ಹೋರಾಟಗಾರರ ವೈಯಕ್ತಿಕ ಹಿತಾಸಕ್ತಿ, ಧರ್ಮಸ್ಥಳ ದ್ವೇಷವೇ ಎಲ್ಲದಕ್ಕೂ ಕಾರಣ ಎಂದ ವಸಂತ್ ಗಿಳಿಯಾರ್!

Published : Aug 18, 2025, 06:44 PM IST
vasanth giliyar

ಸಾರಾಂಶ

ಸೌಜನ್ಯ ಪ್ರಕರಣದ ಹಿಂದಿನ ಷಡ್ಯಂತ್ರದ ಬಗ್ಗೆ ವಸಂತ್ ಗಿಳಿಯಾರ್ ಮಾಹಿತಿ ಬಹಿರಂಗಪಡಿಸಿದ್ದಾರೆ. 1974 ರಿಂದ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಇತಿಹಾಸ, ತಿಮರೋಡಿಯ ವೈಯಕ್ತಿಕ ದ್ವೇಷ, ಮತ್ತು ಪ್ರಕರಣದ ದಿಕ್ಕು ತಪ್ಪಿಸಿದ ರೀತಿಯನ್ನು ವಿವರಿಸಿದ್ದಾರೆ.

ಬೆಂಗಳೂರು (ಆ.18): ಸೌಜನ್ಯ ಹೋರಾಟದ ದಿಕ್ಕು ತಪ್ಪಿದ್ದರ ಕುರಿತು ನಡೆದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ವಸಂತ್ ಗಿಳಿಯಾರ್, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಹಿಂದಿನ ಇತಿಹಾಸವನ್ನು ವಿವರಿಸಿದರು. ಅವರ ಪ್ರಕಾರ, 1974ರ ನಂತರ ಧರ್ಮಸ್ಥಳದ ಮೇಲೆ ಕಮ್ಯೂನಿಸ್ಟ್‌ ಮತ್ತು ಹೊರಗಿನ ಶಕ್ತಿಗಳ ಪ್ರಭಾವದಿಂದ ಈ ವೈರತ್ವ ಶುರುವಾಯಿತು ಎಂದಿದ್ದಾರೆ.

1974ರ ಹಿಂದೆ ಧರ್ಮಸ್ಥಳ ಗ್ರಾಮದ ಧಣಿಗಳು ನೆಲ್ಯಾಡಿ ಬೀಡು ಆಗಿದ್ದರು. 15 ವರ್ಷಗಳ ತನಕ ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಮಾಡುವರು ಯಾರು ಇರಲಿಲ್ಲ. 400 ಒಕ್ಕಲು ಕುಟುಂಬಗಳಿದ್ದವು. 3 ಸಾವಿರದ 800 ಎಕರೆಯನ್ನು ಧರ್ಮಸ್ಥಳದಿಂದ ಅರ್ಜಿ ಹಾಕ್ತಾರೆ ಅವ್ರಿಗೆ ಬಿಟ್ಟು ಕೊಡ್ತಾರೆ ( ಒಕ್ಕಲು ಕುಟುಂಬಗಳಿಗೆ). ಒಂದು ತಲೆಮಾರು ಹೋದಾಗ ಜಾಗ ಮಾರಾಟದ ವಿಚಾರ ಮುನ್ನೆಲೆಗೆ ಬಂತು. ಆ ಸಮಯದಲ್ಲಿ ಲ್ಯಾಂಡ್ ಮಾಫಿಯಾ ಶುರುವಾಯ್ತು ಎಂದು ಹೇಳಿದ್ದಾರೆ.

