ಊರಗೌಡ್ತಿಯ ಶವಸಂಸ್ಕಾರಕ್ಕೆ ಬಂದವರಿಗೆ ಶಾಕ್: ಶವಯಾತ್ರೆ ವೇಳೆ ಸಿಡಿದ ಪಟಾಕಿಯಿಂದ ಭಾರೀ ಅಗ್ನಿ ಅವಘಡ

By Govindaraj S  |  First Published Dec 27, 2022, 12:30 AM IST

ಸಾವನ್ನಪ್ಪಿದ್ದ ಊರ ಗೌಡ್ತಿನ ಶವ ಸಂಸ್ಕಾರಕ್ಕೆ ಬಂದಿದ್ದ ಗ್ರಾಮಸ್ಥರ ಬೈಕ್, ಗುಡಿಸಲು ಬೆಂಕಿ ಹೊತ್ತಿ ಉರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅಂತಿವ ಶವಯಾತ್ರೆ ವೇಳೆ ಸಿಡಿಸಿದ ಪಟಾಕಿ ಕಿಡಿಯಿಂದ ಹೊತ್ತಿಕೊಂಡ ಬೆಂಕಿ 6 ಬೈಕ್, ಗುಡಿಸಲು, ದವಸ ಧಾನ್ಯಗಳನ್ನ ಸುಟ್ಟು ಭಸ್ಮ ಮಾಡಿದೆ‌.


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಡಿ.27): ಸಾವನ್ನಪ್ಪಿದ್ದ ಊರ ಗೌಡ್ತಿನ ಶವ ಸಂಸ್ಕಾರಕ್ಕೆ ಬಂದಿದ್ದ ಗ್ರಾಮಸ್ಥರ ಬೈಕ್, ಗುಡಿಸಲು ಬೆಂಕಿ ಹೊತ್ತಿ ಉರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅಂತಿವ ಶವಯಾತ್ರೆ ವೇಳೆ ಸಿಡಿಸಿದ ಪಟಾಕಿ ಕಿಡಿಯಿಂದ ಹೊತ್ತಿಕೊಂಡ ಬೆಂಕಿ 6 ಬೈಕ್, ಗುಡಿಸಲು, ದವಸ ಧಾನ್ಯಗಳನ್ನ ಸುಟ್ಟು ಭಸ್ಮ ಮಾಡಿದೆ‌.

Latest Videos

undefined

ಊರಗೌಡ್ತಿಯ ಅಂತ್ಯ ಸಂಸ್ಕಾರಕ್ಕೆ ಬಂದವರಿಗೆ ಶಾಕ್: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು ಆರು ಸೈಕಲ್ ಮೋಟಾರ್  ಸಂಪೂರ್ಣ ಸುಟ್ಟು ಕರಕಲಾಗಿವೆ. ಜಯನಗೌಡ ಪಾಟೀಲ ಇವರಿಗೆ ಸೇರಿದ ಗುಡಿಸಲು ಇದಾಗಿದ್ದು, ತಡವಲಗಾ ಗ್ರಾಮದ ಗೌಡರ ಮನೆತನದ ಸುಭದ್ರಾಗೌಡ್ತಿ ದೇವಪ್ಪಗೌಡ ಪಾಟೀಲ ಎಂಬುವವರು ಇಂದು ಬೆಳಗ್ಗೆ ನಿಧನ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಬಂಧುಗಳು ಬಂದಿದ್ದರು. ಅಂತ್ಯಸಂಸ್ಕಾರ ಸಮಯದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದೆ. 

6 ಬೈಕ್ ಭಸ್ಮ, ಗುಡಿಸಲು ಸುಟ್ಟು ಕರಕಲು: ಪಟಾಕಿ ಕಿಡಿಯಿಂದ ಹೊತ್ತಿದ ಬೆಂಕಿಯಿಂದಾಗಿ ಸುಮಾರು ಆರು ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನಗಳು, ಹಾಗೂ ಗುಡಿಸಲಿನಲ್ಲಿ ಇದ್ದ ಹತ್ತು ಚೀಲ ತೋಗರಿ ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.

Vijayapura : 4 ವರ್ಷದ ಮೇಲ್ಸೇತುವೆ ಕಾಮಗಾರಿ ಪೂರ್ಣ: ನಿಟ್ಟುಸಿರು ಬಿಟ್ಟ ಇಬ್ರಾಹಿಂಪುರ ಜನ

ಅಗ್ನಿ ನಂದಿಸಲು ಹರಸಾಹಸ: ಸುದ್ದಿ ತಿಳಿದ ತಕ್ಷಣ ಇಂಡಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಬಿ ಕೆ ಚನ್ನಾ, ಹಣಮಂತ ಮಡಿವಾಳರ, ಎಮ್ ಎನ್ ಬಂಥನಾಳ, ತುಕಾರಾಮ ರಾಠೋಡ ಅವರ ನೇತೃತ್ವದಲ್ಲಿ ಸಿಬ್ಬಂದಿ ಆಗಮಿಸಿ ಸುಮಾರು ಒಂದು ಗಂಟೆಯ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟರು ಹಾಗೂ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಹೇಶ್ ರಾಠೋಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

click me!