ಮಡಿವಾಳದಲ್ಲಿ ಒತ್ತುವರಿಯಾಗಿದ್ದ 4.5 ಕೋಟಿ ರೂ. ಮೌಲ್ಯದ ಜಮೀನು ವಶಕ್ಕೆ ಪಡೆದ ಬಿಡಿಎ

Published : Nov 18, 2026, 07:29 AM IST
BDA

ಸಾರಾಂಶ

ಮಡಿವಾಳದಲ್ಲಿ ಒತ್ತುವರಿಯಾಗಿದ್ದ 4.50 ಕೋಟಿ ರೂ. ಮೌಲ್ಯದ 2.72 ಗುಂಟೆ ಜಮೀನನ್ನು ಬಿಡಿಎ ವಶಪಡಿಸಿಕೊಂಡಿದೆ. ಅನಧಿಕೃತ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಮಡಿವಾಳದಲ್ಲಿ ಒತ್ತುವರಿಯಾಗಿದ್ದ 4.50 ಕೋಟಿ ರು.ಮೌಲ್ಯದ 2.72 ಗುಂಟೆ ಜಮೀನನ್ನು ಬಿಡಿಎ ವಶಪಡಿಸಿಕೊಂಡಿದೆ. ಮಡಿವಾಳ ಗ್ರಾಮದ ಸರ್ವೆ ನಂ.80/1ರಲ್ಲಿದ್ದ 2.72 ಗುಂಟೆ ಜಮೀನು ಬಿಡಿಎಗೆ ಸೇರಿದ್ದಾಗಿತ್ತು. ಈ ಜಮೀನಿನನ್ನು ಒತ್ತುವರಿ ಮಾಡಿ ಕೆಲವರು ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ನೋಟಿಸ್‌ ನೀಡಿದ್ದರೂ ಸಹ ತೆರವು ಮಾಡಿರಲಿಲ್ಲ.

ಮಂಗಳವಾರ ಬಿಡಿಎ ಅಧಿಕಾರಿಗಳು ಜೆಸಿಬಿ ಮೂಲಕ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌, ಕಟ್ಟಡಗಳನ್ನು ತೆರವುಗೊಳಿಸಿ ಜಮೀನು ವಶಕ್ಕೆ ಪಡೆದರು. ಈ ಕಾರ್ಯಾಚರಣೆಯಲ್ಲಿ ಬಿಡಿಎ ಆರಕ್ಷಕ ಅಧೀಕ್ಷಕರು, ವಿಶೇಷ ಕಾರ್ಯನಿರತ ಪಡೆ ಮತ್ತು ಬಿಡಿಎ ಅಧಿಕಾರಿಗಳು, ಎಂಜಿನಿಯರ್‌ಗಳು ಪಾಲ್ಗೊಂಡಿದ್ದರು. ಮೈಕೋ ಲೇಔಟ್‌ ಪೊಲೀಸರು ಸಹಕಾರ ನೀಡಿದ್ದರು ಎಂದು ಬಿಡಿಎ ತಿಳಿಸಿದೆ.

200 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಸಮಾಧಿ ಸ್ಥಳ ಅಭಿವೃದ್ಧಿ

ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ವೀರಭೂಮಿ ಸಮಾಧಿ ಸ್ಥಳವನ್ನು ಇನ್ನೆರಡು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಬಾಲಕೃಷ್ಣ ಹೇಳಿದರು.

ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಬಿಡಿಎ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಸುಮಾರು ₹ 200 ಕೋಟಿ ರುಪಾಯಿ ವೆಚ್ಚವಾಗುವ ಅಂದಾಜಿದ್ದು ಇದರ ಸಂಪೂರ್ಣ ಜವಾಬ್ದಾರಿ ಬಿಡಿಎ ವಹಿಸಿಕೊಂಡಿದೆ. ಪ್ರವಾಸಿ ತಾಣವಾಗಿ ಈ ಹಿಂದೆ ಗ್ರಾಮಠಾಣಾ, ಗುಂಡುತೋಪು ಸೇರಿ 8 ಎಕರೆ ಚಿಲ್ಲರೆ ಜಾಗವಿತ್ತು. ಈಗ ಹೆಚ್ಚುವರಿಯಾಗಿ 10 ಎಕರೆ ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು, ಒಟ್ಟು 18 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೃಹತ್ ಯೋಜನೆ ರೂಪುಗೊಳ್ಳಲಿದೆ ಎಂದು ಹೇಳಿದರು.

PREV
Read more Articles on
click me!

Recommended Stories

₹16000 ಕೋಟಿ ರು. ವೆಚ್ಚದ 2 ಗ್ರಾಮೀಣ ರಸ್ತೆ ಸ್ಕೀಂಗೆ ನಾಡಿದ್ದು ಸಿಎಂ ಡಿಕೆ ಚಾಲನೆ!
ಬೆಂಗಳೂರಲ್ಲಿ 2000 ಕೋಟಿ ರು. ವೆಚ್ಚದ ಯೋಜನೆಗೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್