ಲೋಕ ಕಲ್ಯಾಣಕ್ಕಾಗಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್ ನಲ್ಲಿ 2551 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಸಿದ್ಧಾಶ್ರಮದ 9ನೇ ವರ್ಷದ ಶ್ರೀ ಗಣೇಶ ಗಾಯಿತ್ರಿ ದೇವಿಯ ರಥೋತ್ಸವ ಸಮಾರೋಪ ಸಮಾರಂಭಕ್ಕ ರಂಭಾಪುರಿ ಶ್ರೀಗಳಾದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಡಿ.14): ಲೋಕ ಕಲ್ಯಾಣಕ್ಕಾಗಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್ ನಲ್ಲಿ 2551 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಸಿದ್ಧಾಶ್ರಮದ 9ನೇ ವರ್ಷದ ಶ್ರೀ ಗಣೇಶ ಗಾಯಿತ್ರಿ ದೇವಿಯ ರಥೋತ್ಸವ ಸಮಾರೋಪ ಸಮಾರಂಭಕ್ಕ ರಂಭಾಪುರಿ ಶ್ರೀಗಳಾದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು. ಇನ್ನೂ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವೆಂದರೆ 48ಕ್ಕೂ ಮುಸ್ಲಿಂ ಮಹಿಳೆಯರು ಸಹ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಸಂಪ್ರದಾಯದಂತೆ ಉಡಿತುಂಬಿಸಿಕೊಂಡು ತನ್ನ ಪತಿ ಮತ್ತು ಕುಟುಂಬದ ಆರೋಗ್ಯ ಕ್ಷೇಮವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇನ್ನೂ ಸಮಾರಂಭ ಉದ್ದೇಶಿಸಿ ಮಾತನಾಡಿದ ರಂಭಾಪುರಿ ಶ್ರೀಗಳು ಉಡಿತುಂಬ ಸಮಾರಂಭದಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದು ಹೆಮ್ಮೆಯ ವಿಷಯವಾಗಿದೆ. ಜಗದ್ಗುರುಗಳ ಎಡಭಾಗದಲ್ಲಿ ಇರುವ ಧ್ವಜ ಹಸಿರು ಧ್ವಜವಾಗಿದ್ದು, ಈ ಸಮಾರಂಭದಲ್ಲಿ ಭಕ್ತರು ಜಾತಿ, ಮತ ಮತ್ತು ಮಂಥಗಳು ಅಲ್ಲದೆ ಭಾಗವಹಿಸಿದ್ದು ನಮ್ಮ ಸಂತೋಷವಾಗಿದೆ. ಪ್ಲಾಸ್ಟಿಕ್ ಟಿಕಲಿ ಹೆಣ್ಣು ಮಕ್ಕಳಿಗೆ ಶಿಷೇಧ, ಹೆಣ್ಣು ಮಕ್ಕಳು ಶುದ್ಧವಾದ ಕುಂಕುಮ ಹಂಚಬೇಕು ಎಂಬುವುದು ನಮ್ಮ ಅಭಿಲಾಷೆವಾಗಿದೆ. ಕುಂಕುಮದಲ್ಲಿ ಅದ್ಭುತ ಶಕ್ತಿಯಿದೆ. ಕಾಮುಕ ಮನುಷ್ಯನಿಗೆ ಕುಂಕುಮ ಎಚ್ಚರಿಕೆ ನೀಡುತ್ತೆ, ಮುಖವನ್ನು ನೋಡದೇ ಪಾದವನ್ನು ನೋಡುವಂತೆ ಕುಂಕುಮ ಎಚ್ಚರಿಕೆ ನೀಡುತ್ತೆ ಎಂದು ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಝಿಕಾ ವೈರಸ್ ಪತ್ತೆ ಬೆನ್ನಲ್ಲೇ ಮಕ್ಕಳ ಆಸ್ಪತ್ರೆಗಳು ಫುಲ್: ಕಠಿಣ ನಿಗಾಕ್ಕೆ ಡಿಸಿ ತಾಕೀತು
ಇನ್ನೂ ಸರ್ವ ಧರ್ಮದವರನ್ನು ಸಮಾನತೆಯಿಂದ ಕಾಣುವ ಗುಣ ಹಾಗೂ ಪ್ರಾಚೀನ ಕಾಲದಿಂದಲೂ ವೀರಶೈವ ಧರ್ಮಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಧರ್ಮವನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರದ್ದು ಆಗಬೇಕು. ವೀರಶೈವ ಧರ್ಮಕ್ಕೆ ತನ್ನದೇ ಆದ ಸಂಸ್ಕೃತಿ ಇದೆ, ಹಾಗೂ ಇತರ ಸಮುದಾಯದವರನ್ನು ಅನ್ನೋನ್ಯತೆಯಿಂದ ಕಾಣುವ ಗುಣ ಇದೆ, ಇಂಥ ಧರ್ಮದಲ್ಲಿ ಹುಟ್ಟಿದವರು ಪ್ರತಿಯೊಬ್ಬರು ಅದೃಷ್ಟವಂತರು ಧರ್ಮ ಬೆಳವಣಿಗೆಗೆ ಪ್ರತಿಯೊಬ್ಬರ ಶ್ರಮ ಅಗತ್ಯ ಎಂದು ಬಾಳೆಹೊನ್ನೂರು ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಭಕ್ತರಿಗೆ ಸಂದೇಶ ನೀಡಿದರು.
