ಜಯಪುರ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಮೂರನೇ ಸಾಮಾನ್ಯ ಸಭೆ ನಡೆಯಿತು. ಆದ್ರೆ ಸಭೆಗೆ ಆಗಮಿಸಿದ ಮೇಯರ್ ಮಾತ್ರ ಸರ್ವ ಸದಸ್ಯರು, ಆಯುಕ್ತ ಗಮನ ಸೆಳೆದರು. ಕಾರಣ ಅಂದ್ರೆ ಮೇಯರ್ ತಮ್ಮ ಸರ್ಕಾರಿ ಕಾರ್‌ನಲ್ಲಿ ಆಗಮಿಸದೆ ಕುದುರೆ ಟಾಂಗಾದಲ್ಲಿ ಎಂಟ್ರಿ ಕೊಟ್ಟಿದ್ದು ಎಲ್ಲರನ್ನ ಹುಬ್ಬೆರಿಸುವಂತೆ ಮಾಡಿತು.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ.29): ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಮೂರನೇ ಸಾಮಾನ್ಯ ಸಭೆ ನಡೆಯಿತು. ಆದ್ರೆ ಸಭೆಗೆ ಆಗಮಿಸಿದ ಮೇಯರ್ ಮಾತ್ರ ಸರ್ವ ಸದಸ್ಯರು, ಆಯುಕ್ತ ಗಮನ ಸೆಳೆದರು. ಕಾರಣ ಅಂದ್ರೆ ಮೇಯರ್ ತಮ್ಮ ಸರ್ಕಾರಿ ಕಾರ್‌ನಲ್ಲಿ ಆಗಮಿಸದೆ ಕುದುರೆ ಟಾಂಗಾದಲ್ಲಿ ಎಂಟ್ರಿ ಕೊಟ್ಟಿದ್ದು ಎಲ್ಲರನ್ನ ಹುಬ್ಬೆರಿಸುವಂತೆ ಮಾಡಿತು.
ಸಭೆಗೆ ಕುದುರೆ ಟಾಂಗಾದಲ್ಲಿ ಬಂದ್ರು ಮೇಯರ್!
ಹೌದು, ಇಂದು ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಹೊಸ ಆಡಳಿತ ಮಂಡಳಿ ಜಾರಿಗೆ ಬಂದ ಬಳಿಕ ಮೂರನೇ ಸಾಮಾನ್ಯ ಸಭೆ ನಡೆಯಿತು. ಆದ್ರೆ ಸಭೆಗೆ ಆಗಮಿಸಿದ ಮೇಯರ್ ಮೆಹಜಬಿನ್ ಹೊರ್ತಿ ಎಲ್ಲರ ಗಮನ ಸೆಳೆದರು. ತಮ್ಮ ಸರ್ಕಾರಿ ಕಾರನಲ್ಲಿ ಬರಬೇಕಿದ್ದ ಮೇಯರ್ ಕುದುರೆ ಟಾಂಗಾದಲ್ಲಿ ಬಂದು ಸಭೆಗೆ ಹಾಜರಾದ್ರು. ಮೇಯರ್ ಟಾಂಗಾದಲ್ಲಿ ಬರ್ತಿದ್ದಂತೆ ಉಳಿದ ಸದಸ್ಯರು, ಆಯುಕ್ತರು ಅಚ್ಚರಿಗೆ ಒಳಗಾದ್ರು. ಒಂದು ಅಲ್ಲಿದ್ದ ಪಾಲಿಕೆ ಅಧಿಕಾರಿಗಳು ಮೇಯರ್ ಕಾರ್ ಬಿಟ್ಟು ಟಾಂಗಾದಲ್ಯಾಕೆ ಬಂದಿದ್ದು ಅಂತ ಕೆಲಕಾಲ ಗೊಂದಲಕ್ಕಿಡಾದ್ರು.
ನಾಳೆ ಬಿಜೆಪಿ ಕಾರ್ಯಕರ್ತರಿಗೆ ಔತಣಕೂಟ; ಲೋಕಸಭಾ ಚುನಾವಣೆಗೆ ಶ್ರೀರಾಮುಲು ಸಜ್ಜು!
ಅಷ್ಟಕ್ಕು ಮೇಯರ್ ಟಾಂಗಾದಲ್ಲಿ ಬಂದಿದ್ಯಾಕೆ!?
