Post Office: ಇಂದಿನಿಂದ 3 ದಿನ ಬೆಂಗಳೂರಿನ ಈ ಅಂಚೆ ಕಚೇರಿಗಳಲ್ಲಿ ಕೆಲ ಸೇವೆ ಅಲಭ್ಯ

Published : Oct 22, 2026, 08:10 AM IST
Post Office

ಸಾರಾಂಶ

ನೂತನ ತಂತ್ರಾಂಶ ಅಳವಡಿಕೆ ಹಿನ್ನೆಲೆಯಲ್ಲಿ ಅಕ್ಟೋಬರ್ 22 ರಿಂದ 25ರವರೆಗೆ ಕೆಲ ಸೇವೆಗಳು ಸಿಗುವುದಿಲ್ಲ . ಅಕ್ಟೋಬರ್ 26 ರಿಂದ ಹೊಸ ತಂತ್ರಾಂಶದೊಂದಿಗೆ ಸೇವೆಗಳು ಮರುಪ್ರಾರಂಭವಾಗಲಿವೆ. ಆನ್‌ಲೈನ್ ಮೂಲಕ ಪ್ರೀಮಿಯಂ ಪಾವತಿಸಲು ಅವಕಾಶವಿರುತ್ತದೆ.

ಬೆಂಗಳೂರು: ನೂತನ ತಂತ್ರಾಂಶ ಅಳವಡಿಸುತ್ತಿರುವ ಕಾರಣ ಅ.22ರಿಂದ 25ರವರೆಗೆ ಬೆಂಗಳೂರು ಅಂಚೆ ಮಹಾ ಕಾರ್ಯಾಯಾಲಯ ಸೇರಿದಂತೆ ನಗರದ ವಿವಿಧ ಅಂಚೆ ಕಚೇರಿಗಳಲ್ಲಿ ಪಿಎಲ್ಐ ಹಾಗೂ ಆರ್‌ಪಿಎಲ್‌ಐಗೆ ಸಂಬಂಧಿಸಿದ ಕೆಲವೊಂದು ಸೇವೆಗಳು ಲಭ್ಯವಿರುವುದಿಲ್ಲ.

ಬೆಂಗಳೂರು ಅಂಚೆ ಮಹಾ ಕಾರ್ಯಾಲಯವು (ಜಿಪಿಒ), ಅಂಚೆ ಜೀವ ವಿಮೆ (ಪಿಎಲ್‌ಐ) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (ಆರ್‌ಪಿಎಲ್‌ಐ) ಪಾಲಿಸಿದಾರರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ತನ್ನ ಪ್ರಸ್ತುತ ಮ್ಯಾಕ್‌ಕ್ಯಾಮಿಷ್‌ ತಂತ್ರಾಂಶದಿಂದ ಇನ್‌ಸ್ಯೂರೆನ್ಸ್‌ ಮ್ಯಾನೇಜ್ಮೆಂಟ್‌ ಸಲ್ಯೂಷನ್‌ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಹೊಸ ತಂತ್ರಾಂಶವು ಅ.26ರಿಂದ ಜಾರಿಗೆ ಬರಲಿದೆ.

ಯಾವೆಲ್ಲಾ ಅಂಚೆ ಕಚೇರಿಗಳು?

ಈ ಹಿನ್ನೆಲೆಯಲ್ಲಿ ಅ.22ರಿಂದ 26ರವರಗೆ ಜಿಪಿಒ ಮತ್ತು ಅದರ ವ್ಯಾಪ್ತಿಗೆ ಬರುವ ಅರೇಬಿಕ್ ಕಾಲೇಜು, ಬಾಣಸವಾಡಿ, ಸಿಎಂಎಂ ಕೋರ್ಟ್‌ ಕಾಂಪ್ಲೆಕ್ಸ್‌, ಫ್ರೇಸರ್‌ ಟೌನ್‌, ಹೈಕೋರ್ಟ್‌, ಎಚ್‌ಕೆಪಿ ರಸ್ತೆ, ಹೊರಮಾವು, ಜಲವಾಯು ವಿಹಾರ್‌, ಕಲ್ಯಾಣ ನಗರ, ಕೊತ್ತನೂರು, ಲೆಜಿಸ್ಲಚರ್ಸ್‌ ಹೋಮ್‌, ಲಿಂಗರಾಜಪುರಂ, ಮಾರುತಿ ಸೇವಾ ನಗರ, ಮ್ಯೂಸಿಯಂ ರಸ್ತೆ, ರಾಜಭವನ, ಶಿವನ್‌ ಚಟ್ಟಿ ಗಾರ್ಡನ್ಸ್‌, ಸೇಂಟ್‌ ಥಾಮಸ್‌ ಟೌನ್‌, ವಸಂತನಗರ, ವಿಧಾನಸೌಧ ಅಂಚೆ ಕಚೇರಿಗಳಲ್ಲಿ ಪಿಎಲ್ಐ, ಆರ್‌ಪಿಎಲ್‌ಐಗೆ ಸಂಬಂಧಿಸಿದ ಪ್ರೀಮಿಯಂ ಸಂಗ್ರಹಣೆ, ಸಾಲದ ಪ್ರೀಮಿಯಂ ಸಂಗ್ರಹಣೆ, ಸಾಲ ಮರು ಪಾವತಿ ಪ್ರಕ್ರಿಯೆ ಮತ್ತು ಗ್ರಾಹಕರ ಸೇವೆಗೆ ಸಂಂಧಿಸಿದಂತೆ ಇತರ ಎಲ್ಲ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಜಿಪಿಒ ಮುಖ್ಯ ಅಂಚೆಪಾಲರು ತಿಳಿಸಿದ್ದಾರೆ.

ಆದರೆ, ಬೆಂಗಳೂರು ಜಿಪಿಒ ಹೊರತುಪಡಿಸಿ ಬೇರೆ ಕಚೇರಿಗಳಿಂದ ಪಾಲಿಸಿಗಳನ್ನು ಪಡೆದಿರುವವರ ಪಾಲಿಸಿದಾರರು ಈ ಮೇಲಿನ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಅಥವಾ ಇತರ ಮುಖ್ಯ ಅಂಚೆ ಕಚೇರಿಗಳಲ್ಲಿ ತಮ್ಮ ಪ್ರೀಮಿಯಂ ಅನ್ನು ಪಾವತಿಸುವುದನ್ನು ಮುಂದುರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು: ಮನೆ, ಅಂಗಡಿ ಪಿಜಿಗಳಲ್ಲಿ ದಸರಾ ಹಬ್ಬದ ರಾಶಿ ರಾಶಿ ಕಸ.. ತ್ಯಾಜ್ಯ ಸಂಗ್ರಹಿಸಲು ವಾಹನವೇ ಬರುತ್ತಿಲ್ಲ..!
ಆಲಿಸು ಕಂದ: ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್; ಆರೋಗ್ಯ ಇಲಾಖೆಯಿಂದ ಮಹತ್ವದ ಯೋಜನೆ ಜಾರಿ!