ಭಾವನೆಗಳಿಗೆ BSY ಸ್ಪಂದನೆ: 'ಯಡಿಯೂರಪ್ಪಗೆ ಮಹದಾಯಿ ಹೋರಾಟಗಾರರಿಂದ ಅಭಿನಂದನೆ'

Suvarna News   | Asianet News
Published : Mar 05, 2020, 12:52 PM ISTUpdated : Mar 05, 2020, 01:09 PM IST
ಭಾವನೆಗಳಿಗೆ BSY ಸ್ಪಂದನೆ: 'ಯಡಿಯೂರಪ್ಪಗೆ ಮಹದಾಯಿ ಹೋರಾಟಗಾರರಿಂದ ಅಭಿನಂದನೆ'

ಸಾರಾಂಶ

ಮಹದಾಯಿ ಯೋಜನೆಗೆ ಅನುದಾನ ಮೀಸಲಿಟ್ಟದಕ್ಕೆ ಹೋರಾಟಗಾರರಲ್ಲಿ ಸಂತಸ ತಂದಿದೆ: ವಿರೇಶ್ ಸೊಬರದಮಠ| ಯಡಿಯೂರಪ್ಪ ಅತ್ಯಂತ ಶ್ರೇಷ್ಠವಾದ ಕೆಲಸ ಮಾಡಿದ್ದಾರೆ| ಮುಖ್ಯಮಂತ್ರಿಗಳಿಗೆ ರೈತ ಸಮುದಾಯದ ಪರವಾಗಿ ಅಭಿನಂದನೆ| 

ಹುಬ್ಬಳ್ಳಿ(ಮಾ.05): ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಐದು ನೂರು ಕೋಟಿ ಅನುದಾನ ಮೀಸಲಿಟ್ಟದಕ್ಕೆ ಹೋರಾಟಗಾರರಲ್ಲಿ ಸಂತಸ ತಂದಿದೆ ಎಂದು ರೈತ ಸೇನೆ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಹೇಳಿದ್ದಾರೆ.

ಕರ್ನಾಟಕ ಬಜೆಟ್ 2020: 'ಮಹದಾಯಿಗೆ ಕನಿಷ್ಠ 1000 ಕೋಟಿ ಮೀಸಲಿಡಲಿ'

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅತ್ಯಂತ ಶ್ರೇಷ್ಠವಾದ ಕೆಲಸ ಮಾಡಿದ್ದಾರೆ. ರಾಜ್ಯದ ರೈತರ‌ ಹಿತ ಕಾಪಾಡಲು ಮುಖ್ಯಮಂತ್ರಿ ಉತ್ತಮವಾದ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ ಬಜೆಟ್ 2020: ಮಹದಾಯಿ ಯೋಜನೆಗೆ 500 ಕೋಟಿ ಮೀಸಲು

ಸಿಎಂ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಮಹದಾಯಿ ಯೋಜನೆಗೆ 500 ಕೋಟಿ ರು. ಮೀಸಲಿಡುವ ಮೂಲಕ ನಮ್ಮೆಲ್ಲರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತ ಸಮುದಾಯದ ಪರವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

"

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು