Tumakur : ವೀರಶೈವ ಲಿಂಗಾಯತ ಧರ್ಮದ ಅರಿವು ಮೂಡಿಸಬೇಕಿದೆ

By Kannadaprabha News  |  First Published Oct 25, 2022, 4:29 AM IST

  ಜಗತ್ತಿನ ಎಲ್ಲಾ ಧರ್ಮಗಳಿಗಿಂತ ವೀರಶೈವ ಲಿಂಗಾಯತ ಧರ್ಮ ಬಹಳ ಶ್ರೇಷ್ಠವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್‌ ತಿಳಿಸಿದರು.


  ಗುಬ್ಬಿ (ಅ.25):  ಜಗತ್ತಿನ ಎಲ್ಲಾ ಧರ್ಮಗಳಿಗಿಂತ ವೀರಶೈವ ಲಿಂಗಾಯತ ಧರ್ಮ ಬಹಳ ಶ್ರೇಷ್ಠವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್‌ ತಿಳಿಸಿದರು.

ಪಟ್ಟಣದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ಸಂಘಟನೆಯ ಮೂಲಕವೇ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಬೇಕಾದದ್ದು ಇಂತಹ ಕಾರ್ಯಾಗಾರ ಹಾಗೂ ಸಮಾವೇಶಗಳಲ್ಲಿ ತಾವೆಲ್ಲರೂ ಭಾಗವಹಿಸಿ ವಿಚಾರವನ್ನು ತಿಳಿದುಕೊಳ್ಳಬೇಕಾಗಿದೆ. ವೀರಶೈವ ಲಿಂಗಾಯತ ಧರ್ಮದ (Religion )  ತತ್ವ ಸಿದ್ಧಾಂತಗಳ ಬಗ್ಗೆ ಯುವಕರಲ್ಲಿ ಹಾಗೂಯರಲ್ಲಿ (woman)  ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನವೆಂಬರ್‌ 12 ಮತ್ತು 13ರಂದು ಸಿದ್ಧಗಂಗಾ ಮಠದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

Tap to resize

Latest Videos

ಸಮಾವೇಶ ಸಮಿತಿ ಅಧ್ಯಕ್ಷ ಎಸ್‌.ಕೆ.ರಾಜಶೇಖರ್‌ ಮಾತನಾಡಿ, 103 ಉಪಜಾತಿಗಳನ್ನು ಒಳಗೊಂಡಿರುವ ವೀರಶೈವ ಲಿಂಗಾಯತ ಧರ್ಮದ ಉಳಿವಿಗಾಗಿ ಎಲ್ಲರೂ ಪಕ್ಷಾತೀತವಾಗಿ ಸಂಘಟಿತರಾಗಬೇಕಿದೆ. ಸಮುದಾಯದ ಬಗ್ಗೆ ಕಾಳಜಿ ಇಟ್ಟುಕೊಂಡು ಚಿಂತಿಸುವವರನ್ನು ರಾಜಕೀಯ ಕ್ಷೇತ್ರದಲ್ಲಿ ಬೆಳೆಸಬೇಕಿದೆ. ವೀರಶೈವ ಲಿಂಗಾಯತ ಮಠಗಳು ತ್ರಿವಿಧ ದಾಸೋಹ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಬಸವೇಶ್ವರ ತತ್ವ,ಸಿದ್ಧಾಂತಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತುಮಕೂರು ಘಟಕದ ಅಧ್ಯಕ್ಷ ಮೋಹನ್‌ಕುಮಾರ್‌ ಪಟೇಲ್‌ ಮಾತನಾಡಿ, ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 15 ರಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇದು ಸಮುದಾಯದ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ವೀರಶೈವರಲ್ಲಿ ಒಗ್ಗಟ್ಟು ಇಲ್ಲ ಎಂಬ ಅಪವಾದವನ್ನು ಈ ಸಂಘಟನೆಯ ಮೂಲಕ ಅಳಿಸಬೇಕಿದೆ. ಎಲ್ಲರೂ ಸಹಕಾರ ನೀಡಿದಲ್ಲಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಭೆಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್‌ ಜಿ. ಅಬ್ಬಿಗೆರೆ, ತುಮಕೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಆರಾಧ್ಯ, ತಾಲೂಕು ಘಟಕದ ಅಧ್ಯಕ್ಷ ರಮೇಶ್‌, ಯುವ ಘಟಕದ ಅಧ್ಯಕ್ಷ ಯತೀಶ್‌, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ, ಜಿಲ್ಲಾ ಘಟಕದ ನಿರ್ದೇಶಕರಾದ ಆರ್‌.ಬಿ.ಜಯಣ್ಣ, ಪಾಲನೇತ್ರಯ್ಯ, ತಾಲೂಕು ಘಟಕದ ನಿರ್ದೇಶಕರಾದ ಶಿವಕುಮಾರ್‌, ಪತ್ರೆ ದಿನೇಶ್‌, ಉಮೇಶ್‌, ಪಟ್ಟಣ ಪಂಚಾಯತಿ ಸದಸ್ಯ ಶಿವಕುಮಾರ್‌, ತಾಲೂಕು ಘಟಕದ ನಿರ್ದೇಶಕರು, ಪದಾಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಸಮುದಾಯದ ಮಹಿಳೆಯರು ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಮುಂಚೂಣಿಗೆ ಬರಬೇಕಿದೆ. ಮಹಿಳಾ ಸಂಘಟನೆಗಳು ಬಲಗೊಂಡರೆ ಸಮುದಾಯದ ನೆಲೆ ಗಟ್ಟಿಗೊಳ್ಳುತ್ತದೆ. ಶಿಕ್ಷಣ ಪಡೆದು ಸಂಘಟಿತರಾದರೆ ಹೋರಾಟಕ್ಕೆ ಬಲ ಬರುತ್ತದೆ. ಇಂತಹ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು ಸಂಘಟನಾಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮುಕ್ತಾಂಬ ಪ್ರಧಾನ ಕಾರ್ಯದರ್ಶಿ, ರಾಜ್ಯ ಮಹಿಳಾ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ.

ಬಿಜೆಪಿ ಲಿಂಗಾಯತರನ್ನು ಒಡೆದು ಆಳುವ ಪಕ್ಷ

ವಿಜಯಪುರ :  ಬಿಜೆಪಿ ಲಿಂಗಾಯತ ನಾಯಕರನ್ನು ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಮೈಗೂಡಿಸಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್‌ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ಟೀಕಿಸಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಲಿಂಗಾಯತರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬೆಲ್ಲದ ಅವರಂಥ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡಿದ್ದಾರೆ ಎಂದು ದೂರಿದರು.

ಬಿಜೆಪಿ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇ.40ರಷ್ಟುಕಮಿಷನ್‌ ಭ್ರಷ್ಟಾಚಾರ ಎಲ್ಲ ಇಲಾಖೆಗಳಲ್ಲೂ ಇರುವುದು ಜಗಜ್ಜಾಹೀರವಾಗಿದೆ. ಇದನ್ನು ಪ್ರಶ್ನಿಸಿದರೆ ಬಿಜೆಪಿ ಸಚಿವರು ಕಾಂಗ್ರೆಸ್‌ ಪಕ್ಷದವರು ಲಿಂಗಾಯತ ಮುಖ್ಯಮಂತ್ರಿಯನ್ನು ಟಾರ್ಗೆಟ್‌ ಮಾಡಿದ್ದಾರೆ ಎನ್ನುತ್ತಿದ್ದಾರೆ. ಭ್ರಷ್ಟಾಚಾರವನ್ನು ಯಾರು ಮಾಡಿದರೂ ಅದು ತಪ್ಪೇ. ಬಿಜೆಪಿ ಎಂದರೆ ಬಡವರ ವಿರೋಧಿ, ಭ್ರಷ್ಟಾಚಾರಿ ಪಕ್ಷವಾಗಿದೆ. ಲಿಂಗಾಯತರು ಎಂದಿಗೂ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದರು.

ಈ ಹಿಂದೆ ಮೋದಿ ಅವರು ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯ ಸರ್ಕಾರವನ್ನು ಶೇ.10ರಷ್ಟುಕಮಿಷನ್‌ ಪಡೆಯುವ ಸರ್ಕಾರ ಎಂದು ಕರೆದಿದ್ದರು. ಆಗ ಕಾಂಗ್ರೆಸ್‌ ಸಾತ್ವಿಕ ಟೀಕೆ ಮಾಡಿತ್ತೇ ಹೊರತು, ಮೋದಿ ಹಾಲುಮತ ಸಮಾಜದ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ಹೇಳಿರಲಿಲ್ಲ ಎಂದರು.

ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಈ ರೀತಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಲಿಂಗಾಯತ ಸಮಾಜದ ನಾಯಕರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಇದೇ ಬಿಜೆಪಿ. ಇದನ್ನು ಲಿಂಗಾಯತ ಸಮುದಾಯ ನೆನಪಿಡಬೇಕು ಎಂದು ತಿಳಿಸಿದರು.

ಬಡ ಲಿಂಗಾಯತರಿಗೆ ಅನುಕೂಲ ಕಲ್ಪಿಸಲು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸುವ ಪ್ರಯತ್ನ ಈ ಹಿಂದೆ ನಡೆಯಿತು. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಲಿಂಗಾಯತರಲ್ಲಿ ಈ ಕುರಿತು ಗೊಂದಲ ಮೂಡಿಸಿ ಇದು ಸಾಧ್ಯವಾಗದಂತೆ ಮಾಡಿತು. ಇದು ಬಿಜೆಪಿಯವರು ಲಿಂಗಾಯತರಿಗೆ ಮಾಡಿದ ಮಹಾ ಮೋಸ ಎಂದರು.

click me!