AISA Protest: ಜಾರ್ಖಂಡ್‌ನಲ್ಲಿ ಹೋರಾಟಗಾರ್ತಿ ನೇಹಾ ಬೋರಾ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ; ಆರೆಸ್ಸೆಸ್ ವಿರುದ್ಧ ಆಕ್ರೋಶ!

Kannadaprabha News   | Kannada Prabha
Published : Aug 10, 2026, 09:14 AM IST
Harapanahalli AISA for Neha Bora in jharkhand in jharkhand

ಸಾರಾಂಶ

ಜಾರ್ಖಂಡ್‌ನ ರಾಂಚಿಯಲ್ಲಿ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹರಪನಹಳ್ಳಿಯಲ್ಲಿ ಎಐಎಸ್ಎ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಕೃತ್ಯದ ಹಿಂದೆ ಆರೆಸ್ಸೆಸ್ ಸಂಘ ಪರಿವಾರದ ಕೈವಾಡವಿದೆ. ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.

ಹರಪನಹಳ್ಳಿ (ಆ.10): ಜಾರ್ಖಂಡ್‌(Jharkhand)ನ ರಾಂಚಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಐಎಸ್ಎ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಜಾರ್ಖಂಡ್‌ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟದಲ್ಲಿ ಯುವಜನತೆಯೊಂದಿಗೆ ಐಕ್ಯತೆ ವ್ಯಕ್ತಪಡಿಸಲು ಪಾಲ್ಗೊಂಡಿದ್ದ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಮೇಲೆ ನಡೆದ ದಾಳಿ ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: JPSC Exam: ಪರೀಕ್ಷೆ ರದ್ದತಿಗೆ ಜಾರ್ಖಂಡ್ ಸರ್ಕಾರ ಒಲವು, ಆದ್ರೆ CBI ತನಿಖೆಗೇ ವಿದ್ಯಾರ್ಥಿಗಳ ಪಟ್ಟು!

ಆರೆಸ್ಸೆಸ್ ಸಂಘ ಪರಿವಾರದ ಕೃತ್ಯ

ಬೆಂಗಳೂರಿನಿಂದ ದೆಹಲಿ-ಮುಂಬೈನಿಂದ ಪಾಟ್ನಾವರೆಗೆ ದೇಶವನ್ನೇ ವ್ಯಾಪಿಸಿದ ಇತ್ತೀಚಿನ ಯುವಜನರ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದು ಯುವತಿಯರು. ಇದನ್ನು ಸಹಿಸಿಕೊಳ್ಳದ ಆರ್ ಎಸ್ ಎಸ್ ಸಂಘ ಪರಿವಾರದವರು ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಮಹಿಳೆಯರ ರಾಜಕೀಯ ನಾಯಕತ್ವದಿಂದ ಆರೆಸ್ಸೆಸ್‌ಗೆ ಅಸಹನೀಯ

ಮಹಿಳೆಯರನ್ನು ಕೇವಲ ಸಂಸ್ಕೃತಿಯ ಸಂಕೇತಗಳಾಗಿ, ಕುಟುಂಬದ ಗೌರವದ ಹೊರೆ ಹೊರುವವರಾಗಿ, ಪುರುಷಾಧಿಪತ್ಯದ ಆದೇಶ ಪಾಲಿಸುವ ಕಾಲಾಳುಗಳಾಗಿ ಮಾತ್ರ ನೋಡಲು ಬಯಸುವ ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗೆ ಮಹಿಳೆಯರು ರಾಜಕೀಯ ನಾಯಕತ್ವವನ್ನು ವಹಿಸುವ ಈ ದೃಶ್ಯವೇ ಅವರಿಗೆ ಅಸಹನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್‌ನ ಡಬಲ್ ಸ್ಟ್ಯಾಂಡರ್ಡ್‌ಗೆ ಬಿಜೆಪಿ ಕಿಡಿ

ನೇಹಾ ಮೇಲೆ ದಾಳಿ ನಡೆಸಿದವರನ್ನ ಬಂಧಿಸಿ

ಜಾರ್ಖಂಡನಲ್ಲಿ ನೇಹಾ ಮತ್ತು ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆಸಿದ ದಾಳಿಕೊರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಗುಳ್ಳೆದಹಟ್ಟಿ ಸಂತೋಷ್, ಹುಲಿಕಟ್ಟಿ ಮೈಲಪ್ಪ, ಬಾಗಳಿ ರೇಣುಕಮ್ಮ ಮೊಮ್ಮದ್ ರಫೀಕ್, ನಾರಾಯಣಪುರ ಮಂಗಳಕ್ಕ, ರೂಪ, ವಿದ್ಯರ್ಥಿ ಸಂಘಟನೆ ಮುಖಂಡರಾದ ವಿನಯ್ ಕುಮಾರ್, ಮೋಹನ್, ಕಲೀಮ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Read more Articles on
click me!

Recommended Stories

ಕರ್ನಾಟಕವನ್ನು ಕಾಡುತ್ತಿರುವ 'ಚಡ್ಡಿ ಗ್ಯಾಂಗ್' ಬೆಂಗಳೂರಿಗೆ ಎಂಟ್ರಿ; ಜನರ ಜೀವಕ್ಕೆ ಬೆಲೆ ಕೊಡದ ದರೋಡೆಕೊರರು!
ವಿಶ್ವದರ್ಜೆಯ ಎಐ ಸಿಟಿಯಾಗಿ ಬಿಡದಿ ಅಭಿವೃದ್ಧಿ: ಮುಖ್ಯಮಂತ್ರಿ ಡಿಕೆಶಿ, ರೈತರಿಗೆ ಬಂಪರ್ ಆಫರ್!