ಮಾಡುವ ಭರದಲ್ಲಿ ಕಾರು ತೊಗರಿ ಕಟಾವು ಮಾಡುವ ಯಂತ್ರಕ್ಕೆ ಹೋಗಿ ಗುದ್ದಿದೆ. KA MA 3754 ನಂಬರಿನ ಕಾರು ಹುಣಸಗಿ ಪಟ್ಟಣದಿಂದ ತಾಳಿಕೋಟೆಯತ್ತ ಆಗಮಿಸುತ್ತಿತ್ತು. PB 84- 3053 ನಂಬರಿನ ತೊಗರಿ ಕಟಾವು ಮಾಡುವ ಯಂತ್ರದ ವಾಹನ ತಾಳಿಕೋಟೆಯಿಂದ ಹುಣಸಗಿಗೆ ತೆರಳುತ್ತಿತ್ತು.

ಇದನ್ನೂ ಓದಿ: Mangaluru: ಕೆಟ್ಟಿದ್ದ ಫ್ರಿಜ್‌ ಸರಿ ಮಾಡಲು ಬಂದು ಶೀಲ ಹಾಳು ಮಾಡಿದ ಶಫೀನ್‌

ಇನ್ನು ತೊಗರಿ ಕಟಾವು ಯಂತ್ರವು ಬೃಹತ್ ಗಾತ್ರದ್ದಾಗಿದ್ದು, ಅದರ ಬ್ಲೇಡ್‌ಗಳಿಗೆ ಸಿಲುಕಿ ಕಾರಿನಲ್ಲಿದ್ದ ಎಲ್ರೂ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.  ಕಾರಿನಲ್ಲಿದ್ದ ಶವಗಳನ್ನು ಹೊರ ತೆಗೆಯಲು ಪೊಲೀಸರು ಜೆಸಿಬಿ ಬಳಕೆ ಮಾಡಿದ್ದಾರೆ. ಈವರ ಶವಗಳು ಬಸನಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

click me!