ವಾಜಪೇಯಿ ವಿಶ್ವದ ಸರ್ವಶ್ರೇಷ್ಠ ಸಂಸದೀಯ ಪಟು

By Kannadaprabha News  |  First Published Dec 27, 2022, 5:42 AM IST

ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿರವರು ಉತ್ತಮ ವಾಗ್ಮೀಯ ಗುಣಗಳನ್ನು ಹೊಂದಿದ ಕವಿ, ನೇತಾರ, ಅದ್ವೀತಿಯ ಸಂಸದೀಯ ಪಟುವಾಗಿ ಮೂರು ಬಾರಿ ಪ್ರಧಾನಿಗಳಾಗಿ ಕಾರ್ಯನಿರ್ವಹಿಸಿ, ವಿಶ್ವದ ಸರ್ವಶ್ರೇಷ್ಠ ಸಂಸದೀಯ ಪಟುವಾಗಿದ್ದರು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಪ್ರಸಾದ್‌ ತಿಳಿಸಿದರು.


  ತುಮಕೂರು :  ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿರವರು ಉತ್ತಮ ವಾಗ್ಮೀಯ ಗುಣಗಳನ್ನು ಹೊಂದಿದ ಕವಿ, ನೇತಾರ, ಅದ್ವೀತಿಯ ಸಂಸದೀಯ ಪಟುವಾಗಿ ಮೂರು ಬಾರಿ ಪ್ರಧಾನಿಗಳಾಗಿ ಕಾರ್ಯನಿರ್ವಹಿಸಿ, ವಿಶ್ವದ ಸರ್ವಶ್ರೇಷ್ಠ ಸಂಸದೀಯ ಪಟುವಾಗಿದ್ದರು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಪ್ರಸಾದ್‌ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಅಟಲ್‌ ಬಿಹಾರಿ ವಾಜಪೇಯಿರವರ 98ನೇ ಜನ್ಮದಿನದ ಸುಶಾಸನ ದಿನ (ಉತ್ತಮ ಆಡಳಿತ ದಿನ)ವಾಗಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು.

Tap to resize

Latest Videos

1951ರಲ್ಲಿ ಜನಸಂಘದ ಪ್ರಾರಂಭದ ಕಾಲಘಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ನಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು, 1975ರಲ್ಲಿ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಒಂದೂವರೆ ವರ್ಷ ಾರಾಗೃಹವಾಸ ಅನುಭವಿಸಿದ್ದರು. 1980ರಲ್ಲಿ ಬಿಜೆಪಿ ಆರಂಭಗೊಂಡ ನಂತರ ಪಕ್ಷದ ವಿವಿಧ ಹುದ್ದೆಗಳಲ್ಲಿ ಪಕ್ಷ ಸಂಘಟನೆ ಅವಿರತವಾಗಿ ಕಾರ್ಯನಿರ್ವಹಿಸಿದ್ದರು. ವಾಜಪೇಯಿ, ಎಲ್‌.ಕೆ. ಅಡ್ವಾಣಿಯವರು ಜೋಡೆತ್ತುಗಳಾಗಿ ಪಕ್ಷ, ದೇಶದ ಸಮಗ್ರ ಅಭಿವೃದ್ಧಿಗೆ ಕಟಿಬದ್ಧರಾಗಿದ್ದರು ಎಂದರು.

ವಾಜಪೇಯಿರವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿ, ಸರಳ ನಡವಳಿಕೆಯಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ದೇಶದ 23 ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿ 1996ರಲ್ಲಿ 13 ದಿನಗಳ ಅವಧಿಗೆ 1998 ರಿಂದ 1999 ರವರೆಗೆ ಹನ್ನೊಂದು ತಿಂಗಳ ಅವಧಿ ಮತ್ತು 1999 ರಿಂದ 2004ರವರೆಗೆ 5 ವರ್ಷಗಳ ಪೂರ್ಣಾವಧಿಗೆ ಭಾರತದ ಪ್ರಧಾನ ಮಂತ್ರಿಗಳಾಗಿ ದೇಶವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದರು. 50 ವರ್ಷಗಳ ಕಾಲ ಸುದೀರ್ಘವಾಗಿ ಸಂಸದೀಯ ಪಟುವಾಗಿ 8 ಬಾರಿ ಲೋಕಸಭೆ ಹಾಗೂ 2 ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿ ಉತ್ತಮ ಕವಿ, ಪತ್ರಕರ್ತ, ಚಿಂತಕ, ದಾರ್ಶನಿಕ ರಾಜಕಾರಣಿಯಾಗಿದ್ದರು. ಇವರಿಗೆ 1992ರಲ್ಲಿ ಪದ್ಮವಿಭೂಷಣಾ ಪ್ರಶಸ್ತಿ ಮತ್ತು 2015ರಲ್ಲಿ ಭಾರತರತ್ನವನ್ನು ನೀಡಿ ಭಾರತ ಸರ್ಕಾರ ಗೌರವಿಸಿರುವ ಬಗ್ಗೆ ಎಸ್‌.ಶಿವಪ್ರಸಾದ್‌ ವಿವರಿಸಿದರು.

