'ಮುಸ್ಲಿಮರೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗ್ಬೇಡಿ'..! ಆಡಿಯೋ ವೈರಲ್

By Suvarna News  |  First Published Jan 21, 2020, 11:11 AM IST

ಮುಸ್ಲಿಮರು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಬೇಡಿ ಎನ್ನುತ್ತಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಗಳೂರಿನಲ್ಲಿ ಬಾಂಬ್ ಸಿಕ್ಕಿರೋದ್ರಿಂದ ಮುಸ್ಲಿಮರನ್ನು ಟಾರ್ಗೆಟ್‌ ಮಾಡಬಹುದೆಂದು ಆಡಿಯೋದಲ್ಲಿ ಹೇಳಲಾಗಿದೆ.


ಮಂಗಳೂರು(ಜ.21): ಮುಸ್ಲಿಮರು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಬೇಡಿ ಎನ್ನುತ್ತಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಗಳೂರಿನಲ್ಲಿ ಬಾಂಬ್ ಸಿಕ್ಕಿರೋದ್ರಿಂದ ಮುಸ್ಲಿಮರನ್ನು ಟಾರ್ಗೆಟ್‌ ಮಾಡಬಹುದೆಂದು ಆಡಿಯೋದಲ್ಲಿ ಹೇಳಲಾಗಿದೆ.

ಮುಸ್ಲಿಮರೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಬೇಡಿ ಎನ್ನುವ ಆಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗ್ತಿದೆ. ಬಾಂಬ್ ಸಿಕ್ಕ ಹಿನ್ನೆಲೆ ಮುಸ್ಲಿಮರು ಏರ್ ಪೋರ್ಟ್ ಗೆ ಹೋಗಬೇಡಿ. ಇನ್ನು ಮುಂದೆ ಮಂಗಳೂರು ಏರ್ ಪೋರ್ಟ್ ನಲ್ಲಿ ಮುಸ್ಲಿಮರು ಟಾರ್ಗೆಟ್ ಆಗೋದು ಪಕ್ಕಾ ಎಂದು ಆಡಿಯೋದಲ್ಲಿ ಹೇಳಲಾಗಿದೆ.

Tap to resize

Latest Videos

ಬಾಂಬ್‌ ನಿಷ್ಕ್ರಿಯ ಕಾರ್ಯಾಚರಣೆಯಲ್ಲಿ ಕೊಡಗಿನ ಯೋಧ ಭಾಗಿ

ಬ್ಯಾರಿ ಭಾಷೆಯಲ್ಲಿ ಮಾತನಾಡಲಾಗಿದ್ದು, ಏರ್ ಪೋರ್ಟ್ ಅಧಿಕಾರಿಗಳು ಇನ್ನು ಮುಂದೆ ಮುಸ್ಲಿಮರನ್ನ ಟಾರ್ಗೆಟ್ ಮಾಡ್ತಾರೆ. ವಿನಾಕಾರಣ ನಮಗೆ ಕಿರುಕುಳ ಕೊಟ್ಟು ಜೈಲಿಗೆ ‌ಹಾಕಬಹುದು. ಹೀಗಾಗಿ ಮಂಗಳೂರು ಏರ್ ಪೋರ್ಟ್ ಪ್ರಯಾಣ ಕೂಡಲೇ ರದ್ದು ಮಾಡಿ. ಟಿಕೆಟ್ ಬುಕ್ ಆಗಿದ್ದರೆ ತಕ್ಷಣ ಅದನ್ನು ‌ಕ್ಯಾನ್ಸಲ್ ಮಾಡಿ ಎಂದು ಹೇಳಲಾಗಿದೆ. ಹಣ ನಷ್ಟವಾದರೂ ಪರವಾಗಿಲ್ಲ ಸುಳ್ಳು ಆರೋಪಕ್ಕೆ ಜೈಲು ಸೇರದಿರಿ ಎಂದಿರುವ ವಿಡಿಯೋ ರಿಜ್ವಾನ್ ಸಜಿಪ ಎಂಬ ಹೆಸರಿನಲ್ಲಿ ವೈರಲ್ ಆಗುತ್ತಿದೆ.

click me!