48 ಮುಸ್ಲಿಂ ಮಹಿಳೆಯರಿಗೆ ಉಡಿ ತುಂಬಿದ್ದು ಮಠದ ಕೆಲಸ ಶ್ಲಾಘನೀಯ: ಮೊದಲ ಬಾರಿಗೆ ಸಿದ್ಧಾಶ್ರಮದಿಂದ 2,551 ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಈ ವೇಳೆ ಮುಸ್ಲಿಂ ಮಹಿಳೆಯರಿಗೂ ಸಹ ಉಡಿ ತುಂಬುವ ಕೆಲಸ ಮಾಡಿರೋದು ಸಿದ್ಧಾಶ್ರಮ ಮಠದ ಒಂದು ಶ್ಲಾಘನೀಯ ಕೆಲಸ ಆಗಿದೆ. ಇಂಥ ಪರಂಪರೆ ಮಠಗಳು ಬೆಳೆಯಬೇಕಾಗಿದೆ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಮಠದ ಭಾವೈಕ್ಯ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮ ನಾವು ಮಾಡಿಕೊಂಡರೇ ಮಾತ್ರ ಬೇರೆ ಆಗುತ್ತೆ: ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್‌ನಲ್ಲಿ ನಡೆದ ಸಮಾರಂಭದಲ್ಲಿ 2551 ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಈ ವೇಳೆ 48 ಮುಸ್ಲಿಂ ಮಹಿಳೆಯರು ಸಹ ಹಿಂದೂ ಮಹಿಳೆಯರಂತೆ ಉಡಿ ತುಂಬಿಸಿಕೊಂಡಿದ್ದು ವಿಶೇಷವಾಗಿತ್ತು. ಉಡಿ ತುಂಬಿಸಿಕೊಂಡು ಮಾತನಾಡಿದ ಬಂಗಾರಿ ಕ್ಯಾಂಪ್ ನ ಮಹಿಳೆ ಮೈನಾಬಿ.. ನಾವು ಎಲ್ಲರೂ ಒಂದೇ. ಇಂದು ನಡೆದ ಸಮಾರಂಭದಲ್ಲಿ ನಾವು ಖುಷಿಯಿಂದ ಭಾಗವಹಿಸಿದ್ದೇವೆ. ನಮ್ಮ ಕುಟುಂಬ ಚೆನ್ನಾಗಿ ಇರಲು ನಾವು ನಿತ್ಯವೂ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ.
ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಸರ್ಕಾರ ಬದ್ಧ: ಸಚಿವ ಶ್ರೀರಾಮುಲು
ಪುರಾಣವೂ 10 ದಿನಗಳ ಕಾಲ ಕೇಳಿದ್ದೇವೆ. ಎಲ್ಲಾ ಧರ್ಮಗಳ ಸಂದೇಶವೂ ಒಂದೇ ಆಗಿದೆ. ದೇಶದಲ್ಲಿ ಯಾರೋ ಬುದ್ದಿ ಇಲ್ಲದವರು ಭೇದಭಾವ ಮಾಡುತ್ತಾರೆ. ನಾವು ಧರ್ಮ ಮಾಡಿಕೊಂಡರೇ ಬೇರೆ ಆಗುತ್ತೆ, ಆದ್ರೆ ನಾವು ಗ್ರಾಮದಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು. ಇನ್ನೂ ಈ ಸಮಾರಂಭದಲ್ಲಿ ಹತ್ತಾರು ಮಠದ ಸ್ವಾಮೀಜಿಗಳು, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಗುಂಡಯ್ಯಪ್ಪ ತಾತ, ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಸವರಾಜ ಹಿರೇಗೌಡ ಬಸನಗೌಡ ಬಾದರ್ಲಿ, ಬಾಬುಗೌಡ ಬಾದರ್ಲಿ,ಎನ್.ಶಿವನಗೌಡ ಗೊರಬಾಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.