ವಿವಿಧ ರಾಗ ಸಂಯೋಜನೆ ಮೂಲಕ ಹಾಡಲಾದ ವಂದೇ ಮಾತರಂ ಗೀತೆಯು ಇದೀಗ ಗೋಲ್ಡನ್ ಬುಕ್ ಆಫ್ ರೇಕಾರ್ಡ್ ಗೆ ಸೇರ್ಪಡೆಯಾಗಿದೆ.
ಉಡುಪಿ : ಇಲ್ಲಿನ ಸಂವೇದನ ಟ್ರಸ್ಟ್ ವತಿಯಿಂದ ಮಲ್ಪೆ ಬೀಚಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ವಿವಿಧ ರಾಗಗಳಲ್ಲಿ ಪ್ರಸ್ತುತಪಡಿಸಲಾಯಿತು.
ವಿವಿಧ ರಾಗಗಳ ಗೀತೆಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ದಾಖಲಿಸಲಾಯಿತು. ರೆಕಾರ್ಡ್ ಸಂಸ್ಥೆ ದಕ್ಷಿಣ ಏಷ್ಯಾ ಪ್ರಬಂಧಕ ಮನೀಶ್ ಬಿಶ್ನೋಯಿ ವಿವಿಧ ರಾಗಗಳ ಸಂಯೋಜನೆ ಮೂಲದ ಹಾಡಿದ ವಂದೇ ಮಾತರಂ ಗೀತೆಯನ್ನು ಹೊಸ ವಿಶ್ವದಾಖಲೆ ಎಂದು ಘೋಷಿಸಿದರು.
undefined
ಭಾರತದ 16 ರಾಜ್ಯಗಳಿಂದ ಸುಮಾರು 183 ಮಂದಿ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಲ್ಲಿಆಯ್ದ 12 ತಂಡಗಳು ವಿವಿಧ ರಾಗಗಳಲ್ಲಿ ಸಂಯೋಜಿಸಿದ ವಂದೇ ಮಾತರಂ ಗೀತೆಯನ್ನು ಹಾಡಿದರು. ಇಂತಹ ಕಾರ್ಯಕ್ರಮ ಪ್ರಪ್ರಥಮ ಬಾರಿಗೆ ನಡೆದಿದ್ದು ಇದೊಂದು ದಾಖಲೆ ಎನಿಸಿಕೊಂಡಿತು.
ಇದೇ ಸಂದರ್ಭದಲ್ಲಿ ವಂದೇ ಮಾತರಂ ಗೀತೆಗೆ ಸಂಗೀತ ಸಂಯೋಜನೆ ಮಾಡಿ, ಅದನ್ನೊಂದು ಕಿರುಚಿತ್ರವನ್ನಾಗಿ ಚಿತ್ರೀಕರಿಸುವ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆ ವಿಜೇತರಿಗೆ ಉಡುಪಿ ಶಾಸಕ ರಘುಪತಿ ಭಟ್ ಬಹುಮಾನಗಳನ್ನು ವಿತರಿಸಿದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ದ. ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಸಂವೇದನಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಮಲ್ಪೆ ಮುಂತಾದವರಿದ್ದರು.
ಚಿರುಚಿತ್ರ ಸ್ಪರ್ಧೆಯಲ್ಲಿ ಪುತ್ತೂರು ಜಗದೀಶ್ ಅವರಿಗೆ ಪ್ರಥಮ ಬಹುಮಾನ 2 ಲಕ್ಷ ರು., ಕೊಪ್ಪದ ವಿನಯ ಕಿರಣ್ ಶಿವಾನಿ ಅವರಿಗೆ ದ್ವಿತೀಯ ಬಹುಮಾನ 1 ಲಕ್ಷ ರು. ಹಾಗೂ ಸೌಮ್ಯ ಭಟ್ ಕಟೀಲ್ ಅವರಿಗೆ ಉತ್ತಮ ಸಿನೆಮಾ ಫೊಟೋಗ್ರಫಿ, ಮಾನಸ ಕೇರಳ ಅವರಿಗೆ ಬೆಸ್ಟ್ ಟ್ಯೂನ್ ಮತ್ತು ಶಿವಾನಿ ಕೊಪ್ಪ ಅತೀ ಹೆಚ್ಚು ಯೂಟ್ಯೂಬ್ ವೀಕ್ಷಣೆಗೆ ತಲಾ 10 ಸಾವಿರ ರೂ. ಬಹುಮಾನ ಪಡೆದರು.