ತರಕಾರಿ ವ್ಯಾಪಾರಿ ಪುತ್ರಿ ಏರೋನಾಟಿಕಲ್ ಎಂಜಿನಿಯರ್.! ರಾಜ್ಯಕ್ಕೇ ಫಸ್ಟ್‌

By Kannadaprabha News  |  First Published Feb 9, 2020, 8:21 AM IST

ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ 19ನೇ ಘಟಿಕೋತ್ಸವದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿನಿಯರೇ ಚಿನ್ನದ ಹುಡುಗಿಯರಾಗಿ ಹೊರಹೊಮ್ಮಿದ್ದಾರೆ.


ಮಂಗಳೂರು(ಫೆ.09): ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ 19ನೇ ಘಟಿಕೋತ್ಸವದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿನಿಯರೇ ಚಿನ್ನದ ಹುಡುಗಿಯರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಪರಿಶ್ರಮ ಇದ್ದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುವುದನ್ನು ಸಾಬೀತುಪಡಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗದ ತರಕಾರಿ ವ್ಯಾಪಾರಿ ಪುತ್ರಿ ಲಲಿತಾ ಆರ್‌. ಅವರು ಏರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬಡ ಕುಟುಂಬದ ತಂದೆ ರಾಜೇಂದ್ರ ಹಾಗೂ ತಾಯಿ ಆರ್‌. ಚಿತ್ರಾ ವೃತ್ತಿಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. ವ್ಯಾಪಾರದಿಂದ ಬಂದ ಅಲ್ಪ, ಸ್ವಲ್ಪ ಹಣದಲ್ಲಿಯೇ ಮೂವರು ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಉಳಿದ ಹಣದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

Latest Videos

undefined

ಮೆಕ್ಯಾನಿಕ್ ಮಗಳಿಗೆ 13 ಚಿನ್ನದ ಪದಕ..!

ರಾಜ್ಯದ ಪ್ರತಿಷ್ಠಿತ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಸಮಾರಂಭ ಶನಿವಾರ ನೆರವೇರಿತು. ಘಟಿಕೋತ್ಸವದಲ್ಲಿ ಒಟ್ಟು 58,825 ಬಿಇ., 744 ಬಿ.ಆರ್ಕ್, 4606 ಎಂಬಿಎ, 1260 ಎಂಸಿಎ, 1582 ಎಂ.ಟೆಕ್‌, 39 ಎಂ.ಆರ್ಕ್, 579 ಪಿಎಚ್‌ಡಿ. ಹಾಗೂ 21 ಎಂ.ಎಸ್ಸಿ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

click me!