ಬೆಂಗಳೂರು (ನ.23): ನಿರಂತರ ಮಳೆಯಿಂದ (Heavy Rain) ನಗರದ ಮಾರುಕಟ್ಟೆಗಳಿಗೆ (Market) ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟೊಮೆಟೋ (Tomato), ಕ್ಯಾಪ್ಸಿಕಂ (Capsicum) ಸೇರಿದಂತೆ ಎಲ್ಲ ತರಕಾರಿಗಳ (Vegetable) ಸಗಟು ಮತ್ತು ಚಿಲ್ಲರೆ ಬೆಲೆ (Price) ದುಪ್ಪಟ್ಟಾಗಿದೆ. ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸೊಪ್ಪು, ತರಕಾರಿ ಉತ್ಪನ್ನ ರೈತರ ಜಮೀನಿನಲ್ಲೇ ಹಾಳಾಗಿದೆ. ಇದರಿಂದ ಬೆಂಗಳೂರು ಮಾರುಕಟ್ಟೆಗೆ (Bengaluru Market) ಹೊಸಕೋಟೆ, ಕೋಲಾರ (Kolar), ಚಿಕ್ಕಬಳ್ಳಾಪುರ, ಗೌರಿಬಿದನೂರು, ರಾಮನಗರ, ತುಮಕೂರು (Tumakuru), ಶಿರಾ ಸೇರಿದಂತೆ ಮತ್ತಿತರ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದ ತರಕಾರಿ ಪೂರೈಕೆ ಆಗಿಲ್ಲ. ಅಲ್ಪ ಪ್ರಮಾಣದ ತರಕಾರಿ ಮಾತ್ರ ಬರುತ್ತಿದೆ.
ಹೀಗಾಗಿ ಟೊಮೆಟೋ ಮತ್ತು ಕ್ಯಾಪ್ಸಿಕಂ ಬೆಲೆ 100 ರು. ಗಡಿ ದಾಟಿದೆ. ಕಳೆದೆರಡು ದಿನಕ್ಕೆ ಹೋಲಿಸಿದರೆ ಸೋಮವಾರ ಟೊಮೆಟೋ ಸಗಟು ದರದಲ್ಲಿ ಸುಮಾರು 10 ರು. ಕಡಿಮೆ ಆಗಿದ್ದರೂ ಸಹ ಚಿಲ್ಲರೆ ಬೆಲೆ ಮಾತ್ರ ಇಳಿದಿಲ್ಲ. ಮಳೆ ಹೀಗೆ ಮುಂದುವರಿದರೆ ದರ (Price ) ಇನ್ನಷ್ಟುಏರಿಕೆಯಾಗುವ ಸಂಭವವಿದೆ. ಒಂದು ವೇಳೆ ಮಳೆ ಕಡಿಮೆಯಾದರೂ ಸೊಪ್ಪುಗಳ ಹೊರತಾಗಿ ತರಕಾರಿಗಳ ದರಗಳು ಕೂಡಲೇ ಇಳಿಕೆ ಆಗದು ಎನ್ನುತ್ತಾರೆ ಎಂದು ದಾಸನಪುರ ಕೆಂಪೇಗೌಡ ಮಾರುಕಟ್ಟೆಯ (kempegowda market) ತರಕಾರಿ ವರ್ತಕರ ಸಂಘದ ಅಧ್ಯಕ್ಷ ಗೋವಿಂದಪ್ಪ.
undefined
ಸಗಟು ದರ ಸಹ ಅಧಿಕ
ಸಾಮಾನ್ಯವಾಗಿ ತರಕಾರಿಗಳ ಸಗಟು ದರ 15-30 ರು. ಆಸುಪಾಸಿನಲ್ಲಿರುತ್ತದೆ. ಮಳೆಯಿಂದಾಗಿ (heav rain) ಸದ್ಯ ಸಗಟು ದರ ದುಪ್ಪಟ್ಟಾಗಿದ್ದು, ಕೆಲವು ತರಕಾರಿಗಳ ದರ ಮೂರು ಪಟ್ಟು ಹೆಚ್ಚಾಗಿದೆ. ಸೋಮವಾರ ಕೇಜಿ ಟೊಮೆಟೋ ಸಗಟು ದರ 80-90 ರು. , ಕ್ಯಾಪ್ಸಿಕಂ ಕೇಜಿಗೆ 80-100 ರು.ಕ್ಕೆ ಚಿಲ್ಲರೆ ವ್ಯಾಪಾರಿಗಳು ಖರೀದಿಸಿದ್ದಾರೆ. ಕೇಜಿ ಬದನೆ (Brinjal) 70 ರು., ಆಲೂಗಡ್ಡೆ 25-30, ಈರುಳ್ಳಿ 35-40 ರು. ಇದ್ದರೆ, ಬೀನ್ಸ್ 30-40, ಕ್ಯಾರೆಟ್ 50-60 ಆಗಿದೆ. ಹಸಿ ಮೆಣಸಿನಕಾಯಿ (Chilly) ಕೇಜಿಗೆ 35-40 ರು., ದಪ್ಪ ಮೆಣಸಿನಕಾಯಿ 50 ರು. ಏರಿಕೆ ಆಗಿದೆ.
ಮೂಲಂಗಿ 40 ರು., ಬಿಟ್‌ರೂಟ್ ಮತ್ತು ಹಾಗಲಕಾಯಿ ತಲಾ 50 ರು., ಹಿರೇಕಾಯಿ 60 ರು. ಇತ್ತು. ಉಳಿದಂತೆ ಕಟ್ಟು ಕೊತ್ತಂಬರಿಗೆ 25 ರು. , ಪಾಲಕ್ 15-20 ರು. ಮತ್ತು ಪುದೀನ 10-15ಕ್ಕೆ ರು. ಮಾರಾಟವಾಯಿತು.
ಚಿಲ್ಲರೆ ದರ (ಕೆಜಿಗೆ)ಪಟ್ಟಿ
ತರಕಾರಿ ಚಿಲ್ಲರೆ ಹಾಪ್‌ಕಾಮ್ಸ್
ಟೊಮೆಟೋ 111-120 100
ಕ್ಯಾಪ್ಸಿಕಂ 80-120 130
ಈರುಳ್ಳಿ 40-55 48
ಬದನೆ 70-80 75
ಆಲೂಗಡ್ಡೆ 35-45 42
ಸೌತೆ 20-25 22
ಹಸಿಮೆಣಸಿನಕಾಯಿ 50-60 64
ದಪ್ಪಮೆಣಸಿನಕಾಯಿ 60-70 67
ಬಿಟ್‌ರೂಟ್ 55-65 54
ಹಿರೇಕಾಯಿ 65-75 -
ಮೂಲಂಗಿ 45-60 62
ಕಟ್ಟುಕೊತ್ತಂಬರಿ 20-25 67(ಕೇಜಿ)
ಪುದಿನ 10-15 56(ಕೇಜಿ)
ಕರಿಬೇವು 10 67(ಕೇಜಿ)