9 ನಿಮಿಷ ಜ್ಯೋತಿ ಬೆಳಗಲು ಡಾ. ವೀ​ರೇಂದ್ರ ಹೆಗ್ಗಡೆ ಕರೆ

By Kannadaprabha News  |  First Published Apr 5, 2020, 7:22 AM IST

ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಒಂಬತ್ತು ನಿಮಿಷಗಳ ಕಾಲ ಜ್ಯೋತಿ ಹಚ್ಚಿ ಶುಭವನ್ನು ಹಾರೈಸಿ, ಮನಸ್ಸಿನ ಕತ್ತಲೆಯನ್ನು ಓಡಿಸಿ, ದೇಶದಿಂದ ಈ ಕ್ರೂರವಾದಂತಹ ಕೊರೋನಾ ರಾಕ್ಷಸನನ್ನು ಓಡಿಸಿ  ಶ್ರೀ ಕ್ಷೇತ್ರ ಧರ್ಮ​ಸ್ಥ​ಳದ ಧರ್ಮಾ​ಧಿ​ಕಾರಿ ಡಾ.ಡಿ.​ವೀ​ರೇಂದ್ರ ಹೆಗ್ಗಡೆ ಕರೆ ನೀಡಿ​ದ್ದಾ​ರೆ.


ಮಂಗಳೂರು(ಏ.05): ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿ​ದಂತೆ ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಒಂಬತ್ತು ನಿಮಿಷಗಳ ಕಾಲ ಜ್ಯೋತಿ ಹಚ್ಚಿ ಶುಭವನ್ನು ಹಾರೈಸಿ, ಮನಸ್ಸಿನ ಕತ್ತಲೆಯನ್ನು ಓಡಿಸಿ, ದೇಶದಿಂದ ಈ ಕ್ರೂರವಾದಂತಹ ಕೊರೋನಾ ರಾಕ್ಷಸನನ್ನು ಓಡಿಸಿ  ಶ್ರೀ ಕ್ಷೇತ್ರ ಧರ್ಮ​ಸ್ಥ​ಳದ ಧರ್ಮಾ​ಧಿ​ಕಾರಿ ಡಾ.ಡಿ.​ವೀ​ರೇಂದ್ರ ಹೆಗ್ಗಡೆ ಕರೆ ನೀಡಿ​ದ್ದಾ​ರೆ.

ಈ ಕುರಿತು ಸಂದೇಶ ನೀಡಿ​ರುವ ಅವರು, ನಾವು ಕೂಡ ಧರ್ಮಸ್ಥಳ ದೇವಸ್ಥಾನದಲ್ಲಿ ರಾತ್ರಿ 9 ಗಂಟೆಗೆ ಈ ಜ್ಯೋತಿಯನ್ನು ಹಚ್ಚುತ್ತೇವೆ, ಇದರ ಫಲವಾಗಿ ನಮ್ಮ ನಾಡಿಗೆ, ರಾಷ್ಟ್ರಕ್ಕೆ, ವಿಶ್ವಕ್ಕೆ ಶುಭವಾಗಲಿ. ಇಡೀ ದೇಶದ ಪ್ರಜೆಗಳು ರಾತ್ರಿ 9ಕ್ಕೆ ವಿದ್ಯುತ್‌ ಆರಿಸಿ ಮನೆಯಲ್ಲಿ ಇರತಕ್ಕಂತಹ ಜ್ಯೋತಿಯನ್ನು ಬೆಳಗಿಸಿ, ತಾವು ಕೂಡ ಜ್ಯೋತಿಯ ಜತೆ ಐಕ್ಯವಾಗಬೇಕು. ಎಲ್ಲ ಸುಖ ದುಃಖದೊಂದಿಗೆ ಬೆರೆಯಬೇಕು ಎಂದಿದ್ದಾ​ರೆ.