ಹೊರಗಿನಿಂದ ಬಂದು ಮಸಿದಿ, ಚರ್ಚ್ ಕಟ್ಟಿಸಲು ಜಾಗ ಪಡೆಯಲು ಬಂದರು. ಕೆಲವರು ಜೊಪಡಿಗಳನ್ನ ಹಾಕಿಕೊಂಡು ಅಲ್ಲೇ ವಾಸ ಮಾಡಿದರು. ಕಮ್ಯೂನಿಸ್ಟ್‌ ಗಳೇ ಸ್ಥಳೀಯ ಜನ್ರನ್ನು ಮುಂದೆಬಿಟ್ಟರು. 1974ರ ಬಳಿಕ ಧರ್ಮಸ್ಥಳವನ್ನು ಸಿಲುಕಿಸುವ ಕೆಲಸ ಆಯ್ತು. ಬೆಳ್ತಂಗಡಿ ತಾಲೂಕನ್ನು ಮಾದರಿ ತಾಲೂಕು ಮಾಡಲು, 1982 ರಿಂದ ಗ್ರಾಮಾಭಿವೃದ್ಧಿ ಯೋಜನೆಯ ಪರಿಕಲ್ಪನೆ ವೀರೇಂದ್ರ ಹೆಗ್ಗಡೆ ತಂದರು. ಅಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಸೋಮನಾಥ ನಾಯಕ್ ಎಂಬುವವರು ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದರು. ನಂತರ ಸೋಮನಾಥ ನಾಯ್ಕ್ NGO ಶುರು ಮಾಡಿದರು. ಹೊರ ರಾಷ್ಟ್ರಗಳಿಂದ ಫಂಡ್ ತರಿಸಿಕೊಳ್ಳುತ್ತಾರೆ. ಈ ವಿಚಾರ ವಿರೇಂದ್ರ ಹೆಗ್ಗಡೆ ಅವ್ರಿಗೆ ಗೊತ್ತಾಗುತ್ತೆ. ಕೇಸ್ ಆಗುತ್ತೆ. ಕೋರ್ಟ್ , ತೀರ್ಪು ದೊಡ್ಡ ಮಟ್ಟಕ್ಕೆ ಹೋಗುತ್ತೆ.ಇಲ್ಲಿಂದಲೇ ಧರ್ಮಸ್ಥಳಕ್ಕೆ ಶತ್ರುಗಳು ಹುಟ್ಟಿಕೊಳ್ತಾರೆ ಎಂದು ಹೇಳಿದರು.

ತಿಮರೋಡಿಯ ವೈಯಕ್ತಿಕ ದ್ವೇಷ: ನಂತರ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಳಕಿಗೆ ಬಂದರು. ಗಿಳಿಯಾರ್‌ ಹೇಳುವ ಪ್ರಕಾರ, ಮಹೇಶ್ ಶೆಟ್ಟಿ ತಿಮರೋಡಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಶುರು ಮಾಡುತ್ತಾರೆ. ಮೊದಲಿಗೆ ಈಗ ಹಿಂದೂ ಹೋರಾಟಗಾರ ಎಂದು ಬಿಂಬಿಸಿಕೊಂಡು, ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ಮೊದಲಿಗೆ ಧರ್ಮಸ್ಥಳದಲ್ಲಿ ಆಟೋ ಚಾಲಕರ ಮಾಲೀಕರ ಸಂಘಕ್ಕೆ ಅಧ್ಯಕ್ಷನಾದ. ಉಜಿರೆ ಹಾಗೂ ಇತರೆ ಆಟೋ ಚಾಲಕರ ನಡುವೆ ಒಂದು ಗಲಾಟೆ ಆಗುತ್ತೆ. ಆಟೋ ಚಾಲಕರು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ಸರಿಯಾಗಿ ಹೊಡೆಯುತ್ತಾರೆ. ಆಗಿನಿಂದ ಧರ್ಮಸ್ಥಳದ ಮೇಲೆ ದ್ವೇಷ ಆರಂಭವಾಗುತ್ತದೆ.

ನಂತರ ಧರ್ಮಸ್ಥಳದಲ್ಲಿ ಕಾಲೇಜುವೊಂದರ ಬಗ್ಗೆ ಭೂಮಿ ಖರೀದಿಗೆ ಹೆಗ್ಗಡೆ ಅವರು ಮುಂದಾಗ್ತಾರೆ ಅನ್ನೋ ವಿಚಾರ ಇವನಿಗೆ ಗೊತ್ತಾಗುತ್ತದೆ. ಈ ಭೂಮಿಯನ್ನು ಖರೀದಿಸಲು ತಿಮರೋಡಿ ಸಂಬಂಧಿಕರು ಮುಂದೆ ಬರುತ್ತಾರೆ. ಪಡವಟ್ ನಾಯರ್ ಅವ್ರು ಉಜಿರೆಯಲ್ಲಿ ಸಾಕಷ್ಟು ಭೂಮಿ ಹೊಂದಿರುತ್ತಾರೆ. ಉಜಿರೆಯಲ್ಲಿ ಕಮರ್ಶಿಯಲ್ ಕಟ್ಟಡಗಳನ್ನ ಬಡವರಿಗೆ ಕಡಿಮೆ ದರದಲ್ಲಿ ಕೊಡುತ್ತಿರುತ್ತಾರೆ. ಮಹೇಶ್ ಶೆಟ್ಟಿ ಆ ಜಾಗಕ್ಕೆ ಬಂದು ಗಲಾಟೆ ಮಾಡ್ತಾರೆ. ಇದರಲ್ಲಿ ನನಗೆ ಒಂದಿಷ್ಟು ಜಾಗ ಕೊಡಬೇಕು ಅಂತಾ ಹೇಳ್ತಾರೆ. ಅದು ಕೂಡ ಸಿಗಲಿಲ್ಲ. ಆಗ ಈ ಜಾಗವನ್ನ ತಪ್ಪಿಸಿದ್ದು ಧರ್ಮಸ್ಥಳ ದವರೇ ಅಂದುಕೊಂಡಿದ್ದ.ಅಲ್ಲಿಂದ ಈತನ ದ್ವೇಷ ಮತ್ತಷ್ಟು ಹೆಚ್ಚಾಯಿತು.

