ಶಿರಸಿಯಲ್ಲಿ ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿದು ಕೂತಿದ್ದ ಬಾಲೆ; ಕಾಪಾಡಿದ ರಿಯಲ್‌ ಹೀರೋ

Published : Mar 16, 2026, 06:24 PM IST
 Girl fell into well

ಸಾರಾಂಶ

Girl fell into well: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದಿದೆ. ಆ ಬಳಿಕ ಆ ಮಗುವನ್ನು ಮೇಲಕ್ಕೆತ್ತಿ ಬಚಾವ್‌ ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.

ಉತ್ತರ ಕನ್ನಡ: ಬಾವಿಗೆ ಬಿದ್ದ ಎರಡು ವರ್ಷದ ಮಗು ಬಚಾವ್‌ ಆದ ಘಟನೆಯು ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಜೀವದ ಹಂಗನ್ನು ತೊರೆದು ಬಾವಿಗಿಳಿದು ಬಾಲೆಯನ್ನು ಮೇಲಕ್ಕೆತ್ತಿ ಬಚಾವ್‌ ಮಾಡಿದ್ದಾರೆ.

ಕಸ್ತೂರಬಾ ನಗರದಲ್ಲಿ ಘಟನೆ

ಇಂದು ಮಾರ್ಚ್‌ 16ರಂದು ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಕಸ್ತೂರಬಾ ನಗರದಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಕಾಪಾಡಿದ ವ್ಯಕ್ತಿಗೆ ನನ್ನ ಪಾಲಿನ ದೇವರೆಂದು ಆ ಬಾಲೆಯ ಅಜ್ಜಿ ಹೇಳಿದ್ದಾರೆ.

ಬಾಲಕಿಯನ್ನು ಕಾಪಾಡಿದವರು ಏನಂದ್ರು?

ಆ ಕ್ಷಣದಲ್ಲಿ ಯಾರೇ ಬಿದ್ದರೂ ಇದನ್ನೆ ಮಾಡುತ್ತಿದ್ದೆ ಎಂದು ಬಾಲೆಯನ್ನು ಕಾಪಾಡಿದ ಪಯಾಜ್ ಚೌಟಿ ಅವರು ಹೇಳಿದ್ದಾರೆ..

ಏನಾಯ್ತು?

ಮನೆಯಲ್ಲಿ ಮಗು ಭುವಿ (2) ಯನ್ನು ಊಟಕ್ಕಾಗಿ ಹುಡುಕುತ್ತಿದ್ದರು. ಎಷ್ಟು ಹುಡುಕಿದರೂ ಕೂಡ ಮಗು ಸಿಗಲಿಲ್ಲ. ಅಜ್ಜಿ ಸಂಶಯಗೊಂಡು ಮನೆಯ ಹಿಂದಿನ ಬಾವಿ ಹತ್ತಿರ ಹೋದಾಗ ಮಗು ಅಳುವಿನ ಶಬ್ದ ಕೇಳಿಸಿದೆ. ಬಾವಿ ಬಳಿ ಹೋಗಿ ನೋಡಿದಾಗ ಮಗು ಬಾವಿಯಲ್ಲಿ ಬಿದ್ದು ಪಂಪ್‌ಗೆ ಅವಡಿಸಲಾಗಿದ್ದ ಪೈಪ್ ಹಿಡಿದುಕೊಡು ಒಂದೇ ಸಮನೆ ಅಳುತ್ತಿದ್ದಳು. ಈ ಸುದ್ದಿ ತಕ್ಷಣಕ್ಕೆ ಅಕ್ಕಪಕ್ಕದಲ್ಲಿದ್ದವರಿಗೆ ಗೊತ್ತಾಗಿದೆ. ಆ ಮನೆಯ ಹತ್ತಿರದಲ್ಲಿದ್ದ ಸಾರಿಕಾ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಪಯ್ಯು ಚವಟಿಯವರ ಮನೆಗೂ ತಲುಪಿತು. ಇನ್ನೇನು ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದ ಪಯ್ಯುರವರು ಒಂದು ಕ್ಷಣವೂ ತಡಮಾಡದೇ ಬಾವಿ ಕಡೆಗೆ ಓಡಿಯೇ ಬಿಟ್ಟರು

ಬದುಕುಳಿದ ಮಗು

ಬಾಲೆಯ ಕುಟುಂಬದವರ ಕೂಗಾಟದ ನಡುವೆಯೇ ಪಯ್ಯುರವರು ಜನರ ಸಹಾಯದಿಂದ ಬಾವಿಗಿಳಿದು ಮಗುವನ್ನು ಜೀವಂತವಾಗಿ ಮೇಲಕ್ಕೆ ತರಲು ಯಶಸ್ವಿಯಾದರು.

ಆ ಮಗುವನ್ನು ಕಾಪಾಡಿದ್ದಕ್ಕಾಗಿ ಆ ವ್ಯಕ್ತಿಯೇ ನನ್ನ ದೇವರು ಎಂದು ಅಜ್ಜಿ ಹೇಳಿದ್ದಾರೆ. ಬಾಲಕಿಯನ್ನು ಕಾಪಾಡಿದ ವ್ಯಕ್ತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

 

PREV
Read more Articles on
click me!

Recommended Stories

ಮೂಡುಬಿದಿರೆ ಪೊಲೀಸಪ್ಪನ ಪೋಲಿ ಆಟ; ಗಂಡನ ಬಿಡುಗಡೆಗೆ 25 ಲಕ್ಷ ಕೊಡಿ, ಇಲ್ಲವೇ ನನ್ನೊಂದಿಗೆ ಮಲಗು ಎನ್ನುವ ಸಂದೇಶ!
ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿದ ಕೈನಲ್ಲೇ ಇಫ್ತಿಯಾರ್‌ಗೆ ಆಹಾರ ನೀಡಿದ ಟ್ರಾಫಿಕ್ ಪೊಲೀಸ್!