ಖಂಡ್ರೆ ಸಾಹೇಬ್ರೇ ಇಲ್ನೋಡಿ.. ಉತ್ತರಕನ್ನಡದ ಅರಣ್ಯಕ್ಕೆ ಸಚಿವ ಮಂಕಾಳು ವೈದ್ಯರೇ ನುಂಗುಬಾಕ; ದೂರು ಕೊಟ್ರೂ ಅಲ್ಲಾಡದ ಅಧಿಕಾರಿಗಳು!

Published : Mar 01, 2025, 02:48 PM ISTUpdated : Mar 01, 2025, 02:51 PM IST
ಖಂಡ್ರೆ ಸಾಹೇಬ್ರೇ ಇಲ್ನೋಡಿ.. ಉತ್ತರಕನ್ನಡದ ಅರಣ್ಯಕ್ಕೆ ಸಚಿವ ಮಂಕಾಳು ವೈದ್ಯರೇ ನುಂಗುಬಾಕ; ದೂರು ಕೊಟ್ರೂ ಅಲ್ಲಾಡದ ಅಧಿಕಾರಿಗಳು!

ಸಾರಾಂಶ

ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿರುದ್ಧ ಅರಣ್ಯ ಒತ್ತುವರಿ ಆರೋಪ ಕೇಳಿಬಂದಿದೆ. ಭಟ್ಕಳದ ಬೈಲೂರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಆರ್.ಟಿ.ಐ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಚಿವರು ತಮ್ಮ ಪ್ರಭಾವ ಬಳಸಿ ಬೇರೆಯವರ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರವಾರ (ಮಾ.1): ಉಸ್ತುವಾರಿ ಸಚಿವರಿಂದಲೇ ಅರಣ್ಯ ಒತ್ತುವರಿ ಅಧಿಕಾರ ದುರುಪಯೋಗ ಆರೋಪ ಕೇಳಿ ಬಂದಿದೆ. ಸಚಿವ ಮಂಕಾಳ ವೈದ್ಯ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಹಾಗೂ ರಾಜ್ಯ ಮುಖ್ಯ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ. ಭಟ್ಕಳದ ಆರ್‌ಟಿಐ ಕಾರ್ಯಕರ್ತರಾದ ಶಂಕರ್ ನಾಯ್ಕ , ನಾಗೇಂದ್ರ ನಾಯ್ಕ, ನಾಗೇಶ್ ನಾಯ್ಕ ಎಂಬವರಿಂದ ದೂರು ದಾಖಲಾಗಿದೆ. ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗದ ಸರ್ವೆ ನಂ- 600 ರಲ್ಲಿ ಒತ್ತುವರಿ ನಡೆದಿದೆ ಎಂದು ಆರೋಪಿಸಲಾಗಿದೆ. ಅಕ್ರಮವಾಗಿ ಮಣ್ಣು ತೆಗೆದು ಒಂದು ಎಕರೆ ಪ್ರದೇಶ ಒತ್ತುವರಿ ಮಾಡಿರುವ ಬಗ್ಗೆ ಸಚಿವ ಮಂಕಾಳು ವೈದ್ಯ ವಿರುದ್ಧ ಆರೋಪ ಕೇಳಿಬಂದಿದೆ.

ಭಟ್ಕಳ ಮಾವಳ್ಳಿ ಹೋಬಳಿಯ ಬೈಲೂರಿನಲ್ಲಿರೋ ತಮ್ಮ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. 2024ರ ಮೇ 18 ರಂದು ಅರಣ್ಯ ಇಲಾಖೆಯ ಜಾಗ ಒತ್ತುವರಿ ಮಾಡಿ ಮಂಕಾಳು ವೈದ್ಯ ಮಣ್ಣು ತೆಗೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಾದರೂ ಸಚಿವರ ಹೆಸರು ಕೈಬಿಟ್ಟು ಬೇರೆಯವರ ಹೆಸರಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಬಡವರ ಅರಣ್ಯ ಅತಿಕ್ರಮಣ ಕೇಸ್‌ನಲ್ಲಿ ಕ್ಷಣಾರ್ಧದಲ್ಲಿ ಕ್ರಮ ತೆಗೆದುಕೊಳ್ಳುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಈ ಕೇಸ್‌ನ ಬಗ್ಗೆ ಇನ್ನೂ ಏನನ್ನೂ ಮಾಡಿಲ್ಲ ಅನ್ನೋದು ಅಚ್ಚರಿಯ ವಿಚಾರ.

ಮಂಕಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬೇರೆಯವರ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಚಿವರು ತಮ್ಮ ಪ್ರಭಾವ ಬಳಸಿ ತಮ್ಮ ಹೆಸರನ್ನು ತೆಗೆಸಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

 

ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಿ ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ: ಸಚಿವ ಮಂಕಾಳು ವೈದ್ಯ

ಅರಣ್ಯ ಇಲಾಖೆಯ ಎಸಿಎಫ್ ಗಿರೀಶ್ ಪಿ. ಕೂಡಾ ಸುಳ್ಳು ದಾಖಲೆ ಸೃಷ್ಠಿಗೆ ಸಾಥ್ ನೀಡಿದ್ದಾರೆ ಎಂದು ದೂರಲಾಗಿದೆ. ಮಂಕಾಳು ವೈದ್ಯ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಅರಣ್ಯ ಮುಖ್ಯಾಧಿಕಾರಿ, ರಾಜ್ಯಪಾಲರಿಗೆ ದೂರು ನೀಡಲಾಗಿದ್ದು, ಇದರೊಂದಿಗೆ ಸಚಿವರ ವಿರುದ್ಧ ನ್ಯಾಯಾಲಯದಲ್ಲೂ ಪ್ರತ್ಯೇಕ ದೂರು ದಾಖಲು ಮಾಡಲಾಗಿದೆ.

ಬಾವಿ ತೋಡುವ ಕೆಲಸವನ್ನು ಕೈಬಿಡಿ: ಗೌರಿ ನಾಯ್ಕ್ ಅವರಿಗೆ ಮನವಿ ಮಾಡಿದ ಸಚಿವ ಮಂಕಾಳು ವೈದ್ಯ!

PREV
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!