ಮಹಾತ್ಮ ಗಾಂಧಿ ಉಪವಾಸ ಮಾಡಿದ್ದರಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಸ್ವಾತಂತ್ರ್ಯ ಹೋರಾಟದ ಲಾಭವನ್ನು ಗಾಂಧಿ ಪಡೆದಿದ್ದಾರೆ ಅಷ್ಟೇ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಹುಬ್ಬಳ್ಳಿ(ನ.17): ಎಲ್ಲ ಪಕ್ಷಗಳಲ್ಲೂ ಕಳ್ಳರಿದ್ದಾರೆ. ಮುಡಾ ಸೈಟ್ ಎಲ್ಲ ಪಕ್ಷದರೂ ತೆಗೆದುಕೊಂಡಿದ್ದಾರೆ. ಸಿಬಿಐಗೆ ಈ ಪ್ರಕರಣ ನೀಡಿದರೆ ಯಾರಾರು ಕಳ್ಳರಿದ್ದಾರೆ ಎಲ್ಲರ ಹೆಸರು ಹೊರಗೆ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದಲ್ಲೂ ಸತ್ಯ ಹರಿಶ್ಚಂದ್ರರಿಲ್ಲ. ಸಿದ್ದರಾಮಯ್ಯ ಅವರೆಲ್ಲರನ್ನು ರಕ್ಷಣೆ ಮಾಡುತ್ತಿದ್ದಾರೆ. ಅಡ್ಡಸ್ಟೆಮೆಂಟ್ ಗಾಗಿ ಸಿಎಂ ಬಲಿ ಆಗುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಆ ಪ್ರಕರಣದಲ್ಲಿ ಯಾವ ಯಾವ ಪಕ್ಷದವರಿದ್ದಾರೆ ಎಂಬುದು ಹೊರಬರಬೇಕಾದರೆ, ಸಿಬಿಐಗೆ ಒಪ್ಪಿಸಬೇಕು ಎಂದರು.
undefined
ಆಪರೇಷನ್ ಕಮಲ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಬಳಿ ಏನಾದರೂ ಲಿಖಿತ ದಾಖಲೆ, ರೆಕಾರ್ಡಿಂಗ್ ನಂತಹ ಆಧಾರಗಳಿದ್ದರೆ, ಯಾರು ಆ ಕೆಲಸ ಮಾಡುತ್ತಿದ್ದಾರೆಯೋ ಅವರನ್ನು ಕೂಡಾ ಆರೆಸ್ಟ್ ಮಾಡಲಿ, ಬೇಡ ಅನ್ನುವವರು ಯಾರು? ಎಂದರು.
ಸಿಎಂಗೆ ನಿಜವಾಗಿಯೂ ತಾಕತ್ತು ಇದ್ದರೆ ಅಪರೇಷನ್ ಕಮಲದ ಬಗ್ಗೆ ತಮ್ಮ ಬಳಿ ಇರುವ ದಾಖಲೆ ಬಹಿರಂಗಗೊಳಿಸಬೇಕು. ಇಲ್ಲವೇ ಎಸ್‌ಐಟಿ, ಸಿಬಿಐ ಕೊಡ ಬೇಕು ಎಂದ ಅವರು, ಡಿ.ಕೆ. ಶಿವಕುಮಾರ್ ಸಿಎಂ ಕೆಳಗೆ ಇಳಿಸಲು ಪ್ರಯತ್ನ ನಡೆಸಿದ್ದರಿಂದ ಸಿದ್ದರಾಮಯ್ಯ ಅಮರೇಷನ್ ಕಮಲದ ಹೆಸರಿನಲ್ಲಿ ನನ್ನ ತಂಟೆಗೆ ಬಂದರೆ ಹುಷಾರ್ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಹೆದರಿಸಿದ್ದಾರೆಯೇ ಹೊರತು, ಬಿಜೆಪಿ ಬಗ್ಗೆ ಮಾತನಾಡಿಲ್ಲ ಎಂದು ವ್ಯಂಗ್ಯವಾಡಿದರು.