ಸೌಜನ್ಯ ಪ್ರಕರಣವನ್ನು ದಿಕ್ಕು ತಪ್ಪಿಸಿದ್ದು ಹೇಗೆ?

2013ರಲ್ಲಿ ಸೌಜನ್ಯ ರೇಪ್ & ಮರ್ಡರ್ ಆಯ್ತು. ಆಗ ಇದನ್ನ ಬಳಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾನೆ. ಬಾಹುಬಲಿ ಬೆಟ್ಟದಲ್ಲಿ ಅನುಮಾನಸ್ಪಾದವಾಗಿ ಒಬ್ಬ ವ್ಯಕ್ತಿ ಓಡಾಡ್ತಾನೆ. ಆಗ ಅತ್ಯಾಚಾರ ಮಾಡಿರೋದು ಗೊತ್ತಾಗುತ್ತೆ. ಆಗ ಕೆಲವು ಗಲಾಟೆಗಳು ಆಗುತ್ತವೆ. ಮತ್ತೆ ಸೋಮಾನಾಥ ನಾಯಕ್, ತಿಮರೋಡಿ ಸೇರಿ ಧರ್ಮಸ್ಥಳದ ಮೇಲೆ ಜನರನ್ನು ಎತ್ತಿಕಟ್ಟಲು ಶುರು ಮಾಡುತ್ತಾರೆ.

ಸೌಜನ್ಯ ಮನೆಗೆ ತಿಮರೋಡಿ ಹೋಗುತ್ತಾರೆ. ಈ ಘಟನೆ ಆದ ಬಳಿಕ ಆಗಿನ ಸರ್ಕಾರದ ಗೃಹ ಸಚಿವ ಆರ್ ಅಶೋಕ್ ಗೆ ಹೆಗ್ಗಡೆ ಅವರು ಪತ್ರ ಬರೆದು, ತನಿಖೆ ಆಗಬೇಕು. ಆರೋಪಿಗಳು ಯಾರು ಅನ್ನೋದು ಗೊತ್ತಾಗಬೇಕೆಂದು ಹೇಳುತ್ತಾರೆ.

ಗೋಪಾಲ ಪೂಜಾರಿ ಎಂಬ ವ್ಯಕ್ತಿ ಸಾಕ್ಷಿದಾರನಿದ್ದ. ರೆಸಾರ್ಟ್ ನಲ್ಲಿ ಅತ್ಯಾಚಾರ ಮಾಡಿ ಬಿಸಾಡಿದ್ದಾರೆಂದು ಸೌಜನ್ಯ ಕುಟುಂಬಕ್ಕೆ ಬ್ರೈನ್ ವಾಶ್ ಮಾಡುತ್ತಾರೆ. ಸೌಜನ್ಯರ ತಂದೆ, ಮಾವ ವಿಠಲಗೌಡ, ಇನ್ನೊಬ್ಬ ಮಾವ ಪುರಂದರ ಇವರ ಮಾತು ಕೇಳಿ ಸಂತೋಷ್ ರಾವ್ ನಿರಪರಾಧಿ ಅಂತ ಹೇಳುತ್ತಾರೆ ವಿಠಲಗೌಡರು SDPI, ಕಮ್ಯೂನಿಸ್ಟ್ ಅವರೇ ನಮಗೆ ಗಟ್ಟಿಯಾಗಿ ನಿಂತುಕೊಂಡು ಎಂದು ಹೇಳುತ್ತಾರೆ.