ವೇದಿಕೆಯಲ್ಲಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಜಿಲ್ಲಾ ವಕ್ಫ್ರ್‍ ಬೋರ್ಡ್‌ ಉಪಾಧ್ಯಕ್ಷ ಹಾಗೂ ತುಮಕೂರು ನಗರ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಶಬ್ಬೀರ್‌ ಅಹಮ್ಮದ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಟಿ.ವೈ.ಯಶಸ್‌, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಿ.ಎಲ್‌.ಸೌಮ್ಯಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಹಲವಾರು ಕಾರ್ಯಕರ್ತರು ನಾರಾಯಣ ನೇತ್ರಾಲಯ ಮತ್ತು ಡಾ. ರಾಜ್‌ಕುಮಾರ್‌ ನೇತ್ರದಾನ ಕೇಂದ್ರಕ್ಕೆ ತಮ್ಮ ಕಣ್ಣುಗಳನ್ನು ನೇತ್ರದಾನ ಮಾಡುವ ಬಗ್ಗೆ ನೊಂದಾವಣಿ ಮಾಡಿಸಿದರು.

ಸಭೆಯಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರಾದ ಕೊಪ್ಪಳ್‌ ನಾಗರಾಜು, ನಂಜುಂಡಸ್ವಾಮಿ, ಡಾ.ಫರ್ಜಾನ ರಹೀಂಜೀ, ವಕೀಲೆ ಕೆ.ಪಿ.ಮಮತ, ಜಿ.ಎಸ್‌.ಮಂಜುನಾಥ್‌, ಚನ್ನಬಸಪ್ಪ ಪಟ್ಟಣಶೆಟ್ಟಿ, ಎಸ್‌.ಶಿವರಾಜು, ವಿನಯ್‌ಅದ್ವೈತ, ಮಂಜುನಾಥ ಗುಬ್ಬಿಹೊಸಹಳ್ಳಿ, ಅಕ್ಷಯಚೌದರಿ, ವಿ.ರಕ್ಷಿತ್‌, ಕೆ.ಎಸ್‌.ದರ್ಶನ್‌, ರಫೀಕ್‌ಅಹಮ್ಮದ್‌, ಜೆ.ಜಗದೀಶ್‌, ಹೆಚ್‌.ಆರ್‌.ವಿಶ್ವನಾಥ್‌, ಕೆ.ಎಸ್‌.ಚೇತನ್‌, ವೆಂಕಟೇಶ್‌, ಕೆ.ಶಂಕರ್‌, ಕೆ.ಎಸ್‌.ಕುಮಾರ್‌ ಮುಂತಾದವರು ಭಾಗವಹಿಸಿದ್ದರು.

ಬಿಜೆಪಿ ತುಮಕೂರು ಜಿಲ್ಲಾ ಸಾಮಾಜಿಕ ಜಾಲತಾಣದ ಸಹಸಂಚಾಲಕಿ ಶಕುಂತಲಾ ನಟರಾಜ್‌ ವಂದೇ ಮಾತರಂ ಗೀತೆ ಹಾಡಿದರು, ತುಮಕೂರು ನಗರ ಮಂಡಲ ಉಪಾಧ್ಯಕ್ಷ ಎಚ್‌.ಎಸ್‌.ವಿರೂಪಾಕ್ಷಪ್ಪ ಸ್ವಾಗತಿಸಿದರೆ, ತುಮಕೂರು ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್‌ ಜಿ.ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು. ತುಮಕೂರು ನಗರ ಯುವ ಮೋರ್ಚಾ ಅಧ್ಯಕ್ಷ ನಾಗೇಂದ್ರಚನ್ನಬಸಪ್ಪ ವಂದಿಸಿದರು.

ಭಾರತ ಕಂಡ ಅತ್ಯಂತ ಶ್ರೇಷ್ಠ, ಆದರ್ಶಪೂರ್ಣ ಆಡಳಿತದಿಂದ ಜನರ ಮಚ್ಚುಗೆಗೆ ಅಟಲ್‌ ಬಿಹಾರಿ ವಾಜಪೇಯಿ ಪಾತ್ರರಾಗಿ, ಅಭಿವೃದ್ಧಿಯ ಬುನಾದಿ ಹಾಕಿದ್ದರು. ಅವರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು.

ಟಿ.ಎಚ್‌.ಹನುಂತರಾಜು ಅಧ್ಯಕ್ಷ, ತುಮಕೂರು ನಗರ ಮಂಡಲ

click me!