'ಸಿಎಂಗೆ ಮಾನ ಮರ್ಯಾದೆ ಇದ್ರೆ ಯತ್ನಾಳ‌ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಲಿ'

Suvarna News   | Asianet News
Published : Jan 17, 2021, 03:43 PM ISTUpdated : Jan 17, 2021, 03:46 PM IST
'ಸಿಎಂಗೆ ಮಾನ ಮರ್ಯಾದೆ ಇದ್ರೆ ಯತ್ನಾಳ‌ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಲಿ'

ಸಾರಾಂಶ

ಸಿಎಂ ಅಧಿಕಾರದಲ್ಲಿ ಇದ್ದಾರೆ ಅವರ ಬಗ್ಗೆ ಯಾರು ತನಿಖೆ ಮಾಡಬೇಕು| ಕೋರ್ಟ್‌ ಇದನ್ನು ಸ್ವಯಂ ಪೇರಿತ ಕೇಸ್ ತೆಗೆದುಕೊಳ್ಳಬೇಕು| ನಾವು ನ್ಯಾಯಾಲಯಕ್ಕೆ ಹೋದ್ರೆ ರಾಜಕೀಯ ಅಂಥಾರೆ| ಇದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇದ್ದಂತೆ| 

ಬೀದರ್(ಜ.17):  ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲೆ ಕೆಟ್ಟ ಆರೋಪವನ್ನ ಮಾಡಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ರೆ ಯತ್ನಾಳ‌ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಬೇಕು. ಇಲ್ಲವಾದ್ರೆ ಸಿಬಿಐ ತನಿಖೆ ಆಗ್ರಹಿಸಿ ಕೇಂದ್ರಕ್ಕೆ ಬರಿಯಬೇಕು. ಇಲ್ಲ ಅವರ ಮೇಲೆ ಕಠಿಣ ಕ್ರಮ ತೆಗೆದಕೊಳ್ಳಬೇಕು. ಯತ್ನಾಳ ಆರೋಪ ಕೇಳುತ್ತಾ ಕುಳಿತರೆ ಇದು ನಿಜ ಎಂದು ಒಪ್ಪಿಕೊಂಡಂತ್ತಿದೆ.  ಎಂದು ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅಧಿಕಾರದಲ್ಲಿ ಇದ್ದಾರೆ ಅವರ ಬಗ್ಗೆ ಯಾರು ತನಿಖೆ ಮಾಡಬೇಕು. ಕೋರ್ಟ್‌ ಇದನ್ನು ಸ್ವಯಂ ಪೇರಿತ ಕೇಸ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಉಪಚುನಾವಣೆಗಳಿಗೆ ಅಭ್ಯರ್ಥಿಗಳ ಪಟ್ಟಿ ರೆಡಿ: ಸಭೆ ಬಳಿಕ ಡಿಕೆಶಿ ಪ್ರತಿಕ್ರಿಯೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನ್ಯಾಯಾಲಯಕ್ಕೆ ಹೋದ್ರೆ ರಾಜಕೀಯ ಅಂಥಾರೆ. ಇದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇದ್ದಂತೆ ಎಂದು ಹೇಳುವ ಮೂಲಕ ಸಿಎಂ ಬಿಎಸ್ವೈ ವಿರುದ್ಧ ಕಿಡಿ ಕಾರಿದ್ದಾರೆ. 
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!