ಪೊಲೀಸರು ಆರೋಪಿತ ವಿದ್ಯಾರ್ಥಿನಿಯರ 3 ಮೊಬೈಲ್‌ಗಳಿಂದ ಸುಮಾರು 40 ಗಂಟೆಗಳಷ್ಟು ಡೇಟಾ ರಿಕವರಿ ಮಾಡಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದ ವಿಡಿಯೋ ಫೋಟೋಗಳು ಸಿಕ್ಕಿಲ್ಲ. ಆದ್ದರಿಂದ ಈ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಘಟನೆಗೆ ಬಗ್ಗೆ ಸ್ಷಷ್ಟತೆ ಸಿಗಬಹುದು: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್
ಉಡುಪಿ(ಜು.27): ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆಗೆ ಸಂಬಂಧಿಸಿ ಸದ್ಯ ಹರಿದಾಡುತ್ತಿರುವ ವಿಡಿಯೋಗಳೆಲ್ಲ ಫೇಕ್ ಆಗಿದ್ದು, ಈವರೆಗೆ ಆರೋಪಿತ ವಿದ್ಯಾರ್ಥಿನಿಯರು ಮಾಡಿರುವ ವಿಡಿಯೋದ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದ್ದಾರೆ.
ಘಟನೆ ಬಗ್ಗೆ ತನಿಖೆಗೆ ಆಗಮಿಸಿರುವ ಅವರು ಬುಧವಾರ ಸಂಜೆ ಎಸ್ಪಿ ಅಕ್ಷಯ್ ಮಚ್ಚಿಂದ್ರ ಮತ್ತು ಡಿಸಿ ಡಾ.ವಿದ್ಯಾಕುಮಾರಿ ಅವರೊಂದಿಗೆ ಐಬಿಯಲ್ಲಿ ಮಾಹಿತಿ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪೊಲೀಸರು ಆರೋಪಿತ ವಿದ್ಯಾರ್ಥಿನಿಯರ 3 ಮೊಬೈಲ್‌ಗಳಿಂದ ಸುಮಾರು 40 ಗಂಟೆಗಳಷ್ಟು ಡೇಟಾ ರಿಕವರಿ ಮಾಡಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದ ವಿಡಿಯೋ ಫೋಟೋಗಳು ಸಿಕ್ಕಿಲ್ಲ. ಆದ್ದರಿಂದ ಈ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಘಟನೆಗೆ ಬಗ್ಗೆ ಸ್ಷಷ್ಟತೆ ಸಿಗಬಹುದು ಎಂದವರು ಹೇಳಿದ್ದಾರೆ.
undefined
ವಿದ್ಯಾರ್ಥಿನಿಯರ ಆಶ್ಲೀಲ ವೀಡಿಯೋ ಪ್ರಕರಣ, ಸಮಗ್ರ ತನಿಖೆ ಸಿಟಿ ರವಿ ಒತ್ತಾಯ
ಸಾಕ್ಷ್ಯ ಸಿಗದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ, ಚಾರ್ಜ್‌ಶೀಟ್ ಮಾಡಲು ಸಾಧ್ಯವಿಲ್ಲ, ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿತರು ಎಂದು ಕರೆಯಬಹುದು ಅಷ್ಟೇ ಎಂದು ಖುಷ್ಬೂ ಹೇಳಿದ್ದಾರೆ. ಪ್ರಕರಣಕ್ಕೆ ಉಗ್ರವಾದದ ಲಿಂಕ್ ಇದೆ ಎಂದು ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಸದ್ಯ ನಾವು ಆ ರೀತಿ ಭಾವಿಸುವುದು ಬೇಡ, ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಬೇಡ ಎಂದವರು ಹೇಳಿದರು.
ವಿಡಿಯೋ ಇತ್ತು, ಡಿಲಿಟ್ ಮಾಡಿದ್ದಾರೆ:
ಸಂತ್ರಸ್ತೆ ದೂರು ಕೊಟ್ಟಿಲ್ಲ, ಕಾರಣ ಪೊಲೀಸರು ದೂರು ದಾಖಲಿಸಿಲ್ಲ, ಕಾಲೇಜು ಆಡಳಿತ ಮಂಡಳಿ ಮಂಗಳವಾರ ಪತ್ರಿಕಾಗೋಷ್ಠಿ ನಂತರ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ಇತ್ತು ಮತ್ತು ಅದನ್ನು ನಾವು ಡಿಲೀಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ವಿಡಿಯೋ ಇತ್ತು, ಡಿಲಿಟ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಖುಷ್ಬೂ ಸ್ಪಷ್ಟೀಕರಣ ನೀಡಿದರು.