ಈದ್ ಮಿಲಾದ್ ವೇಳೆ DJಗೆ ಅವಕಾಶವಿಲ್ಲ, ಸಾಂಪ್ರದಾಯಿಕ ವಾದ್ಯ ಬಳಸಿ: PSI ವಿಜಯ ಕೃಷ್ಣ

Published : Aug 22, 2026, 10:22 AM IST
Arasikere Eid Milad

ಸಾರಾಂಶ

ಪೊಲೀಸ್‌ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಪಿಎಸ್‌ಐ ವಿಜಯ ಕೃಷ್ಣ ಅವರು ಡಿಜೆಗೆ ಅವಕಾಶವಿಲ್ಲದೆ, ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

ವಿಜಯನಗರ: ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್‌ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು. ಪಿಎಸ್‌ಐ ವಿಜಯ ಕೃಷ್ಣ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಡಿಜೆಗೆ ಅವಕಾಶ ಇರುವುದಿಲ್ಲ. ಸಾಂಪ್ರದಾಯಿಕ ವಾದ್ಯಗಳನ್ನು ಬಳಸಬೇಕು ಎಂದು ತಿಳಿಸಿದರು.

ಅರಸೀಕೆರೆ ಪೊಲೀಸ್ ಠಾಣೆ ಜನಸ್ನೇಹಿ ಪೊಲೀಸ್ ಠಾಣೆಯಾಗಿದೆ. ಈದ್ ಮಿಲಾದ್ ಹಬ್ಬವನ್ನು ಎಲ್ಲ ಗ್ರಾಮಸ್ಥರು ಯಾವುದೇ ಅ ಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು. ಅರಸೀಕೆರೆ ಜಾಮಿಯಾ ಮಸೀದಿ ಅಧ್ಯಕ್ಷ ಹಬೀಬ್ ಸಾಬ್, ಕಾರ್ಯದರ್ಶಿ ಖಾಜ ಸಾಹೇಬ್, ಸಲಾಂ ಸಾಹೇಬ್, ಕೆ. ಮಹಾಂತೇಶ್, ಅಬ್ದುಲ್ ಸಾಹೇಬ್, ರಹಮತುಲ್ಲಾ ಸಾಹೇಬ್, ಫಯಾಜ್, ರಫೀಕ್ ಸಾಹೇಬ್, ಪೊಲೀಸ್ ಇಲಾಖೆಯ ಸಿಬ್ಬಂದಿ ಎಎಸ್‌ಐ ರೇಣುಕಮ್ಮ, ಮತ್ತಿಹಳ್ಳಿ ಕೊಟ್ರೇಶ್, ರವಿನಾಯ್ಕ್ ಹಾಗೂ ಉಚ್ಚಂಗಿದುರ್ಗ, ಅರಸೀಕೆರೆ, ಮಾದಿಹಳ್ಳಿ, ಹನುಮನಹಳ್ಳಿ ಗ್ರಾಮದ ಮುಸ್ಲಿಂ ಹಾಗೂ ಇತರ ಸಮಾಜದ ಮುಖಂಡರು ಶಾಂತಿಸಭೆಯಲ್ಲಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿ-ಧಾರವಾಡ: ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬೇಡ

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಆ. 26ರಂದು ನಡೆಯುವ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್‌ ಸಿಸ್ಟಮ್‌ ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.

ಪಾವಗಡದಲ್ಲಿ ಈದ್‌ ಮಿಲಾದ್

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಮಿಲಾದ್-ಉನ್-ನಬಿ ಹಬ್ಬವನ್ನು ಈ ವರ್ಷವೂ ಸಂಭ್ರಮ, ಶಿಸ್ತು ಮತ್ತು ಸೌಹಾರ್ದತೆಯಿಂದ ಆಚರಿಸಲು ಪಾವಗಡ ಜಾಮಿಯಾ ಮಸೀದಿ ಕಮಿಟಿ ಹಾಗೂ ನೌಜವಾನ್ ಕಮೀಟಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.

ಭಾನುವಾರ ಜಾಮಿಯಾ ಮಸೀದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಎಂ.ಎ.ಜಿ. ಮಹಮ್ಮದ್ ಇಮ್ರಾನ್, ಆಗಸ್ಟ್ 26 ರಂದು ಬೆಳಿಗ್ಗೆ 9.30ಕ್ಕೆ ಜಾಮಿಯಾ ಮಸೀದಿಯಲ್ಲಿ ಎಲ್ಲರೂ ಸೇರಲಿದ್ದು, ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆ ಪೆನುಕೊಂಡ ಊರು ಬಾಗಿಲು, ರೊಪ್ಪ ಗ್ರಾಮದ ಮೂಲಕ ಸಾಗಿ, ಶನಿಮಹಾತ್ಮ ಸರ್ಕಲ್ ಹಾಗೂ ಸಿರಾ ರಸ್ತೆ ಮಾರ್ಗವಾಗಿ ಸಾಗಲಿದೆ. ಆ.15ರಿಂದ ಪ್ರವಾದಿ ಮಹಮ್ಮದ್ ಪೈಗಂಬರ್ಅ ವರ ಜೀವನ ಚರಿತ್ರ ಪ್ರವಚನ ಅರಂಭವಾಗಲಿದ್ದು ಜಾಮಿಯಾ ಮಸೀದಿಯಲ್ಲಿ 12 ದಿನಗಳು ನಡೆಯಲಿದ್ದು , ಆ. 27 ಸಂಜೆ 7 ಗಂಟೆಗೆ ಸಮಾರೋಪ ನಡೆಯಲಿದೆ. ಪ್ರವಾದಿ ಪೈಗಂಬರ್ ಅವರು ಬೋಧಿಸಿದ ಪ್ರೀತಿ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮುದಾಯದ ಮುಖಂಡರು ಕರೆ ನೀಡಿದರು.

PREV
Read more Articles on
click me!

Recommended Stories

ಶಿವಮೊಗ್ಗ ಜಿಲ್ಲೆಗೆ ಒಲಿದ ರಾಷ್ಟ್ರೀಯ ಹೆಮ್ಮೆ: ಹೊಸನಗರದ ಸರ್ಕಾರಿ ಶಾಲಾ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ
ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಆರಂಭ, ಕಬಕ ಪುತ್ತೂರು ನಿಲುಗಡೆಗೆ ಡಿಜಿಟಲ್ ಸಮರ