ಅಷ್ಟಕ್ಕೂ ಮೇಯರ್ ಕುದುರೆ ಟಾಂಗಾದಲ್ಲಿ ಬಂದಿದ್ಯಾಕೆ ಅನ್ನೋ ವಿಚಾರದ ಬಗ್ಗೆ ಮಾಹಿತಿ ಪಡೆದಾಗ ಗೊತ್ತಾಗಿದ್ದು, ಮೇಯರ್ ಮೆಹಜಬಿನ್ ಹೊರ್ತಿ ಅವರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸರ್ಕಾರಿ ವಾಹನದ ಚಾಲಕರನ್ನೆ ನೀಡಿಲ್ಲವಂತೆ. ಚಾಲಕರನ್ನೆ ಕೊಡದೆ ಇದ್ದಾಗ ಕಾರ್ ಯಾಕೆ ಅಂತಾ ಮೆಹಜಬಿನ್ ಕುದುರೆ ಟಾಂಗಾದಲ್ಲಿ ಆಗಮಿಸಿದ್ದಾರೆ. ಮೂಲಕ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾರ್ ಕೊಟ್ಟು ಅದಕ್ಕೆ ಡ್ರೈವರ್ ಇಲ್ಲಂದ್ರೆ ಪಾಲಿಕೆಗೆ ಸಭೆಗೆ ಹಾಜರಾಗೋಕೆ ಹೇಗ್ ಬರೋದು ಅಂತಾ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ..
ಪಾಲಿಕೆ ಸಭೆಯಲ್ಲು ಚರ್ಚೆ ; ಮೇಯರ್‌ಗೆ ಬಿಜೆಪಿ ಸದಸ್ಯರ ಬೆಂಬಲ!
ಪಾಲಿಕೆ ಸಭೆ ಆರಂಭವಾಗ್ತಿದ್ದಂತೆ ನೂತನ ಮೇಯರ್ ಮೆಹಜಬಿನ್ ಹೊರ್ತಿ ಯಾಕೆ ಟಾಂಗಾದಲ್ಲಿ ಸಭೆಗೆ ಆಗಮಿಸಿದ್ದು ಎನ್ನುವ ಬಗ್ಗೆ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯೆ ಆರತಿ ಈ ವಿಚಾರ ಪ್ರಸ್ತಾಪಿಸಿದಾಗ, ಮೇಯರ್ ಗೆ ಸರ್ಕಾರಿ ಕಾರ್ ಕೊಟ್ಟಿದ್ದು, ಅದಕ್ಕೆ ಚಾಲಕನನ್ನೆ ನೇಮಿಸಿಲ್ಲ ಅನ್ನೋದು ಬಯಲಿಗೆ ಬಂದಿದೆ. ಕಾಂಗ್ರೆಸ್ ಸದಸ್ಯ ಜೊತೆಗೆ ಬಿಜೆಪಿ ಸದಸ್ಯರು ಈ ವಿಚಾರವನ್ನ ಖಂಡಿಸಿದ್ದಾರೆ. ಬಿಜೆಪಿ ಸದಸ್ಯರು ಸಹ ಮೇಯರ್ ಅವರಿಗೆ ಈ ರೀತಿ ನಡೆಸಿಕೊಂಡಿದ್ದು ಸರಿ ಅಲ್ಲ ಎಂದು ಘಟನೆಯ ಬಗ್ಗೆ ಅಸಮಧಾನ ಹೊರಹಾಕಿದ್ರು
ಸೂಕ್ತ ಕ್ರಮದ ಭರವಸೆ ನೀಡಿದ ಆಯುಕ್ತ!
