ವೀರ ಸಾವರ್ಕರ್‌ ಹೆಸರಿನೊಂದಿಗೆ ಯಲಹಂಕ ಮೇಲ್ಸೇತುವೆ ಉದ್ಘಾಟನೆ

By Suvarna News  |  First Published Sep 8, 2020, 1:17 PM IST

ಬೆಂಗಳೂರಿನ ಯಲಹಂಕದಲ್ಲಿ ನಿರ್ಮಾಣವಾದ ವೀರ ಸಾವರ್ಕರ್ ಹೆಸರಿನ ಮೆಲ್ಸೇತುವೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ.


ಯಲಹಂಕ (ಸೆ.08) : ಇಲ್ಲಿನ ಮದರ್‌ ಡೈರಿ ಮುಂಭಾಗದಲ್ಲಿ ಬಿಬಿಎಂಪಿ ನಿರ್ಮಿಸಿರುವ ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು ಇಡಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ.

ವೀರ ಸಾವರ್ಕರ್‌ ಹೆಸರು ಇಡುವುದಕ್ಕೆ ಪರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಉದ್ಘಾಟನಾ ಕಾರ‍್ಯ ಹಲವು ಬಾರಿ ಮುಂದೂಡಲ್ಪಟ್ಟಿತ್ತು.

Tap to resize

Latest Videos

ನೆಹರೂ, ಇಂದಿರಾಗೆ OK ಎಂದ ಕಾಂಗ್ರೆಸ್, ಸಾವರ್ಕರ್‌ ಹೆಸರಿಗೆ ವಿರೋಧ; ಇಲ್ಲಿದೆ ಕಾರಣ! .

ಮೊದಲು ಮೇ 28ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಗೆಜೆಟ್‌ ನೋಟಿಫಿಕೇಷನ್‌ ಮಾಡದ್ದಕ್ಕೆ ಪ್ರತಿಪಕ್ಷಗಳು, ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಸರ್ಕಾರ ಕಾರ್ಯಕ್ರಮ ರದ್ದುಮಾಡಿತು. ನಿಯಮದಂತೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೆ.1ರಂದು ಉದ್ಘಾಟನೆಗೆ ದಿನಾಂಕ ನಿಗದಿಯಾಗಿತ್ತಾದರೂ ಅಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಿಧನ ಹೊಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಮಂಗಳವಾರ 12ಕ್ಕೆ ಅಧಿಕೃತವಾಗಿ ಸರ್ಕಾರ ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ.

ಫ್ಲೈಓವರ್‌ಗೆ ‘ಸಾವರ್ಕರ್‌’ ಹೆಸರೇ ಅಂತಿಮ! ..

ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಸಚಿವ ಸಿ ಟಿ ರವಿ, ಡಿಸಿಎಂ ಅಶ್ವಥ ನಾರಾಯಣ ಭಾಗಿಯಾಗಿದ್ದಾರೆ.

8 ಮೀಟರ್‌ ಉದ್ದದ 4 ಪಥದ ಮೇಲ್ಸೇತವೆಯನ್ನು 34 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಯಶವಂತಪುರ, ಜಾಲಹಳ್ಳಿ, ವಿದ್ಯಾರಣ್ಯಪುರ ಕಡೆಯಿಂದ ದೊಡ್ಡಬಳ್ಳಾಪುರ ಹಾಗೂ ಏರ್‌ಪೋರ್ಟ್‌ ಕಡೆಯ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಡೇರಿ ಸರ್ಕಲ್‌ನಲ್ಲಿ ಸಿಗ್ನಲ್‌ ಪ್ರೀ ಆಗಲಿದೆ.

click me!