ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಬುಡ್ಗ ಜಂಗಮ ಸಮಾಜಕ್ಕೆ ಸೇರಿದ ವಿಭೂತಿ ಗುಂಡಪ್ಪ ಅವರು ಹಲವು ದಶಕಗಳಿಂದ ಹಗಲಿನಲ್ಲಿ ವೇಷ ಧರಿಸಿ ಗ್ರಾಮ ಗ್ರಾಮಗಳಿಗೆ ತೆರಳಿ ಮನೆಯಂಗಳದಲ್ಲಿ ರಾಮಾಯಣ, ಮಹಾಭಾರತ, ಆಂಜನೇಯ ಸೇರಿದಂತೆ ದಾಸ ವರಣ್ಯರ ಚರಿತ್ರೆ, ಹಗಲುವೇಷ, ಮೌಖಿಕ ಜನಪದ ಗೀತೆ, ತತ್ವಪದ, ದಾಸರಪದ, ಭಕ್ತಿಗೀತೆ, ಭಾವಗೀತೆ, ವಚನ ಗಾಯನ ಇವರ ವೈಶಿಷ್ಟ್ಯತೆಯಾಗಿದೆ.
ರಾಮಮೂರ್ತಿ ನವಲಿ
ಗಂಗಾವತಿ(ಅ.31): ಹಗಲು ವೇಷಧಾರಿ ಕಲಾವಿದ ವಿಭೂತಿ ಗುಂಡಪ್ಪ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಬುಡ್ಗ ಜಂಗಮ ಸಮಾಜಕ್ಕೆ ಸೇರಿದ ವಿಭೂತಿ ಗುಂಡಪ್ಪ ಅವರು ಹಲವು ದಶಕಗಳಿಂದ ಹಗಲಿನಲ್ಲಿ ವೇಷ ಧರಿಸಿ ಗ್ರಾಮ ಗ್ರಾಮಗಳಿಗೆ ತೆರಳಿ ಮನೆಯಂಗಳದಲ್ಲಿ ರಾಮಾಯಣ, ಮಹಾಭಾರತ, ಆಂಜನೇಯ ಸೇರಿದಂತೆ ದಾಸ ವರಣ್ಯರ ಚರಿತ್ರೆ, ಹಗಲುವೇಷ, ಮೌಖಿಕ ಜನಪದ ಗೀತೆ, ತತ್ವಪದ, ದಾಸರಪದ, ಭಕ್ತಿಗೀತೆ, ಭಾವಗೀತೆ, ವಚನ ಗಾಯನ ಇವರ ವೈಶಿಷ್ಟ್ಯತೆಯಾಗಿದೆ. ಹಾರ್ಮೋನಿಯಂ, ತಬಲಾ, ದಮ್ಮಡಿ, ತಾಳ, ರಾಗಮಾಲೆಯೊಂದಿಗೆ ಪ್ರದರ್ಶನ ಮಾಡಿದ್ದಾರೆ.
undefined
ವಿಭೂತಿ ಗುಂಡಪ್ಪ ತಮ್ಮ ನೇತೃತ್ವದ ತಂಡ ಮುಂದೆ ಸಾಗುತ್ತಿತ್ತು. ವಿಭೂತಿ ಗುಂಡಪ್ಪನವರ ಜಾನಪದ ಹಗಲುವೇಷ ಸಾಂಸ್ಕೃತಿಕ ಕಲಾ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ. ಸಿದ್ದಾಪುರ ಗ್ರಾಮದ ಬುಡ್ಗ ಜಂಗಮ್ ಕಾಲೋನಿಯಲ್ಲಿ ವಾಸಿಸುವ ಇವರು ಸುದೀರ್ಘ ಅವಧಿಯ ಸೇವೆಯನ್ನು ಪರಿಗಣಸಿದ ವಿವಿಧ ಸಂಘ ಸಂಸ್ಥೆಯವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮೊಟ್ಟ ಮೊದಲ ಪತ್ರಿಕಾ ವಿತರಕ ಮೈಸೂರು ಜವರಪ್ಪ
ಜಾನಪದ ತಜ್ಞರಾಗಿರುವ ದಿ.ಡಾ.ಎಚ್.ಎಲ್. ನಾಗೇಗೌಡ, ಪ್ರೊ. ಎಚ್.ಜೆ. ಲಕ್ಕಪ್ಪಗೌಡ, ಪ್ರೊ. ಕಾಳೇಗೌಡ ನಾಗವಾರ, ಗೊ.ರು.ಚನ್ನಬಸಪ್ಪ, ಪುರೋಷೋತ್ತಮ ಬಿಳಿಮಲೆ, ಪ್ರೊ, ಮಲ್ಲಿಕಾಘಂಟಿ, ಖ್ಯಾತರಂಗತಜ್ಞ ಬಸವಲಿಂಗಯ್ಯ, ಪ್ರೊ., ಅಂಬಳಿಕೆ ಹಿರಿಯಣ್ಣ, ಪ್ರೊ, ಸಿರಿಗಂಧ ಶ್ರೀನಿವಾಸ ಮೂರ್ತಿ ಡಾ.ಎಂ.ಬೈರೇಗೌಡ ಸೇರಿದಂತೆ ನೂರಾರು ಜಾನಪದ ತಜ್ಞರ ಗಮನ ಸೆಳೆದಿದಿದ್ದಾರೆ,
ಇವರ ಕಲಾತಂಡ ಕೇವಲ ಹಳ್ಳಿ ಹಳ್ಳಿಗಳಿಗೆ ತೆರಳದೆ ಅಖಿಲ ಭಾರತ ಕನ್ನ ಸಾಹಿತ್ಯ ಸಮ್ಮೇಳನ, ಜಿಲ್ಲಾ ಮತ್ತು ತಾಲೂಕ ಸಮ್ಮೇಳನಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೆ ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಈ ವರ್ಷದ ಕರ್ನಾಟಕದ ರಾಜ್ಯೋತ್ಸವ-50 ರ ಸಂಭ್ರಮದಲ್ಲಿ ವಿಭೂತಿ ಗುಂಡಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿರುವದಕ್ಕೆ ಈ ಭಾಗದ ಜನರು ಅಭಿನಂದಿಸಿದ್ದಾರೆ.