ಗುಂಡ್ಲುಪೇಟೆ: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

By Kannadaprabha News  |  First Published Jan 6, 2024, 11:00 PM IST

ಮೈಸೂರು ಮೂಲದ ಮಹಮ್ಮದ್‌ ರಫೀಕ್‌ ಬಂಧಿತ ಆರೋಪಿಯಾಗಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಮೈಸೂರಿನಿಂದ ಗೂಡ್ಸ್‌ ಆಟೋದಲ್ಲಿ ಜಾನುವಾರು ತುಂಬಿಕೊಂಡು ಬಂದಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ತಡೆದಾಗ ಅಕ್ರಮ ಜಾನುವಾರು ದಂಧೆ ಬಯಲಿಗೆ ಬಂದಿದೆ.

Vehicle Seized For Illegally Transporting Cattle to the Slaughterhouse at Gundlupete grg

ಗುಂಡ್ಲುಪೇಟೆ(ಜ.06):  ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ಹಿಡಿದು ಬೇಗೂರು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಮೈಸೂರು ಮೂಲದ ಮಹಮ್ಮದ್‌ ರಫೀಕ್‌ ಬಂಧಿತ ಆರೋಪಿಯಾಗಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಮೈಸೂರಿನಿಂದ ಗೂಡ್ಸ್‌ ಆಟೋದಲ್ಲಿ ಜಾನುವಾರು ತುಂಬಿಕೊಂಡು ಬಂದಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ತಡೆದಾಗ ಅಕ್ರಮ ಜಾನುವಾರು ದಂಧೆ ಬಯಲಿಗೆ ಬಂದಿದೆ.

Tap to resize

Latest Videos

ಆಫ್ಟರ್‌ ಮೋದಿ ಎಫೆಕ್ಟ್: ಬಂಡೀಪುರದಲ್ಲಿ ಸಫಾರಿಗೆ ಮುಗಿಬಿದ್ದ ಹೊರ ರಾಜ್ಯದ ಪ್ರವಾಸಿಗರು..!

ಟೆಂಪೋದಲ್ಲಿ ಕುರಿಗಳಂತೆ ಜಾನುವಾರುಗಳು ತುಂಬಿರುವ ದೃಶ್ಯ ಕಂಡ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಬೇಗೂರು ಪೊಲೀಸರಿಗೆ ಜಾನುವಾರು,ಟೆಂಪೋ ಒಪ್ಪಿಸಿದ್ದಾರೆ. ಟೆಂಪೋ ಹಾಗೂ ಟೆಂಪೋದಲ್ಲಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ತಾಲೂಕಿನ ಬೇಗೂರು,ತೆರಕಣಾಂಬಿ ಸಂತೆಯಲ್ಲಿ ಕಡಿಮೆ ಬೆಲೆಗೆ ರೈತರಿಂದ ದಲ್ಲಾಳಿಗಳ ಮೂಲಕ ಖರೀದಿಸಿ ಹೆಚ್ಚಿನ ಬೆಲೆಗೆ ಕೇರಳದ ಕಸಾಯಿಖಾನೆಗೆ ಸಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ನಂದೀಶ್‌, ನಂಜುಂಡ, ಅಣ್ಣಯ್ಯ ಒತ್ತಾಯಿಸಿದ್ದಾರೆ.

vuukle one pixel image
click me!
vuukle one pixel image vuukle one pixel image