ಉತ್ತರ ಕರ್ನಾಟಕದ ಮಕ್ಕಳ ಪೈಲಟ್ ಕನಸಿಗೆ ರೆಕ್ಕೆ: ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ

Published : Oct 02, 2026, 09:38 PM IST
Vijayapura Airport Pilot Training Center

ಸಾರಾಂಶ

ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರದ ಕಾರ್ವರ್ ಏವಿಯೇಷನ್ ಸಂಸ್ಥೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ (ಅ.2): ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣವನ್ನು ಕೇವಲ ವೈಮಾನಿಕ ಸಂಪರ್ಕದ ಕೇಂದ್ರವನ್ನಾಗಿಸುವುದಷ್ಟೇ ಅಲ್ಲದೆ, ವೈಮಾನಿಕ ಶಿಕ್ಷಣ, ಪೈಲಟ್ ತರಬೇತಿ ಹಾಗೂ ಉದ್ಯೋಗದ ಹೊಸ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆಯ ಮುಂದುವರಿದ ಭಾಗವಾಗಿ ವಿಜಯಪುರ ವಿಮಾನ ನಿಲ್ದಾಣದಲ್ಲಿ 'ವಿಮಾನ ಚಾಲನಾ ತರಬೇತಿ ಕೇಂದ್ರ' (Pilot Training Center) ಸ್ಥಾಪಿಸಲು ಸಿದ್ಧತೆಗಳು ಬಿರುಸಿನಿಂದ ಸಾಗಿವೆ.

ಈ ಬೃಹತ್ ಯೋಜನೆಗಾಗಿ ಮಹಾರಾಷ್ಟ್ರದ ಬಾರಾಮತಿ ಮೂಲದ ಪ್ರಸಿದ್ಧ 'ಕಾರ್ವರ್ ಏವಿಯೇಷನ್' (Carver Aviation) ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಇಲ್ಲಿನ ವಿವಿಧ ಸೌಲಭ್ಯಗಳು ಹಾಗೂ ತರಬೇತಿ ಕೇಂದ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ.

ಮಾತುಕತೆಯ ಮುಂದುವರಿದ ಭಾಗವಾಗಿ ಸ್ಥಳ ಪರಿಶೀಲನೆ

ಕಳೆದ ತಿಂಗಳು ಕಾರ್ವರ್ ಏವಿಯೇಷನ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಭೇಟಿ ನಡೆಸಿ ವಿಜಯಪುರದಲ್ಲಿ ಪೈಲಟ್ ತರಬೇತಿ ಕೇಂದ್ರ ತೆರೆಯುವ ಕುರಿತು ಪ್ರಾಥಮಿಕ ಮಾತುಕತೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ, ಪ್ರಸ್ತುತ ಏರ್‌ಪೋರ್ಟ್‌ ಅಖಾಡಕ್ಕೆ ಆಗಮಿಸಿದ ತಜ್ಞರ ತಂಡವು ರನ್‌ವೇ, ಹ್ಯಾಂಗರ್ ಹಾಗೂ ಇತರ ತಾಂತ್ರಿಕ ಸೌಲಭ್ಯಗಳನ್ನು ಪರಿಶೀಲಿಸಿ, ತರಬೇತಿ ಅಕಾಡೆಮಿ ಆರಂಭಿಸಲು ಉತ್ಸುಕತೆ ತೋರಿಸಿದೆ.

ಸ್ವಂತ ನೆಲದಲ್ಲೇ ಗುಣಮಟ್ಟದ ವೈಮಾನಿಕ ಶಿಕ್ಷಣ ಹಾಗೂ ಉದ್ಯೋಗ

ವಿಜಯಪುರದಲ್ಲಿ ಈ ವಿಮಾನ ಚಾಲನಾ ತರಬೇತಿ ಕೇಂದ್ರ ಕಾರ್ಯಾರಂಭ ಮಾಡಿದರೆ, ಉತ್ತರ ಕರ್ನಾಟಕ ಭಾಗದ ಅನೇಕ ಗ್ರಾಮೀಣ ಹಾಗೂ ಪ್ರತಿಭಾವಂತ ಯುವಜನರಿಗೆ ತಮ್ಮ ಸ್ವಂತ ನೆಲದಲ್ಲಿಯೇ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ವೈಮಾನಿಕ ತರಬೇತಿ ಪಡೆಯುವ ಸುವರ್ಣಾವಕಾಶ ದೊರೆಯಲಿದೆ. ಆಕಾಶದಲ್ಲಿ ವಿಮಾನ ಹಾರಿಸಬೇಕು, ಪೈಲಟ್ ಆಗಬೇಕು ಎಂಬ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳ ಕನಸಿಗೆ ಈ ಯೋಜನೆ ದೊಡ್ಡ ಬೆನ್ನೆಲುಬಾಗಲಿದೆ. ಇದರೊಂದಿಗೆ ಈ ಭಾಗದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಉದ್ಯೋಗಾವಕಾಶಗಳು ಹಾಗೂ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲಿದೆ ಎಂದು ಸಚಿವ ಎಂಬಿ ಪಾಟೀಲ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

PREV
Read more Articles on
click me!

Recommended Stories

ಕರಾವಳಿಯಲ್ಲಿ ಧಾರ್ಮಿಕ ಸೌಹಾರ್ದತೆಯ ಮೈಲಿಗಲ್ಲು: ಶ್ರೀ ದೇವಿಯಾಗಿ ರಂಗಸ್ಥಳದಲ್ಲಿ ಮಿಂಚಲಿರುವ ಮುಸ್ಲಿಂ ಹೆಣ್ಣುಮಗಳು ಆರ್ಷಿಯಾ ಖಾನ್
ಕೋಲಾರ ಜಿಲ್ಲೆಗೆ ಕೃಷ್ಣಾ ನೀರು ತರುತ್ತೇವೆ: ರೈತರಿಗೆ ಭರವಸೆ ಕೊಟ್ಟ ನಿಖಿಲ್ ಕುಮಾರಸ್ವಾಮಿ