ಆಲಮಟ್ಟಿಯಿಂದ ನಿತ್ಯ 27,500 ಕ್ಯುಸೆಕ್ ನೀರು ಬಿಡುಗಡೆ: ಇದರ ಹಿಂದಿನ ರಹಸ್ಯವೇನು ?

Published : Oct 22, 2026, 08:34 AM IST
Alamatti Dam

ಸಾರಾಂಶ

ಮೂರು ದಿನಗಳಲ್ಲಿ ಸುಮಾರು 7 ಟಿಎಂಸಿ ಅಡಿ ನೀರು ಹರಿದು ಹೋಗಿದ್ದು, ಇನ್ನೂ ಒಂದೆರೆಡು ದಿನ ಹೊರಹರಿವು ಇದೇ ರೀತಿ ಮುಂದುವರೆದರೆ ಅದು 10 ಟಿಎಂಸಿ ದಾಟಬಹುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದರು.

ವಿಜಯಪುರ: ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಕಳೆದ ಮೂರು ದಿನಗಳಿಂದ ನೀರಾವರಿ ಸುಮಾರು 27,500 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದ್ದು, ಇದರ ಹಿಂದೆ ತೆಲಂಗಾಣಕ್ಕೆ ನೀರು ಹರಿಸುವ ಉದ್ದೇಶ ಅಡಗಿದೆ ಎಂದು ಆರೋಪಿಸಲಾಗಿದೆ.

ಕಳೆದ 10 ದಿನಗಳ ಹಿಂದೆಯಷ್ಟೇ ತೆಲಂಗಾಣಕ್ಕೆ 2 ಟಿಎಂಸಿ ನೀರು ಬಿಡಲಾಗಿತ್ತು. ಈಗ ಮತ್ತೆ ಅದೇ ಉದ್ದೇಶಕ್ಕಾಗಿ ಆಲಮಟ್ಟಿಯಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರು ಬಿಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ನೀರು ಹರಿಸುವ ಉದ್ದೇಶದ ಬಗ್ಗೆಅನುಮಾನ?

ಜಲಾಶಯದ ಬಲಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ನೀರು ಬಿಡಲಾಗುತ್ತಿದ್ದು, ಇನ್ನೂ ಒಂದೆರಡು ದಿನಗಳ ಕಾಲ ನೀರು ಹರಿಸುವ ಸಾಧ್ಯತೆ ಇದ್ದು, ನಾರಾಯಣಪುರ ಜಲಾಶಯದ ನೀರಾವರಿ ಬೇಡಿಕೆಗಾಗಿ ಮಾತ್ರ ಬಿಡಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ಹೇಳುತ್ತಿದ್ದರು ಅದರ ಹಿಂದೆ ಅನ್ಯ ರಾಜ್ಯಕ್ಕೆ ನೀರು ಹರಿಸುವ ಉದ್ದೇಶ ಅಡಗಿದೆ ಎನ್ನಲಾಗಿದೆ. ಜಲಾಶಯದ ವಿದ್ಯುತ್ ಘಟಕ ದ ಮೂಲಕ ನೀರು ಬಿಟ್ಟ ಕಾರಣ 3 ಮಿಲಿಯನ್ ಯುನಿಟ್ ಆಸುಪಾಸು ವಿದ್ಯುತ್ ಉತ್ಪಾದನೆ ಯಾಗುತ್ತಿದೆ.

ಅಖಂಡ ಕರ್ನಾಟಕ ರೈತ ಸಂಘದಿಂದ ಗಂಭೀರ ಆರೋಪ

ಮೂರು ದಿನಗಳಲ್ಲಿ ಸುಮಾರು 7 ಟಿಎಂಸಿ ಅಡಿ ನೀರು ಹರಿದು ಹೋಗಿದ್ದು, ಇನ್ನೂ ಒಂದೆರೆಡು ದಿನ ಹೊರಹರಿವು ಇದೇ ರೀತಿ ಮುಂದುವರೆದರೆ ಅದು 10 ಟಿಎಂಸಿ ದಾಟಬಹುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದರು.

ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಗಮನ ಕಡಿಮೆ ಇರುವುದರಿಂದ ರಾತ್ರಿ ವೇಳೆ ನೀರು ಬಿಡಲಾಗುತ್ತಿದೆ. ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚಿದ್ದು, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನೀರು ಹರಿಸುವ ಅಗತ್ಯವೇನು ಎಂದು ಪ್ರಶ್ನಿಸಿರುವ ಅವರು, ನೀರು ಹರಿಸುವುದನ್ನು ತಕ್ಷಣ ನಿಲ್ಲಿಸದಿದ್ದರೆ ನದಿಯಲ್ಲಿ ನೀರಿನಲ್ಲಿ ನಿಂತು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಆಲಮಟ್ಟಿ ಜಲಾಶಯದ ಮಟ್ಟ

ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ 516.80 ಮೀಟರ್ ಮಟ್ಟದವರೆಗೆ ಸುಮಾರು 83 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ವಿದ್ಯುತ್ ಉತ್ಪಾದನಾ ಘಟಕದ ಮೂಲಕ 27,345 ಕ್ಯುಸೆಕ್ ಹಾಗೂ ಹಿನ್ನೀರಿನ ಬಳಕೆ ಕಾಲುವೆ ಸೇರಿದಂತೆ ಒಟ್ಟು 35,741 ಕ್ಯುಸೆಕ್ ನೀರು ಜಲಾಶಯದಿಂದ ಹೊರಹರಿಯುತ್ತಿದೆ.

PREV
Read more Articles on
click me!

Recommended Stories

ಚೂಪಾದ ಕಾರೆಮುಳ್ಳಿನ ಮೇಲೆ ದೇವಿಯ ಮೆರವಣಿಗೆ! ಮೈ ಜುಮ್ಮೆನಿಸುವ ದಸರೀಘಟ್ಟ ಚೌಡೇಶ್ವರಿ ದೇವಿ ಉತ್ಸವ!
Post Office: ಇಂದಿನಿಂದ 3 ದಿನ ಬೆಂಗಳೂರಿನ ಈ ಅಂಚೆ ಕಚೇರಿಗಳಲ್ಲಿ ಕೆಲ ಸೇವೆ ಅಲಭ್ಯ