ಈಗಾಗಲೇ ಯಾವುದೇ ಕಾರಣಕ್ಕೂ ಆಪ'ರೇಷನ್ ಕಮಲ ಮಾಡುವುದ ಬೇಡ ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ. ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅಂಥವರಿಗೆ ಗಡಬಡಿ ಇದೆ. ನಮಗಿಲ್ಲ, ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ. ಆಪರೇಷನ್ ಕಮಲಕ್ಕೆ ನಾನಂತೂ ಸುತಾರಾಂ ಒಪ್ಪುವುದಿಲ್ಲ ಎಂದು ಹೇಳಿದರು. ವಿಜಯೇಂದ್ರ ಆ್ಯಂಡ್ ಕಂಪನಿಗೆ ಯಾವ ವಕ್ಫ್ ಹೋರಾಟ ಬೇಕಾಗಿಲ್ಲ. ವಕ್ಫ್ ವಿರುದ್ದ ಜನಜಾಗೃತಿಗೆ ಮಾಡಿರುವ ಮೂರು ತಂಡಗಳಿಗೆ ಅಪ್ಪ, ಅವ್ವ ಇಲ್ಲ. ನಮ್ಮನ್ನು ನೋಡಿ ತಂಡ ರಚಿಸಿದ್ದಾರೆ. ಅದರಲ್ಲಿಯೂ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟಿರುವುದೇಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಅಪ್ಪ, ಮಕ್ಕಳ ದಂಧೆಯೇ ಕಾರಣ ಎಂದು ವಿಜಯೇಂದ್ರ ವಿರುದ್ಧ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ಉಪವಾಸದಿಂದ ಸ್ವಾತಂತ್ರ್ಯ ಬಂದಿಲ್ಲ
ಹುಬ್ಬಳ್ಳಿ: ಮಹಾತ್ಮ ಗಾಂಧಿ ಉಪವಾಸ ಮಾಡಿದ್ದರಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಸ್ವಾತಂತ್ರ್ಯ ಹೋರಾಟದ ಲಾಭವನ್ನು ಗಾಂಧಿ ಪಡೆದಿದ್ದಾರೆ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಾಕ ಹೇಳಿಕೆ ನೀಡಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕುರಿತು ಮಾತನಾಡಿದ ಅವರು, ಯಾವುದೇ ಹೋರಾಟಕ್ಕೆ ಒಮ್ಮಿಂದೊ ಮೈಲೆ ಜಯ ಸಿಗುವುದಿಲ್ಲ. ಜಯ ಸಿಗುವವರೆಗೆ ಹೋರಾ ಟ ಮಾಡಬೇಕು. ಸಭೆಗಳು ಹೀಗೆ ನಡೆ ಯುತ್ತಲೇ ಇರುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಒಂದೇ ಬಾರಿ ಬಂತಾ? ಭಗತ್ ಸಿಂಗ್ ಚಂದ್ರಶೇಖರ ಆಜಾದ್ ನಂಥವರು ಗಲ್ಲಿ ಗೇರಿ ಹೋಗಿದ್ದಾರೆ. ಇವರ ಹೋರಾಟದ ಲಾಭವನ್ನು ಗಾಂಧಿ ಪಡೆದಿದ್ದಾರೆ ಎಂದರು.
ಪಂಚಮಸಾಲಿ ಸಮುದಾ ಯ ಕಾಂಗ್ರೆಸ್ ಶಾಸಕರು ಬಹಳ ವೀರಾವೇಶದಿಂದ ಮಾ ತಾಡಿದ್ದರು. ಆದರೆ, ಇತ್ತೀಚೆಗೆ ಸಿಎಂ ಸಿದ್ದ ರಾಮಯ್ಯ ಸಭೆಯಲ್ಲಿ ಯಾರೂ ಮಾತನಾ ಡಲಿಲ್ಲ. ಅವರೆಲ್ಲ ಸಿದ್ದರಾಮಯ್ಯ ಹಾಕಿದ ಬಿಸ್ಕಿಟ್ ತಿಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿಎಂ ಸಿದ್ದರಾಮಯ್ಯ ಸಭೆ ಕರೆದರೂ ನಮ್ಮ ಬೇಡಿಕೆಗೆ ಒಪ್ಪಲಿಲ್ಲ. ಚುನಾವಣೆ ನೀತಿ ಸಂಹಿತೆ ಇದೆ, ನಾನೇನು ಮಾತನಾಡಲ್ಲ ಅಂತ ಹೇಳಿದರು. ಒಳ ಮೀಸ ಲಾತಿಗಾಗಿ ಒಂದು ಸಮಿತಿಯನ್ನು ರಚನೆ ಮಾಡ ಬೇಕಿತ್ತು. ಅದನ್ನು ಮಾಡದೇ ನಿರಾಶೆ ಮೂಡಿಸಿದ್ದಾರೆ. ಇದೀಗ ನಮ್ಮ ಶ್ರೀಗಳು ಬೆಳಗಾವಿ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಅವರ ಜತೆ ನಾವು ಹೋರಾಟ ಮಾಡುತ್ತೇವೆ ಎಂದರು.
ರೇಣುಕಾಚಾರ್ಯ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಕಿಡಿಕಿಡಿಯಾದ ಯತ್ನಾಳ, ಯಾರ್ಯಾರದೋ ಹೇಳಿಕೆಗಳಿಗೆಲ್ಲ ರಿಪ್ರೈ ಕೇಳಬೇಡಿ. ದಾರಿಯಲ್ಲಿ ಹೋಗುವ ಹಂದಿ-ಪಂದಿಗಳ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.