ಸಂತೋಷ್‌ ರಾವ್‌ಗೆ ಜೀವನ ನೀಡಿದ್ದೇ ಪಬ್ಲಿಕ್‌ ಪ್ರಾಸಿಕ್ಯೂಟರ್‌

ಈ ಕೇಸ್ ನ ಪಬ್ಲಿಕ್ ಪ್ರಾಸಿಕ್ಯೂಟರ್ ನ ಖರೀದಿ ಮಾಡಿ ಹೋರಾಟದ ದಿಕ್ಕು ತಪ್ಪಿಸಿದ್ದಾರೆ. ಸಂತೋಷ್ ರಾವ್ ನ ಬದುಕಿಸಿದ್ದೇ ಈ ಪಬ್ಲಿಕ್ ಪ್ರಾಸಿಕ್ಯೂಟರ್. 16 ಘಂಟೆಗಳ ಬಳಿಕ ಮೃತದೇಹ ಸಿಕ್ಕಿತ್ತು/ ಮಹಿಳಾ ವೈದ್ಯಾಧಿಕಾರಿ ಇಲ್ಲದಿದ್ದಾಗ, ಬೇರೆ ಆಸ್ಪತ್ರೆಯ ವೈದ್ಯರಿಂದ ಮರಣೋತ್ತರ ಪರೀಕ್ಷೆ ಆಯ್ತು. ತಜ್ಞ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದರೆ ಇಲ್ಲಿ ತನಕ ಈ ಪ್ರಕರಣ ಬರುತ್ತಿರಲಿಲ್ಲ. ಆಡಮ್‌ ಅನ್ನೋ ವೈದ್ಯ ಸರಿಯಾದ ಮರಣೋತ್ತರ ಪರೀಕ್ಷೆ ಮಾಡುತ್ತಾರೆ. ಬಾಡಿ ಎಕ್ಸಾಮಿನೇಷನ್ ಕೂಡ ಈ ವೈದ್ಯ ಮಾಡೋದಿಲ್ಲ. 32 ಗಂಟೆಗಳ ಅವಧಿಯಲ್ಲಿಸಂತೋಷ್ ರಾವ್ ದೇಹದ ಮೇಲಿನ ಗಾಯಗಾಳನ್ನ ಗುರುತಿಸುತ್ತಾರೆ.

ಸಂತೋಷ್ ರಾವ್ ಗೆ ಫಿಮ್ಯೋಸಿಸ್ ಇತ್ತು ಅಂತ ಹೇಳಿದ್ದರು. 17 ವರ್ಷದ ಹುಡ್ಗಿಯ ಮೇಲೆ ಈ ಸಂತೋಷ್ ರಾವ್ ಅತ್ಯಾಚಾರಕ್ಕೆ ಮುಂದಾಗುತ್ತಾರೆ. ಪ್ರಣಮ್ಯ ಸ್ಟೂಡಿಯೋದವರು ಘಟನೆಯ ಮಹಜರು ವೀಡಿಯೋವನ್ನ ಮಾಡಿದ್ದಾರೆ. ಈ ವೇಳೆ ಸಂತೋಷ್ ರಾವ್ ಜಾಗವನ್ನ ತೋರಿಸುತ್ತಾನೆ. ಡಾ. ರೂಪಾಲಿ ಕೇಂದ್ರದಿಂದ ಬಂದು ಕೌನ್ಸಿಲ್ ಮಾಡುತ್ತಾರೆ. ರೀ ಕ್ರಾಸ್ ಎಕ್ಸಾಮಿನೇಷನ್ ಮಾಡಿದ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್ ಇರಲಿಲ್ಲ. ಡಾ. ಮಹಾಬಲೇಶ್ವರ ಶೆಟ್ಟಿ ಬಳಿ ಸಾಕ್ಷಿಗಳನ್ನ ಇಟ್ಟುಕೊಂಡಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಹೋರಾಟದ ದಿಕ್ಕು ತಪ್ಪಿಸಿದರು. ನಿಶ್ಚಲ್ ಜೈನ್, ಧೀರಜ್‌ ಜೈನ್ ಈ ಪ್ರಕರಣದಲ್ಲಿ ಇದ್ದಾರೆಂದು ಬಿಂಬಿಸಿದರು/ ಇಡೀ ಪ್ರಕರಣದಲ್ಲಿ ಸುಳ್ಳುಗಳ ಮೇಲೆ ಸುಳ್ಳಿನ‌ ಕಥೆ ಕಟ್ಟಿದರು. ಒಡನಾಡಿ ಸ್ಟ್ಯಾನ್ಲಿ ಅವರು ಕೂಡ ಈ ವಿಚಾರಕ್ಕೆ ಎಂಟ್ರಿಯಾಗುತ್ತಾರೆ. ಮೈಕ್ರೋ ಫೈನಾನ್ಸ್ ವಿಚಾರ ಅನ್ನೋ ವಿಚಾರ ಮುಂದೆ ತರುತ್ತಾರೆ.

ಸೌಜನ್ಯ ಪ್ರಕರಣವನ್ನ ದಿಕ್ಕು ತಪ್ಪಿಸಿ ಧಾರ್ಮಿಕ ಭಾವನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಅನಾಮಿಕನನ್ನ ಕರೆದುಕೊಂಡು ಬಂದಿದ್ದಾರೆ ಅವರ ಮೇಲೆ ಕೇಸ್ ಆಗುತ್ತೆ. ಅವರು ಒಳಗೆ ಹೋಗ್ತಾರೆ. ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಕ್ಷೇತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದ್ದಾರೆ.

 

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