Kotturu: ಜೆಸಿಬಿ ಮೂಲಕ ಹಳೆ ಊರಮ್ಮ ದೇವಿಯ ದೇವಸ್ಥಾನ ನೆಲಸಮ; 4 ದಿನಗಳಿಂದ ಕಾರ್ಯಾಚರಣೆ

Published : Nov 18, 2026, 07:52 AM IST
Kottur Temple

ಸಾರಾಂಶ

ಪಟ್ಟಣದ ಊರಮ್ಮದೇವಿ ದೇವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಹಳೆಯ ದೇವಸ್ಥಾನವನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗುತ್ತಿದೆ. ನೆಲಸಮಗೊಳಿಸುವ ಕಾರ್ಯಾಚರಣೆ ಕಳೆದ ನಾಲ್ಕು ದಿನಗಳಿಂದ ನಿರಂತರ ಸಾಗಿದೆ.

ವಿಜಯನಗರ: ಕೊಟ್ಟೂರು ಪಟ್ಟಣದ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ದೈವಸ್ಥ ಬಳಗ ಮತ್ತು ಸಮಿತಿಯವರು ಚಾಲನೆ ನೀಡಿದ್ದು, ಈ ಕಾರಣದಿಂದ ದೇವಿಯ ಹಳೆಯ ದೇವಸ್ಥಾನ ನೆಲಸಮಗೊಳಿಸುವ ಕಾರ್ಯಾಚರಣೆ ಕಳೆದ ನಾಲ್ಕು ದಿನಗಳಿಂದ ನಿರಂತರ ಸಾಗಿದೆ.

ನೂತನ ದೇವಸ್ಥಾನ ನಿರ್ಮಾಣ

ಊರಮ್ಮ ದೇವಿಯ ದೇವಸ್ಥಾನ ನೂತನವಾಗಿ ಪುನರ್ ನಿರ್ಮಿಸಲು ದೈವಸ್ಥರು ಮತ್ತು ಸಮಿತಿಯವರು ದಶಕಗಳಿಂದ ನಿರ್ಧರಿಸಿದ್ದರು. ಈ ಕಾರ್ಯಕ್ಕೆಂದೆ ಹಲವು ಬಗೆಯ ಪ್ರಯತ್ನ ಸಾಗಿದ್ದವು. ನಾನಾ ಕಾರಣಗಳಿಂದ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಇದೀಗ ದೇವಿಯ ದೇವಸ್ಥಾನ ನಿರ್ಮಾಣ ಕಾರ್ಯ ಚಾಲನೆ ಪಡೆದುಕೊಳ್ಳುತ್ತದೆ ಎಂಬ ಸಮಾಧಾನ ಮತ್ತು ಸಂತಸ ಭಕ್ತರು ವ್ಯಕ್ತಪಡಿಸ ತೊಡಗಿದ್ದಾರೆ.

6-7 ತಿಂಗಳಲ್ಲಿ ಹೊಸ ದೇಗುಲ ನಿರ್ಮಾಣದ ಭರವಸೆ

ಕಾರ್ಕಳದ ಶಿಲ್ಪಿಯೊಬ್ಬರು ಊರಮ್ಮ ದೇವಿಯ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ಹೊಣೆಗಾರಿಕೆ ಹೊತ್ತಿದ್ದು, ಈಗಾಗಲೇ ಕಲ್ಲುಗಳ ಕೆತ್ತನೆ ಕಾರ್ಯ ಭರದಿಂದ ಗಚ್ಚಿನಮಠ ಜಾಗದ ಪ್ರದೇಶದಲ್ಲಿ ಸಾಗಿದೆ. ಇನ್ನೂ 6-7 ತಿಂಗಳಲ್ಲಿ ನೂತನ ದೇವಸ್ಥಾನ ಸುಂದರ ಮತ್ತು ಸುಸಜ್ಜಿತವಾಗಿ ನಿರ್ಮಿಸಿ ಕೊಡುವ ಭರವಸೆ ಶಿಲ್ಪಿಯವರು ದೈವಸ್ಥ ಬಳಗ ಮತ್ತು ಸಮಿತಿಯವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಊರಮ್ಮ ದೇವಿಯ ಹಳೆಯ ದೇವಸ್ಥಾನವನ್ನು ನೆಲಸಮಗೊಳಿಸುವ ಜೆಸಿಬಿ ಕಾರ್ಯಾಚರಣೆ ನಿರಂತರವಾಗಿ ಸಾಗಿದೆ.

PREV
Read more Articles on
click me!

Recommended Stories

ಹಜ್ ಮತ್ತು ಉಮ್ರಾ ಯಾತ್ರೆಗೆ ಸಚಿವ ಜಮೀರ್ ಅಹಮದ್ ಖಾನ್ ಟ್ರಸ್ಟ್‌ನಿಂದ ಆರ್ಥಿಕ ನೆರವು
₹16000 ಕೋಟಿ ರು. ವೆಚ್ಚದ 2 ಗ್ರಾಮೀಣ ರಸ್ತೆ ಸ್ಕೀಂಗೆ ನಾಡಿದ್ದು ಸಿಎಂ ಡಿಕೆ ಚಾಲನೆ!