ಮಂಗಳೂರಿನಲ್ಲಿ ಏರ್‌ಪೋರ್ಟ್‌ನಲ್ಲಿ ಪತ್ತೆಯಾದ ಬಾಂಬ್‌ನ್ನು ನಿರ್ಜನ ಪ್ರದೇಶಲ್ಲಿ ಸ್ಫೋಟಿಸಲಾಗಿದ್ದು, ಸಿಐಎಸ್‌ಎಫ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡದಲ್ಲಿ ಕೊಡಗಿನ ಯೋಧರೊಬ್ಬರು ಭಾಗಿಯಾಗಿದ್ದರು.
ಮಡಿಕೇರಿ(ಜ.21): ಮಂಗಳೂರಿನಲ್ಲಿ ಏರ್‌ಪೋರ್ಟ್‌ನಲ್ಲಿ ಪತ್ತೆಯಾದ ಬಾಂಬ್‌ನ್ನು ನಿರ್ಜನ ಪ್ರದೇಶಲ್ಲಿ ಸ್ಫೋಟಿಸಲಾಗಿದ್ದು, ಸಿಐಎಸ್‌ಎಫ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡದಲ್ಲಿ ಕೊಡಗಿನ ಯೋಧರೊಬ್ಬರು ಭಾಗಿಯಾಗಿದ್ದರು.
ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!
ಮಡಿಕೇರಿ ತಾಲೂಕಿನ ಕತ್ತಲೆಕಾಡು ಗ್ರಾಮದ ಗಣೇಶ್ ಪೂಜಾರಿ (34) ಭಾಗಿಯಾದ ಯೋಧ. ತಿಮ್ಮಪ್ಪ ಪೂಜಾರಿ ಹಾಗೂ ಸರೋಜಾ ದಂಪತಿ ಪುತ್ರ ಗಣೇಶ್, 2007ರಲ್ಲಿ ಪ್ಯಾರಾ ಮಿಲಿಟರಿಗೆ ಸೇರ್ಪಡೆಯಾಗಿದ್ದು, ಮೊದಲು ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ವರ್ಷದಿಂದ ಮಂಗಳೂರು ಏರ್‌ಪೋರ್ಟ್‌ನಲ್ಲಿ ಕಮಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ನಿಯೂ ಅಲ್ಲೇ ಡ್ಯೂಟಿ:
ಗಣೇಶ್ ಪತ್ನಿ ಶಾಂತಿ ಗಣೇಶ್ ಕೂಡ ಸೇನೆಯಲ್ಲಿದ್ದಾರೆ. ಅವರೂ ಏರ್‌ಪೋರ್ಟ್‌ನಲ್ಲಿ ಸಿಪಾಯಿಯಾಗಿದ್ದಾರೆ. ಇದಕ್ಕೂ ಮೊದಲು ದೆಹಲಿ, ಲಕ್ನೋದಲ್ಲಿ ಕಾರ್ಯನಿರ್ವಹಿಸಿದ್ದರು.