ಮೇಯರ್ ಟಾಂಗಾದಲ್ಲಿ ಸಾಮಾನ್ಯ ಸಭೆಗೆ ಆಗಮಿಸಿದ ವಿಚಾರ ಸಭೆಯಲ್ಲಿ ಮಾರ್ಧನಿಸುತ್ತಿದ್ದಂತೆ ಆಯುಕ್ತ ಬದ್ರುದ್ದೀನ್ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಮೇಯರ್ ಹಾಗೂ ಉಪ ಮೇಯರ್ ಅವರಿಗೆ ನಾವು ವಾಹನ ನೀಡಿದ್ದೇವೆ. ಚಾಲಕರ ನೇಮಕದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈಗ ಯಾಕೆ ಡ್ರೈವರ್ ನೇಮಕ ಮಾಡಿಲ್ಲ, ನೇಮಕ ಮಾಡದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಕ್ ಪರ ಘೋಷಣೆಗೆ ಖಂಡನೆ:
ಪಾಲಿಕೆಯಲ್ಲಿ ಸಾಮಾನ್ಯ ಸಭೆ ಆರಂಭವಾಗ್ತಿದ್ದಂತೆ ಬಿಜೆಪಿ ಸದಸ್ಯರು ವಿಧಾನ ಸಭೆಯಲ್ಲಿ ಪಾಕ್ ಪರ ಘೋಷಣೆ ಪ್ರಕರಣವನ್ನ ಪ್ರಸ್ತಾಪಿಸಿದರು. ಅಲ್ಲದೆ ಇದಕ್ಕೆ ಖಂಡನಾನಿರ್ಣಯ ಕೈಗೊಳ್ಳುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ನಾವು ಸಹ ಅಲ್ಲಿ ಪಾಕ್ ಪರ ಘೋಷಣೆಯಾಗಿದ್ರೆ ನಾವು ಅದನ್ನ ಖಂಡಿಸುವೆ ಎಂದ್ರು. ಪಕ್ಷೇತರ ಸದಸ್ಯೆ ವಿಮಲಾ ಖಾಣೆ ನಾನು ಈ ವಿಚಾರವನ್ನ ಖಂಡಿಸುವೆ ಎಂದರು, ಸಭೆಯಲ್ಲಿದ್ದ ಎಲ್ಲ ಸದಸ್ಯರು ಘಟನೆ ಖಂಡಿಸಿದ ಬಳಿಕ ಖಂಡನಾ ನಿರ್ಣಯವನ್ನ ಕೈಬಿಡಲಾಯಿತು.
ವಿಜಯನಗರ: ಕೊಟ್ಟೂರಲ್ಲಿ ಕೈಕೊಟ್ಟ ವಿದ್ಯುತ್; ಬೇಸಗೆಗೆ ಮೊದಲೇ 5 ದಿನಕ್ಕೊಮ್ಮೆ ನೀರು!
ಗಣೇಶನ ಮೂರ್ತಿ ಪ್ರತಿಷ್ಠಾಪಿಸದೆ ನಿರ್ಲಕ್ಷ್ಯ ಆರೋಪ!
ಇನ್ನೂ ಸಭೆಯ ಆರಂಭದಲ್ಲಿ ಪಾಲಿಕೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡದ ವಿಚಾರ ಚರ್ಚೆಗೆ ಬಂತು. ಬಿಜೆಪಿ ಸದಸ್ಯ ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ ಸೇರಿದಂತೆ ಇತರೆ ಸದಸ್ಯರು ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯ ಮಾಡಿದ್ರು. ಹಳೆ ಪಾಲಿಕೆ ಕಟ್ಟಡದಲ್ಲಿ ಗಣೇಶ ಮೂರ್ತಿ ಇತ್ತು. ಹೊಸ ಕಟ್ಟಡದಲ್ಲಿ ಮೂರ್ತಿ ಸ್ಥಾಪನೆಗೆ ಜಾಗ ಬಿಡಲಾಗಿದೆ. ಆದ್ರೆ ಅಧಿಕಾರಿಗಳು ಗಣೇಶ ಮೂರ್ತಿ ಸ್ಥಾಪನೆಗೆ ನಿರ್ಲಕ್ಷ್ಯ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು. ಬಳಿಕ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಇಂದೆ ಗಣೇಶ ಮೂರ್ತಿ ಸ್ಥಾಪನೆ ಮಾಡುವ ಬಗ್ಗೆ ಚರ್ಚೆ ಮಾಡೋಣ ಎಂದು ಮೇಯರ್ ಮೆಹಜಬಿನ್ ಹಾಗೂ ಆಯುಕ್ತ ಬದ್ರುದ್ದೀನ್, ಹೇಳಿದ ಮೇಲೆ ಬಿಜೆಪಿ ಸದಸ್ಯರು ಶಾಂತವಾದ್ರು.