Latest Videos

undefined

ಶನಿವಾರ ಒಂದೇ ದಿನ 16 ಕೊರೋನಾ ಕೇಸ್: ರಾಜ್ಯದಲ್ಲಿ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

ನಾವೆಲ್ಲರೂ ಕೂಡ ಸಣ್ಣ ಸಣ್ಣ ಜ್ಯೋತಿಗಳು. ರಾತ್ರಿ ಈ ಜ್ಯೋತಿಯನ್ನು ಹಚ್ಚಬೇಕು ಎಂದು ಪ್ರಧಾನಿ ಹೇಳಿದ್ದಾರೆ. ನಾವು ರಾತ್ರಿ ಹೊತ್ತಿನಲ್ಲಿ ಸಣ್ಣ ಜ್ಯೋತಿ ಹಚ್ಚಿ, ಈ ಸಣ್ಣ ಜ್ಯೋತಿ ಇದು ಕೇವಲ ನನ್ನ ಮನೆಯ ಜ್ಯೋತಿ ಆದರೂ ಕೂಡ ನನ್ನ ಮನೆಯಲ್ಲಿರುವ ಎಲ್ಲ ಕುಟುಂಬದ ಸದಸ್ಯರ ಮನೆಗೆ ಬೆಳಕನ್ನು, ಮನಸ್ಸಿಗೆ ಬೆಳಕನ್ನು ಕೊಟ್ಟರೆ ಇಡೀ ನಮ್ಮ ದೇಶಕ್ಕೆ ಸುಭಿಕ್ಷೆ ಆಗುತ್ತದೆ. ಆ ಮೂಲಕ ವಿಶ್ವಕ್ಕೆ ಸುಭಿಕ್ಷೆ ಆಗುತ್ತದೆ ಎಂಬ ಸಂದೇಶವಾಗುತ್ತದೆ. ಇದನ್ನು ನೀವೆಲ್ಲರೂ ದಯವಿಟ್ಟು ಪ್ರೀತಿಯಿಂದ ಆಸ್ವಾದಿಸಿ, ಆನಂದಿಸಿ, ಸ್ವೀಕರಿಸಿ ಎಂದು ಅವರು ಕರೆ ನೀಡಿ​ದ್ದಾ​ರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಮಕ್ಕಳ ಸಾಥ್‌: ಬಾಲಮಂದಿರ ಮಾಸ್ಕ್‌ ತಯಾರಿಕೆ

ಭಾರತದ ಪ್ರಜೆಗಳು ನಾವೆಲ್ಲರೂ ಒಗ್ಗಾಟ್ಟಾಗಿದ್ದೇವೆ, ಒಂದಾಗಿದ್ದೇವೆ ಮತ್ತು ವಿಶ್ವದ ಜತೆಗೆ ಕೈಜೋಡಿಸಿದ್ದೇವೆ. ಈ ಕೈ ಜೋಡಿಸುವಿಕೆಯಲ್ಲಿ ಎರಡು ರೀತಿಯಿದೆ. ಒಂದು ಕೊರೋನಾ ವ್ಯಾಧಿ ಇಂದು ವಿಶ್ವದ ಎಲ್ಲ ದೇಶಗಳಿಗೂ ಪಸರಿಸಿದೆ. ಹಾಗೇ ಒಂದಾಗಿದ್ದೇವೆ. ಅದರ ವಿರುದ್ಧ ಹೋರಾಟ ಮಾಡುವಲ್ಲಿಯೂ ನಾವು ವಿಶೇಷವಾದ ಪ್ರಜ್ಞೆ, ಏಕತೆ, ಸಂಘಟನೆಯನ್ನು ತೋರಿಸಿದ್ದೇವೆ. ನಾವು ಮನೆಯಲ್ಲಿ ಕುಳಿತಾಗ ಇತರರ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಹೆಗ್ಗಡೆ ಕರೆ ನೀಡಿ​ದ್ದಾ​ರೆ.

click me!