ಕಲಬುರಗಿ: ಚೈನಾ ಮೇಡ್‌ ವಸ್ತುಗಳಿಗೆ ಬೆಂಕಿ..!

By Kannadaprabha News  |  First Published Jun 18, 2020, 2:24 PM IST

ಕಲಬುರಗಿಯಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಆಗ್ರಹಿಸಿ ಪ್ರತಿಭಟನೆ| ಚೀನಾ ಮೇಡ್‌ ವಸ್ತುಗಳ ಖರೀದಿ ಬೇಡವೆಂಬ ಸಂದೇಶ| ಚೀನಾ ಮೇಡ್‌ ಖರೀದಿಸದಂತೆ ಜನರಲ್ಲಿ ಜಾಗೃತಿ ಮೂಡಿಸಲು ಅಭಾ ವೀರಶೈವ ಮಹಾಸಭಾ ಯುವ ಘಟಕ, ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ|


ಕಲಬುರಗಿ(ಜೂ.18): ವೀರಶೈವ ಮಹಾಸಭಾ ಹಾಗೂ ಶ್ರೀರಾಮ ಸೇನೆ ಜಂಟಿಯಾಗಿ ಕಲಬುರಗಿಯ ಪಟೇಲ್‌ ವೃತ್ತದಲ್ಲಿ ಚೀನಾ ವಸ್ತುಗಳಿಗೆ ಬೆಂಕಿ ಇಡುವ ಮೂಲಕ ದೇಶದಲ್ಲಿ ಅವುಗಳ ಖರೀದಿಗೆ ಯಾರೂ ಮುಂದಾಗಬಾರದು ಎಂದು ಸಾರ್ವಜನಿಕವಾಗಿ ಗಮನ ಸೆಳೆಯಲು ಹೋರಾಟ ನಡೆಸಿದರು.

ಅಖಿಲ ಭಾರತ ವೀರಶೈವ ಸಮಾಜದ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್‌. ಪಾಟೀಲ್‌ ನರಿಬೋಳ ನೇತೃತ್ವದಲ್ಲಿ ಸರ್ದಾರ್‌ ವಲ್ಲಬಾಯ್‌ ಪಟೇಲ್‌ ವೃತ್ತದಲ್ಲಿ ಚೀನಾ ವಸ್ತು ಬಹಿಷ್ಕರಿಸಿ ಚೀನಾಕ್ಕೆ ಪಾಠ ಕಲಿಸಿ ಎಂದು ನಡೆದ ಪ್ರತಿಭಟನೆ ಹಾಗೂ ಜಾಗೃತಿ ಅಭಿಯಾನದಲ್ಲಿ ಸೇರಿದ್ದ ಯುವಕರು ಚೀನಾ ಮೇಡ್‌ ವಸ್ತುಗಳು ನಮಗೆ ಬೇಡವೆಂದು ಘೋಷಣೆ ಹಾಕಿದರು.

Tap to resize

Latest Videos

undefined

ಕಲಬುರಗಿ: ಗಾಂಧಿ ಜಯಂತಿಯಂದು ಜಿಮ್ಸ್ ಟ್ರಾಮಾ ಸೆಂಟರ್ ಉದ್ಘಾಟನೆ, ಸಚಿವ ಸುಧಾಕರ್

ಈಗಾಗಲೇ ಕೊರೋನಾ ವೈರಾಣು ಹರಡುವ ಮೂಲಕ ಜಗತ್ತಿಗೇ ಕಂಟಕವಾಗಿರುವ ನೆರೆಯ ಚೀನಾ ರಾಷ್ಟ್ರದವರು ಕಾಲು ಕೆದರಿ ಜಗಳ ಮಾಡುತ್ತ ಯುದ್ಧೋನ್ಮಾದದಲ್ಲಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕಾದರೆ ನಾವು ಚೀನಾದಿಂದ ಉತ್ಪಾದನೆಯಾಗಿ ಬರುವ ವಸ್ತುಗಳನ್ನೆಲ್ಲ ಬಹಿಷ್ಕರಿಸಬೇಕು, ಅಂದಾಗ ಮಾತ್ರ ಈ ದೇಶಕ್ಕೆ ಬಾರತೀಯರು ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದು ನರಿಬೋಳ್‌ ಹೇಳಿದ್ದಾರೆ.

ಗಾಲ್ವನ್‌ ಪ್ರದೇಶದಲ್ಲಿ ಚೀನಾ ಸೈನಿಕರು ಕುತಂತ್ರ ಬುದ್ಧಿ ತೋರಿಸುವ ಮೂಲಕ ಭಾರತೀಯ 20 ಯೋಧರ ಬಲಿ ಪಡೆದಿದ್ದಾರೆ. ಕರ್ನಲ್‌ ಸಂತೋಷ ಬಾಬು ವೀರ ಮರಣ ಅಪ್ಪಿದ್ದಾರೆ. ನಮ್ಮ ಸೈನಿಕರೂ ಚೀನಾ ದೇಶದ 40 ಯೋಧರ ಬಲಿ ಪಡೆದಿದ್ದಾರೆ. ಆದರೂ ಕುತಂತ್ರಿ ಚೀನಾಕ್ಕೆ ನಾವು ಪಾಠ ಕಲಿಸುವ ಸಂದರ್ಭ ಇದೀಗ ಬಂದಿದೆ ಎಂದರು.

ಈ ವೇಳೆ ಲಕ್ಷ್ಮೇಕಾಂತ್‌ ಸ್ವಾಧಿ, ರವಿ ದೇಗಾಂವ, ಶೀಲಾ ಮಂಗಳಮುಖಿ, ಮಹೇಶ್‌ ಗೊಬ್ರ್ಬು, ದಶರತ್‌, ಬಸವರಾಜ ಮೇತ್ರಿ, ಸಂಗು ಕಾಳನೂ ಹಾಗೂ ರಮೇಶ್‌ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು.
 

click me!