ಭಾರತ, ಪಾಕಿಸ್ತಾನ ಪಂದ್ಯ ನೋಡೋರಿಗೆ ನಿರಾಸೆ: ಇಂದು ಕರೆಂಟ್‌ ಇರಲ್ಲ..!

By Girish Goudar  |  First Published Oct 14, 2023, 8:57 AM IST

ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿವೆ. ಹೀಗಾಗಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 


ಬೆಂಗಳೂರು(ಅ.14):  ಬೆಂಗಳೂರಿನ ಹಲವೆಡೆ ಇಂದು(ಶನಿವಾರ) ಕೂಡ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವಿದ್ಯುತ್ ಸರಬರಾಜು ಕಂಪನಿಯ (BESCOM) ಮಾಹಿತಿ ನೀಡಿದೆ. ಹೌದು, ಭಾರತ, ಪಾಕಿಸ್ತಾನ ಪಂದ್ಯ ನೋಡುವವರಿಗೆ ನಿರಾಸೆಯಾಗುವ ಸಾಧ್ಯತೆ ಇದೆ. 

ನಗರದ ಬಹುತೇಕ ಕಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿವೆ. ಹೀಗಾಗಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

Tap to resize

Latest Videos

ಸಿಲಿಕಾನ್ ಸಿಟಿ ಬೆಂಗಳೂರಿನ ಈ ನಗರಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ವಿದ್ಯುತ್ ವ್ಯತ್ಯಯ!

ಎಲ್ಲೆಲ್ಲಿ ವಿದ್ಯುತ್ ಕಡಿತ?

ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಬಾಬು ಜಗಜೀವನ ನಗರ, ದೇವರಾಜ್‌ ಅರಸ್‌ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್‌ ಗಾಂಧಿ ಬಡಾವಣೆ, ಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ, ಜ್ಯೋತಿನಗರ, ಶಂಕರಾನಂದ ಬಡಾವಣೆ, ಸಚಿನ್‌ ಲೇಔಟ್‌, ಗಂಗಮ್ಮ ಲೇಔಟ್‌, ಕಲ್ಲುಕೋಟೆ, ಪದವಿ ಕಾಲೇಜು ಸುತ್ತಮುತ್ತ, ನಾಗಾಜಿ ಗುಡೆನ್ಸಿ, ಪ್ರೆಸಿಡೆನ್ಸಿ, ಡೈರಿ ಸರ್ಕಲ್, ಫುಡ್ ಗೋಡೌನ್, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ದೊಡ್ಡರಸಹಳ್ಳಿ, ದೊಡರಸ ಅಗ್ರಹಾರ,  ತಿ. ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ.

click me!